ರಾಜ್​ ಕುಟುಂಬದ ಮತ್ತೊಂದು ಕುಡಿ ಚಿತ್ರರಂಗಕ್ಕೆ – ಯಾರು ಅಂದ್ರಾ? ನೀವೇ ನೋಡಿ…!

Suraj Kumar Entry To Film Industry From Rajkumar Family.
Suraj Kumar Entry To Film Industry From Rajkumar Family.

ಡಾ ರಾಜ್​ ಫ್ಯಾಮಿಲಿ ಸಿನಿಮಾರಂಗದಲ್ಲೇ ಸಕ್ರೀಯವಾಗಿರೋ ಕುಟುಂಬ.

ad

ಇದೀಗ ದೊಡ್ಮನೆಯ ಮೊಮ್ಮಗ ಧೀರೇನ್ ರಾಮ್ ಕುಮಾರ್ ಸಿನಿಮಾರಂಗಕ್ಕೆ ಎಂಟ್ರಿಕೊಡೋಕೆ ಸಿದ್ದತೆ ಮಾಡಿಕೊಂಡಿರೋದು ನಿಮ್ಗೆ ಗೊತ್ತೇ ಇದೆ. ಈ ಮಧ್ಯೆ ಚಿತ್ರರಂಗದ ಸ್ಟಾರ್ ನಿರ್ದೇಶಕರು ರಾಮ್​​ಕುಮಾರ್​​ ಮಗನನ್ನು ಪರಿಚಯಿಸಲು ಸಜ್ಜಾಗ್ತಿದ್ದಾರೆ.  ಹೌದು ಇದೀಗ ಡಾ ರಾಜ್ ಕುಮಾರ್ ಫ್ಯಾಮಿಲಿಯಿಂದ ಹೊಸ ನಾಯಕ ಕನ್ನಡ ಸಿನಿಮಾರಂಗಕ್ಕೆ ಎಂಟ್ರಿ ಕೊಡೋಕೆ ಸಜ್ಜಾಗ್ತಿದ್ದಾರೆ. ಆ ನಟ ಯಾರು ಅಂದ್ರೆ ರಾಜ್​ ಅಳಿಯ ಅಂದ್ರೆ ಪಾರ್ವತಮ್ಮ ರಾಜ್ ಕುಮಾರ್ ಅವರ ಸಹೋದರ ಎಸ್ ಎ ಶ್ರೀನಿವಾಸ್ ಅವರ ಪುತ್ರ ಸೂರಜ್ ಕುಮಾರ್. ರಾಜ್​​ ಕುಮಾರ್​​ ಸೋದರ ಅಳಿಯನಾಗಿರುವ ಸೂರಜ್​​​ ಭರ್ತಿ ಆರಡಿ ಇದ್ದಾರೆ. ಕಮರ್ಷಿಯಲ್ ಹೀರೋಗೆ ಹೇಳಿ ಮಾಡಿಸಿದ ಫಿಟ್ ನೆಸ್, ಮಾಸ್ ಹೀರೋಗೆ ಬೇಕಿರುವ ಹೈಟು, ಸ್ಮಾರ್ಟ್​ನೆಸ್​​ ಈ ಎಲ್ಲಾ ಕ್ವಾಲಿಟಿ ಸೂರಜ್​​ ಬಳಿ ಎದ್ದು ಕಾಣ್ತಿದೆ.

ಸೂರಜ್ ಕುಮಾರ್ ಮೈಸೂರಿನಲ್ಲಿ ಡಿಗ್ರಿ ಮುಗಿಸಿ ಚಿತ್ರರಂಗಕ್ಕೆ ಬರುವ ತಯಾರಿ ಮಾಡಿಕೊಂಡಿದ್ದಾರೆ. ವಿಶೇಷ ಅಂದ್ರೆ ನೀನಾಸಂನಲ್ಲಿ ಅಭಿನಯದ ತರಬೇತಿ ಪಡೆದುಕೊಂಡಿರುವ ಸೂರಜ್​​ ಚೆನೈ ನಲ್ಲಿ ಡ್ಯಾನ್ಸ್ ಮತ್ತು ಫೈಟಿಂಗ್ ಟ್ರೈನಿಂಗ್ ಪಡೆದುಕೊಂಡಿದ್ದಾರೆ. ಸ್ಯಾಂಡಲ್​​ವುಡ್​ ಎಂಟ್ರಿಗೆ ಸಜ್ಜಾಗ್ತಿರೋ ಸೂರಜ್​​ಗೆ ಗೈಡ್​ ಮಾಡ್ತಿರೋದು ಯಾರು ಗೊತ್ತಾ? ಚಾಲೆಂಜಿಂಗ್​ ಸ್ಟಾರ್​ ದರ್ಶನ್​​. ನಟನೆಯ ಬೇಕಾಗಿರುವ ಹಲವು ಟಿಪ್ಸ್​​ ದಚ್ಚು ಕೊಡ್ತಿದ್ದಾರೆ. ಅಷ್ಟೇ ಅಲ್ಲ ಡಿ ಬಾಸ್​​ ಮಾರ್ಗದರ್ಶನದಲ್ಲಿ ಸೂರಜ್​​​ ತೆರೆ ಹಿಂದಿನ ಕೆಲಸವನ್ನು ಕಲಿತಿದ್ದಾರೆ. ದರ್ಶನ್ ಅಭಿನಯದ ಐರಾವತ ಹಾಗೂ ತಾರಕ್ ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕನಾಗಿ ಆಗಿ ಕೆಲಸ ಮಾಡಿದ್ದಾರೆ.

ಅಂದಹಾಗೆ ಸೂರಜ್​ ಈಗಾಗ್ಲೇ ಲುಕ್ ಟೆಸ್ಟ್ ಮಾಡಿಸಿದ್ದಾರೆ ಸೂರಜ್. ಬೇರೆ ಬೇರೆ ಕಾಸ್ಟ್ಯೂಮ್ಸ್ ನಲ್ಲಿ ಫೋಟೋ ಶೂಟ್ ಮಾಡಿಸಿದ್ದಾರೆ. ಗಡ್ಡ ಬಿಟ್ಟು, ಗಡ್ಡ ತೆಗದು ಹೀಗೆ ಬೇರೆ ಬೇರೆ ಲುಕ್​​ನಲ್ಲಿ ಫೋಟೋಶೂಟ್​​ ಮಾಡಿಸಿದ್ದಾರೆ. ಆರಡಿ ಹೈಟು ಮತ್ತು ಫಿಟ್ ಆಗಿರುವ ಸೂರಜ್ ಈ ಫೋಟೋಶೂಟ್​​ನಲ್ಲಿ ಪಕ್ಕಾ ಮಾಸ್ ಹೀರೋ ರೇಜ್​​ನಲ್ಲಿ ಕಂಗೊಳಿಸ್ತಿದ್ದಾರೆ. ಅಭಿನಯಕ್ಕೆ ಸ್ಕೋಪ್​​ ಇರೋ , ಫೀಲ್​ ಗುಡ್​​ ಕಥೆ ಇರುವ ಸಿನಿಮಾದ ಮೂಲಕ ಲಾಂಚ್​ ಆಗ್ಬೇಕು ಅನ್ನೋದು ಸೂರಜ್​​ ಕನಸು. ಅದಕ್ಕಾಗಿ ದೊಡ್ಮನೆ ಅಳಿಯ ಈಗಾಗ್ಲೇ ಹಲವು ಕಥೆಗಳನ್ನು ಕೇಳ್ತಿದ್ದಾರೆ. ಸ್ಯಾಂಡಲ್​​ವುಡ್​​ನ ಭವಿಷ್ಯದ ನಾಯಕ ನಟನಿಗೆ ನಮ್ಮ ಕಡೆಯಿಂದ್ಲೂ ಬೆಸ್ಟ್​ ವಿಶಸ್​​