ಬಿಕಿನಿಯಲ್ಲಿ ಕಿರಿಕ್ ಸುಂದರಿ! ಟಾಲಿವುಡ್ ತುಂಬ ಪೂಜಾ ಪೋಟೋದ್ದೆ ಸುದ್ದಿ!!

ಟಾಲಿವುಡ್ ಸಿನಿ ಅಂಗಳದಲ್ಲಿ ದೂಳೆಬ್ಬಿಸುತ್ತಿದೆ ನಟಿ ಪೂಜಾ ಹೆಗ್ಡೆ ಬಿಕಿನಿ ಫೋಟೋಗಳು. ಮೂಲತಃ ಕನ್ನಡದ ಹುಡುಗಿಯಾಗಿರುವ ಪೂಜಾ ಹೆಗ್ಡೆ ಈಗ ಟಾಲಿವುಡ್ ನಲ್ಲಿ ಮಿಂಚುತ್ತಿರುವ ನಂ1 ಸ್ಥಾನದಲ್ಲಿರುವ ನಟಿಯಾಗಿದ್ದಾರೆ. ಇವರ ಇತ್ತಿಚೇಗಿನ ಬಿಕಿನಿ ಫೋಟೋಗಳು ಈಗ ಎಲ್ಲೆಡೆ ವೈರಲ್ ಆಗುತ್ತಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಪೂಜಾ ಹೆಗ್ಡೆ ತಮ್ಮ ಖಾತೆಯಲ್ಲಿ ಚಿತ್ರವನ್ನು ಪೋಸ್ಟ್​ ಮಾಡಿದ್ದು ಪಡ್ಡೆ ಹುಡುಗರ ನಿದ್ದೆಯನ್ನು ಕೆಡಿಸುತ್ತಿದೆ.

 

ಸದ್ಯ ಮಹರ್ಷಿ ಚಿತ್ರದಲ್ಲಿ ಬ್ಯುಸಿಯಾಗಿರುವ ಪೂಜಾ ಹೆಗ್ಡೆ ಬೇಸಿಗೆಯ ಬಿಸಿಲಿನಿಂದ ಬಿಕಿನಿ ಮೊರೆ ಹೋಗಿದ್ದು. ಬಿಕಿನಿ ತೊಟ್ಟು ಫೋಟೋಗೆ ಪೋಸ್ ನೀಡಿದ್ದಾರೆ. ಇತ್ತೀಚೆಗಷ್ಟೆ ಫೆಮಿನಾ ವೆಡ್ಡಿಂಗ್​ ಟೈಮ್ಸ್​ನ ಮುಖಪುಟದ ಫೋಟೋಶೂಟ್​ಗೆ ಪೂಜಾ ಟೂ ಪೀಸ್​ನಲ್ಲಿ ಪೋಸ್ ಕೊಟ್ಟಿದ್ದಾರೆ.

ಕೆಲ ದಿನಗಳ ಹಿಂದೆ ಅಲ್ಲು ಅರ್ಜುನ್ ಅಭಿನಯದ ಡಿಜೆ ಸಿನಿಮಾದಲ್ಲಿ ಪೂಜಾ ಹೆಗ್ಡೆ ನಟಿಸಿದ್ದು. ಈಗ ಪುನಃ ತ್ರಿವಿಕ್ರಮ್​ ನಿರ್ದೇಶನದಲ್ಲಿ ಅಲ್ಲು ಅರ್ಜುನ್​ಗೆ ನಾಯಕಿಯಾಗಿ ಮತ್ತೊಂಮ್ಮೆ ಅಲ್ಲು ಅರ್ಜುನ್ ಗೆ ಜೋಡಿಯಾಗಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಇದಲ್ಲದೆ ಕಳೆದ ವರ್ಷ ಜೂನಿಯರ್​ ಎನ್​ಟಿಆರ್​ ಅಭಿನಯದ ‘ಅರವಿಂದ ಸಮೇತ ವೀರ ರಾಘವ’ ಚಿತ್ರದಲ್ಲಿಯೂ ಅಭಿನಯಿಸಿದ್ದರು. ಹಾಗೂ ರಾಮ್​ ಚರಣ್​,ಸಮಂತಾ ಅಭಿನಯದ ‘ರಂಗಸ್ಥಳಂ’ ಚಿತ್ರದಲ್ಲೂ ವಿಶೇಷ ಹಾಡಿಗೆ ಹೆಜ್ಜೆ ಹಾಕಿ ಟಾಲಿವುಡ್ ಅಭಿಮಾನಿಗಳನ್ನು ಕುಣಿಯುವಂತೆ ಮಾಡಿದ್ದರು.

ಸದ್ಯ ಮಹೇಶ್​ ಬಾಬು ಅಭಿನಯದ ‘ಮಹರ್ಷಿ’ ಚಿತ್ರದಲ್ಲೂ ನಾಯಕಿಯಾಗಿದ್ದು ಮೇ9ಕ್ಕೆ ಚಿತ್ರ ತೆರೆ ಕಾಣಲಿದೆ. ನಂತರ ಪ್ರಭಾಸ್​ ಜತೆ ಸಹ ಒಂದು ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ. ಒಟ್ಟಾರೆ ಟಾಲಿವುಡ್​ನಲ್ಲಿ ಸಾಲು ಸಾಲು ಸಿನಿಮಾಗಳು ಪೂಜಾ ಕೈನಲ್ಲಿದೆ.
ಸದ್ಯ ಟಾಲಿವುಡ್ ಸಿನಿ ಮಂದಿಯ ಬಾಯಲ್ಲಿ ಪೂಜಾ ಹೆಗ್ಡೆಯ ಬಿಕಿನಿ ಪೋಟೊ ಸುದ್ದಿಯ ಬಗೆಗೆ ಬಾರಿ ಚರ್ಚೆ ನಡೆಯುತ್ತಿದೆ.