ಮೀಟೂ ಬಂದಿರುವುದು ನನಗೆ ಬೇಜಾರ್ ಆಗಿದೆ… ಶುಭಾ ಪುಂಜಾ…

ಚಿತ್ರರಂಗ ಹೆಣ್ಣು ಮಕ್ಕಳಿಗೆ ಬಹಳ ಗೌರವ ನೀಡುತ್ತೇ ಆದ್ರೆ ಈ ಮೀಟೂ ಬಂದಿರೋದು ನನಗೂ ಒಂದು ಕಡೇ ಬೇಜಾರ ಆಗಿದೆ ಅಂತಾ ಚಿತ್ರನಟಿ ಶುಭಾ ಪುಂಜಾ ಹೇಳಿದ್ದಾರೆ. ಅವರು ಹುಬ್ಬಳ್ಳಿಯ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ನಂತರ ಮಾಧ್ಯಮ ಗಳೊಂದಿಗೆ ಮಾತನಾಡಿದ್ರು,

ಮೀಟೂ ಬಗ್ಗೆ ಇರುವ ಆರೋಪ ಪ್ರತ್ಯಾರೋಪವನ್ನು ಚಲನಚಿತ್ರ ವಾಣಿಜ್ಯ ಮಂಡಳಿಯೇ ಬಗೆಹರಿಸುತ್ತದೆ .ಕನ್ನಡ ಫಿಲ್ಮ್ ಇಂಡಸ್ಟ್ರಿಯಲ್ಲಿ ನಾನು 10-12 ವರ್ಷದಿಂದ ಇದ್ದೇನೆ. ನಿರ್ದೇಶಕರು, ನಿರ್ಮಾಪಕರು ಹಾಗೂ ಅಭಿಮಾನಿಗಳಿಂದ ಪ್ರೀತಿ, ಗೌರವ ಸಿಕ್ಕಿದೆ. ಹೀಗಾಗಿ ಕನ್ನಡ ಇಂಡಸ್ಟ್ರಿಯಲ್ಲಿ ನನಗೆ ಯಾವುದೇ ಕಹಿ ಅನುಭವ ಆಗಿಲ್ಲ. ಎಲ್ಲ ರಂಗಗಳಲ್ಲೂ ಮೀಟೂ ದಂತಹ ಕಹಿ ಅನುಭವಗಳು ಆಗುತ್ತವೆ. ಕಹಿ ಅನುಭವ ಆಗಿರುವವರು ಧ್ವನಿ ಎತ್ತುತ್ತಿದ್ದಾರೆ.

 

ಇದಕ್ಕೆಲ್ಲ ನಮ್ಮ ಸಿನಿ ರಂಗದ ಹಿರಿಯರು ಪರಿಹಾರ ಕಂಡುಕೊಳ್ಳುತ್ತಿದ್ದಾರೆ ಎಂದರು.ಸಂಜನಾ ಕ್ಷಮೇ ಕೇಳಿದ ವಿಚಾರಕ್ಕೆ ಪ್ರತಿಕ್ರಯಿಸಿದ ಅವರು, ಅವರ ವೈಯಕ್ತಿಕ ವಿಚಾರ. ಅದರ ಬಗ್ಗೆ ಅವರನ್ನೇ ಕೇಳಬೇಕು. ಬೇರೆಯವರ ಬಗ್ಗೆ ನಾನು ಪ್ರತಿಕ್ರಯಿಸುವದು ತಪ್ಪಾಗುತ್ತದೆ. ಇನ್ನೂ ಇಂಥವುಗಳೆಲ್ಲ ವೈಯಕ್ತಿಕ ವಿಚಾರಗಳಾಗಿದ್ದು ಆದ್ರೆ ವೈಯಕ್ತಿಕವಾಗಿ ನನಗೆ ಈ ತರಹದ ಅನುಭವ ಆಗಿಲ್ಲ ಎಂದರು.