ಸಾಮರ್ಥ್ಯ ಇರೋರು ಪೊಲಿಟಿಕ್ಸ್​​​​ಗೆ ಬರಬೇಕು! ಯಾರ ಮಕ್ಕಳು ಎಂಬುದು ಪ್ರಶ್ನೆಯೇ ಅಲ್ಲ! ಪರೋಕ್ಷವಾಗಿ ನಿಖಿಲ್ ಬೆಂಬಲಿಸಿದ ನಟ ಉಪೇಂದ್ರ!!

ಒಂದೆಡೆ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಕಣಕ್ಕಿಳಿದಿರುವ ಮೈತ್ರಿ ಸರ್ಕಾರದ ಅಭ್ಯರ್ಥಿ ವಿರುದ್ಧ ಹಲವರು ಕುಟುಂಬ ರಾಜಕಾರಣದ ಆರೋಪ ಮಾಡಿದ್ರೆ. ಇತ್ತ ಸ್ಯಾಂಡಲವುಡ್​ನ ರಿಯಲ್​ ಸ್ಟಾರ್​ ಖ್ಯಾತಿಯ ಉಪೇಂದ್ರ ನಿಖಿಲ್​ ಬೆಂಬಲಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಯಾರ ಮಗ ಅನ್ನೋದಕ್ಕಿಂತ ಅವರಿಗೆ ಯೋಗ್ಯತೆ ಇದ್ಯಾ ಅನ್ನೋದು ಮುಖ್ಯವಾಗುತ್ತೆ ಅನ್ನೋ ಮೂಲಕ ಉಪೇಂದ್ರ ನಿಖಿಲ್ ಕುಮಾರಸ್ವಾಮಿಗೆ ಪರೋಕ್ಷ ಬೆಂಬಲ ನೀಡಿದ್ದಾರೆ.

ರಾಯಚೂರಿನಲ್ಲಿ ಪ್ರಜಾಕೀಯ ಪಕ್ಷದ ಪರ ಪ್ರಚಾರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ನಟ ಹಾಗೂ ಪ್ರಜಾಕೀಯ ಪಕ್ಷದ ಸಂಸ್ಥಾಪಕ ಉಪೇಂದ್ರ. ಚುನಾವಣೆ ನಿಲ್ಲಲು ಯೋಗ್ಯತೆ ಬೇಕು. ಯಾರ ಮಗ,ಮಗಳು ಅನ್ನೋದು ಮುಖ್ಯವಲ್ಲ. ಕೆಪ್ಯಾಸಿಟಿ ಇರುವ ಯಾರಾದ್ರೂ ರಾಜಕೀಯಕ್ಕೆ ಬರಬಹುದು ಎನ್ನುವ ಮೂಲಕ ನಿಖಿಲ್ ಬೆಂಬಲಿಸಿದ್ದಾರೆ.


ಉಪೇಂದ್ರ ಈ ಹೇಳಿಕೆ ನಾನಾ ಆಯಾಮಗಳಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ. ಸಿನಿಮಾ ರಂಗಕ್ಕೆ ಹಿರಿಯರಂತಿದ್ದ ನಟ ಅಂಬರೀಶ್​ ನಿಧನದ ನಂತರ ಸುಮಲತಾ ಚುನಾವಣೆಗೆ ಸ್ಪರ್ಧಿಸುವುದಾಗಿ ಪ್ರಕಟಿಸಿದಾಗಿನಿಂದ ಇಲ್ಲಿಯವರೆಗೂ ಮಂಡ್ಯದಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆದಿದ್ದರೂ, ಉಪೇಂದ್ರ ಯಾವುದಕ್ಕು ಪ್ರತಿಕ್ರಿಯಿಸಿರಲಿಲ್ಲ. ಇದೀಗ ಈ ವಿಚಾರದಲ್ಲಿ ಮೌನ ಮುರಿದಿರುವ ಉಪೇಂದ್ರ ಕುಟುಂಬ ರಾಜಕಾರಣ ಎಂಬುದಕ್ಕಿಂತ ಇಲ್ಲಿ ಯೋಗ್ಯತೆ ಮುಖ್ಯವಾಗುತ್ತದೆ ಎಂದಿದ್ದಾರೆ.