ಸದ್ದು ಮಾಡ್ತಿದೆ ವಿಲನ್ ಚಿತ್ರದ ಸಾಂಗ್ಸ್ ಮತ್ತು ಲೀರಿಕ್ಸ್!

 

 

 

 

 

ಸೌತ್​ ಸಿನಿ ಇಂಡಸ್ಟ್ರಿಯ ಬಹು ನಿರೀಕ್ಷಿತ ಮೂವಿ ವಿಲನ್.ಕನ್ನಡದ ಇಬ್ಬರು ಸ್ಟಾರ್ ನಟರಾದ ಸುದೀಪ್ ಹಾಗೂ ಶಿವಣ್ಣ ಒಟ್ಟಾಗಿ ಕಾಣಿಸಿಕೊಳ್ತೀರೋ ಈ ಚಿತ್ರ ಸಾಕಷ್ಟು ನೀರಿಕ್ಷೆ ಮೂಡಿಸಿದೆ. ಇನ್ನು ಈಗಾಗಲೇ ಈ ಚಿತ್ರದ ಶೂಟಿಂಗ್ ಕೂಡ ಕಂಪ್ಲೀಟ್ ಆಗಿದ್ದು, ಚಿತ್ರದ ಹಾಡುಗಳ ಲೀರಿಕ್​ ಕೂಡ ರಿಲೀಸ್ ಆಗ್ತಿದೆ.

 

ಈಗಾಗಲೇ ರಿಲೀಸ್ ಆಗಿರೋ  ದ ಕಿಚ್ಚ ಸುದೀಪ್​ ಹಾಗು ಶಿವರಾಜ್​ಕುಮಾರ್​​​ ಟೀಸರ್​​​ಗಳು ಮಾಸ್ಸಿವ್ ಹಿಟ್ ಆಗಿವೆ. ಇದೀಗ ವಿಲನ್​ ನಿರ್ದೇಶಕ ಪ್ರೇಮ್​​​​ ಈ ಮೂವಿಗಾಗಿ ಕಾಯ್ತಾ ಇರೋ ಸಿನಿ ರಸಿಕರಿಗೆ ದೊಡ್ಡ ಟ್ರೀಟ್​ ಕೊಡೋಕೆ ಪ್ಲಾನ್​ ಮಾಡಿದ್ದಾರೆ. ಅದೇನೆಂದ್ರೆ ದುಬೈನಲ್ಲಿ ವಿಲನ್ ಚಿತ್ರದ ಆಡಿಯೋ ಬಿಡುಗಡೆಗೆ ಪ್ಲಾನ್ ಆಗಿದೆ. ಈ ಬಗ್ಗೆ ಚಿತ್ರದ ನಿರ್ದೇಶಕ ಪ್ರೇಮ್​, ಆಡಿಯೊ ರಿಲೀಸ್ ಫಂಕ್ಷನ್​ ಹೇಗಿರುತ್ತೆ ಅನ್ನೊದ್ರ ಬಗ್ಗೆ ಎಕ್ಸ್​ಕ್ಲೂಸಿವ್ ಮಾಹಿತಿ ನೀಡಿದ್ದಾರೆ.