ತಮಿಳುನಾಡಿನಲ್ಲಿ ಕಾಣಿಸಿಕೊಂಡ ವಿಜಯ್​ ಸೇತುಪತಿ- ಶ್ರುತಿ ಹಾಸನ್​..!! ಜೋಡಿ ಕಂಡು ಕಾಲಿವುಡ್ ಶಾಕ್!!

ಪಡ್ಡೆ ಹುಡುಗರ ನಿದ್ದೆ ಗೆಡಿಸಿದ ಸುಂದರಿ, ಬಹುಭಾಷಾ ನಟಿ ಶ್ರುತಿ ಹಾಸನ್ ದೊಡ್ಡ ಪರದೆ ಮೇಲೆ ಕಾಣಿಸಿಕೊಂಡು ಬಹಳ ಸಮಯವಾಗಿದೆ. ಇದೀಗ ಹೊಸ ಸಿನಿಮಾಕ್ಕೆ ಸಹಿ ಮಾಡಿದ್ದಾರೆ ಶ್ರುತಿ ಹಾಸನ್.

ad

ಹೌದು ನಟ ವಿಜಯ್​ ಸೇತುಪತಿ ಹಾಗೂ ಶ್ರುತಿ ಹಾಸನ್​ ಕಾಂಬಿನೇಷನ್​ನಲ್ಲಿ ಮೂಡಿ ಬರಲಿದೆ ತಮಿಳು ಚಿತ್ರ. ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಜನನಾಥನ್​ ಅವರ ಸಾರಥ್ಯದಲ್ಲಿ ಕಾಲಿವುಡ್​ನಲ್ಲಿ ‘ಲಾಭಂ’ ತೆರೆ ಮೇಲೆ ಅಬ್ಬರಿಸಲಿದೆ. ಇದೇ ಮೊದಲ ಬಾರಿಗೆ ತಮಿಳು ಚಿತ್ರದಲ್ಲಿ ತೆರೆ ಹಂಚಿಕೊಳ್ಳಲಿದ್ದಾರೆ ವಿಜಯ್​ ಸೇತುಪತಿ- ಶ್ರುತಿ ಹಾಸನ್​..! ‘ಲಾಭಂ’ ಚಿತ್ರದಲ್ಲಿ ವಿಜಯ್​ ಸೇತುಪತಿ-ಶ್ರುತಿ ಹಾಸನ್​ ಮೋಡಿ ಮಾಡಲಿದ್ದಾರೆ.

ನಟ ವಿಜಯ್​ ಸದ್ಯ ಕೈತುಂಬಾ ಸಿನಿಮಾಗಳನ್ನು ಇಟ್ಟುಕೊಂಡಿದ್ದು, ಇತ್ತೀಚೆಗಷ್ಟೆ ತೆರೆಕಂಡ ‘ಸೂಪರ್​ ಡಿಲಕ್ಸ್​’ ಚಿತ್ರದಲ್ಲಿ ತೃತೀಯ ಲಿಂಗಿಯಾಗಿ ಕಾಣಿಸಿಕೊಂಡಿದ್ದರು. ಇನ್ನು ನಟಿ ಶ್ರುತಿ ಹಾಸನ್ 2017ರಲ್ಲಿ ತಮಿಳಿನ ಸಿಂಗಂ-3 ಚಿತ್ರದಲ್ಲಿ ಕಾಣಿಸಿಕೊಂಡಿದರು.ಇದಾದ ನಂತರ ಎರಡು ವರ್ಷ ಯಾವ ಸಿನಿಮಾದಲ್ಲೂ ಕಾಣಿಸಿಕೊಳ್ಳದ ಶ್ರುತಿ ಈಗ ಮತೊಮ್ಮೆ ತೆರೆ ಮೇಲೆ ಅಬ್ಬರಿಸಲಿದ್ದಾರೆ.