ಕೋಟ್ಯಾಧೀಶ ಬಿರ್ಲಾ ಕುಟುಂಬ ಕುಡಿ ಪಾಪ್​ ಲೋಕದ ಟಾಪ್​ ಸಿಂಗರ್​!!

ಈ ಪರಿ ಹಾಡು ಹೇಳಿ ಕುಣಿಯುತ್ತಿರೋ ಚೆಲುವೆ ಅನನ್ಯಾ ಬಿರ್ಲಾ, ವಯಸ್ಸು 24, ವೃತ್ತಿ ಗಾಯನ ಮತ್ತು ಬ್ಯುಸಿನೆಸ್. ಬಹುಶ: ಇಷ್ಟು ಹೇಳಿದ್ರೆ ತಿಳಿಯುತ್ತೋ ಇಲ್ವೋ, ಆದರೆ ಬಿಲಿಯನೇರ್ ಬ್ಯುಸಿನೆಸ್‌ಮೆನ್ ಕುಮಾರಮಂಗಲಂ ಮಗಳು ಅಂದರೆ ಥಟ್ಟನೆ ಗೊತ್ತಾಗುತ್ತೆ.

ಹೌದು ಈಕೆ ಆದಿತ್ಯಾ ಬಿರ್ಲಾ ಎಂಬ ಬಹುರಾಷ್ಟ್ರೀಯ ಸಂಘಟಿತ ವ್ಯಾಪಾರ ಸಂಸ್ಥೆಯ ಚೇರ್​ಮನ್​ ಭಾರತದ ಅಗ್ರಗಣ್ಯ ಕೈಗಾರಿಕೋದ್ಯಮಿ ಕುಮಾರಮಂಗಲಂ ಬಿರ್ಲಾ ಅವರ ಹಿರಿಯ ಮಗಳು ಅನನ್ಯಾ ಬಿರ್ಲಾ. ಈಕೆಯ ಹೆಸರಿನ ಮುಂದಿರುವ ಆ ಒಂದು ಶಬ್ದ ಇಡೀ ಭಾರತಕ್ಕೇ ಗೊತ್ತು.

ಬಿಲೇನಿಯರ್​ ‘ಬಿರ್ಲಾ’ ಕುಟುಂಬದ ಈ ಕುಡಿ ಈ ಪಾಪ್​ ಲೋಕದ ಟಾಪ್​ ಸಿಂಗರ್​. ಹೌದು.. ಭಾರತದ 6ನೇ ಶ್ರೀಮಂತ ಬಿಲೇನಿಯರ್ ಬ್ಯುಸಿನೆಸ್‌ಮೆನ್​ನ ಮುದ್ದಿನ ಮಗಳಾಗಿರೋ ಅನನ್ಯ ಏನನ್ನೂ ಮಾಡದೆ ಹೇಗ್​ ಬೇಕಾದ್ರು ಬದುಕ್ಬಹುದಿತ್ತು. ಅಷ್ಟೊಂದು ಸಂಪತ್ತು ಅವ್ರ ಮನೆಯಲ್ಲಿ ಕಾಲು ಮುರ್ಕೊಂಡು ಬಿದ್ದಿದೆ.

ಆದ್ರೆ ಅನನ್ಯ ಅಪ್ಪನ ಹೆಸರು ಹೇಳದೇ ಸ್ವತಂತ್ರವಾಗಿ ಬೆಳೆಯಲು ಇಷ್ಟ. ಸಣ್ಣವಳಿದ್ದಾಗಿನಿಂದಲೂ ಸಂಗೀತ ಲೋಕದಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಆಸೆ ಹೊಂದಿದ್ದ ಟ್ಯಾಲೆಂಟೆಡ್​ ಹುಡುಗಿ. ಹೀಗಾಗಿ ತನ್ನ ಇಷ್ಟದ ಕ್ಷೇತ್ರವಾದ ಮ್ಯೂಸಿಕ್​ನ್ನ ಆರಿಸಿಕೊಂಡ್ಳು. 2016ರಲ್ಲಿ ತನ್ನ ಸ್ವಂತ ರಚನೆಯ ಇಂಗ್ಲೀಷ್​ ಹಾಡೊಂದನ್ನು ಬಿಡುಗಡೆ ಮಾಡಿದಳು.

ನಂತರ ‘Meant to be’ ಎಂಬ ಎರಡನೇ​ ಹಾಡಿನ ಮೂಲಕ ಪಾಪ್​ ಲೋಕದಲ್ಲಿ ಪ್ಲಾಟಿನಂ ಅಂದ್ರೆ ಮಿಲಿಯನ್​ ಕಾಪಿಗಳು ಮಾರಾಟ ಮಾಡಿದ ಮೊದಲ ಇಂಡಿಯನ್​ ಪಾಪ್​ ಸಿಂಗರ್. ಅಷ್ಟೇ ಅಲ್ಲದೆ ಪಾಪ್​ ಲೋಕದ ದಿಗ್ಗಜ ನೆನಿಸಿದ ಜಿಮ್​ ಬೀನ್ಸ್​ ಎಂಬುವವರೊಂದಿಗೆ ಸಾಂಗೊಂದನ್ನು ರಿಲೀಸ್​ ಮಾಡಿದಳು.ಹೀಗೆ ತನ್ನದೇ ಸ್ವಂತ ಹಾಡಿಗೆ ತಾನೇ ಮ್ಯೂಜಿಕ್​ ನೀಡಿ ಸ್ವತಃ ರಿಲೀಸ್​ ಮಾಡಿದ ಪ್ರತಿಭೆ ಈಕೆ. ಈಕೆಯ ಹಾಡುಗಳಿಗೆ ಜಗದಗಲ ಫ್ಯಾನ್ಸ್​ ಇದ್ದಾರೆ. ಹಾಡಿನ ಡಿವಿಡಿಗಳು ಬಿಸಿ ದೋಸೆಯಂತೆ ಸೇಲಾಗುತ್ತೆ. ಆ ಮೂಲಕ ಕೋಟಿ ಕೋಟಿ ಬಾಚಿದ್ದಾಳೆ.

ಪಾಪ್ ಮ್ಯೂಸಿಕ್‌ನಲ್ಲಿ ಎತ್ತರಕ್ಕೇರುತ್ತಿರುವ ಈ ಯುವ ಉದ್ಯಮಿ ತನ್ನ 17ನೇ ವಯಸ್ಸಿನಲ್ಲಿಯೇ ಹಳ್ಳಿ ಮಹಿಳೆಯರಿಗೆ ಆರ್ಥಿಕ ನೆರವು ನೀಡುವಂತ ‘ಸ್ವತಂತ್ ಮೈಕ್ರೊಫಿನ್’ ಎಂಬ ಸಂಸ್ಥೆ ಸ್ಥಾಪಿಸಿದಾಕೆ. ಆದ್ರೆ ಈಕೆಗೆ ದೊಡ್ಡ ಕರುಳಿನ ಸಮಸ್ಯೆ ‘ಇರಿಟೇಬಲ್ ಬವೆಲ್ ಸಿಂಡ್ರೋಮ್’ನಿಂದ ಬಳಲುತ್ತಿದ್ದಾಳೆ. ಅದ್ರ ಮಧ್ಯೆಯೂ ಸಾಧನೆ ಮಾಡ್ತಿದ್ದಾಳೆ. ಮೊದಲು ಕೊಂಚ ಗುಂಡಗಿದ್ದ ಹುಡುಗಿ ಈಗ ವರ್ಕೌಟ್ ಮಾಡಲು ಶುರು ಮಾಡಿದ್ಮೇ ಸಣ್ಣಗಾಗಿದ್ದಾಳೆ ಒಟ್ನಲ್ಲಿ ತಂದೆಯ ಹೆಸರಿನ ಹಂಗಿಲ್ಲದೆ ಸಾಧನೆ ಮಾಡ್ತಿರೋ ಈಕೆ ಈ ದೇಶದ ಹೆಣ್ಣುಮಕ್ಕಳಿಗೆ ಸ್ಫೂರ್ತಿ.