ನೀವೆಲ್ಲಿ ಮತದಾನ ಮಾಡ್ತೀರಾ? ಎಂಬ ಪ್ರಶ್ನೆಗೆ ಬಾಲಿವುಡ್​​ ಚೆಲುವೆ ಆಲಿಯಾ ಭಟ್​ ತಲೆತಗ್ಗಿಸಿದ್ದ್ಯಾಕೆ ?!

ಆಕೆ ಅಭಿಮಾನಿಗಳಿಗೆ ಮುಂಬರುವ ಚುಣಾವಣೆಯಲ್ಲಿ ಎಲ್ಲರೂ ಮತದಾನ ಮಾಡುವಂತೆ ಮನವಿ ಮಾಡಿದ್ದಾಳೆ. ಆದರೆ ಸ್ವತಃ ಆಕೆ ಮಾತ್ರ ಓಟು ಹಾಕೋದಿಲ್ಲವಂತೆ. ಇಷ್ಟಕ್ಕೂ ಬಾಲಿವುಡ್​​​ನಲ್ಲಿ ಸಂಚಲನ ಮೂಡಿಸಿ ಒಂದಾದ ಮೇಲೆ ಒಂದು ಹಿಟ್​ ಚಿತ್ರಗಳನ್ನು ನೀಡುತ್ತಿರೋ ನಟಿ ಆಲಿಯಾ ಭಟ್​ ಹೀಗೆ ಮತದಾನದಿಂದ ಯಾಕೆ ಎಸ್ಕೇಪ್​ ಆಗ್ತಿದ್ದಾರೆ ಅಂದುಕೊಂಡ್ರಾ ಈ ಸ್ಟೋರಿ ನೋಡಿ.


ಆಲಿಯಾ ಭಟ್​​​ ಬಾಲಿವುಡ್​​​​​ನ ಮುಗ್ಧ ಚೆಲುವೆ. ವಿಭಿನ್ನ ಚಿತ್ರಗಳ ಮೂಲಕವೇ ಗುರುತಿಸಿಕೊಂಡ ಆಲಿಯಾ ಭಟ್​ ಈಗಾಗಲೇ ದೇಶದ ಚುನಾವಣೆಯಲ್ಲಿ ಮತದಾನ ಮಾಡುವಂತೆ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಪಿಎಂ ನರೇಂದ್ರ ಮೋದಿ ಎಲ್ಲ ಬಾಲಿವುಡ್​​ ನಟರೂ ತಮ್ಮ ಅಭಿಮಾನಿಗಳಿಗೆ ಎಲೆಕ್ಷನ್​ನಲ್ಲಿ ಮತಚಲಾಯಿಸುವಂತೆ ಕರೆ ನೀಡಲು ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿದ್ದ ಆಲಿಯಾ ಭಟ್​​ ತಮ್ಮ ಟ್ವಿಟರ್ ಖಾತೆಯಲ್ಲಿ, “ಒಂದು ಮತ ರಾಷ್ಟ್ರದ ಧ್ವನಿಯಾಗಿದೆ. ರಾಷ್ಟ್ರದ ಆಯ್ಕೆ, ನಿಮ್ಮ ಧ್ವನಿ ಬಳಸಿ ನಿಮ್ಮ ಆಯ್ಕೆಯನ್ನು ಮಾಡಿ” ಎಂದು ಬರೆದುಕೊಂಡಿದ್ದರು. ಆದರೆ ನೀವು ಯಾವ ಕ್ಷೇತ್ರದಲ್ಲಿ ಮತ ಚಲಾಯಿಸ್ತಿರಿ ಆಲಿಯಾ ಎಂಬ ಮಾಧ್ಯಮದವರ ಪ್ರಶ್ನೆಗೆ ತಲೆತಗ್ಗಿಸಿದ್ದಾರೆ.


ಅಯ್ಯೋ ಓಟು ಎಲ್ಲಿ ಹಾಕ್ತಿರಾ ಅಂದಿದ್ದಕ್ಕೆ ಆಲಿಯಾ ಯಾಕೆ ತಲೆ ತಗ್ಗಿಸಿದ್ರು ಅಂತಿರಾ….ಯಾಕಂದ್ರೆ ಆಲಿಯಾ ಭಟ್​ ಗೆ ಪಾಸ್​ ಪೋರ್ಟ್​ ಸಮಸ್ಯೆ ಇದೆ. ದಾಖಲೆಗಳ ಪ್ರಕಾರ ಆಕೆ ಭಾರತದ ಪ್ರಜೆಯೇ ಅಲ್ಲ. ಹೌದು ಆಲಿಯಾ ಬ್ರಿಟಿಷ್​ ಪ್ರಜೆ. ಅವರಿನ್ನು ಭಾರತದ ಪೌರತ್ವವನ್ನು ಹೊಂದಿಲ್ಲ. ಹೀಗಾಗಿ ಮತ ಚಲಾಯಿಸುವಂತಿಲ್ಲ. ಆದರೆ ತಾವು ಮತ ಚಲಾಯಿಸದೇ ಇದ್ದರೂ ಆಲಿಯಾ ಭಟ್​​ ಅಭಿಮಾನಿಗಳಲ್ಲಿ ಮತದಾನದ ಬಗ್ಗೆ ಅರಿವು ಮೂಡಿಸುವುದರಲ್ಲಿ ಮಾತ್ರ ಹಿಂದೆ ಬಿದ್ದಿಲ್ಲ.