ರೆಬಲ್ ಸ್ಟಾರ್ ಅಂಬರೀಶ್ ಸಾವಿನ ಮನೆ, ತಿಥಿಗಳಿಗೆ ಹೋಗಲ್ವಂತೆ!! ಯಾಕೆ ಗೊತ್ತಾ?

ನಟ, ಮಾಜಿ ಸಚಿವ ಅಂಬರೀಶ್ ಹೆಚ್ಚಾಗಿ ಸಾವು, ತಿಥಿಗಳಿಗೆ ಹೋಗಲ್ಲ. ಅವರು ಸಾವಿನ ಮನೆಗೆ ಹೋಗದಿರಲೂ ಬಲವಾದ ಕಾರಣವೂ ಇದೆ. ಹಾಗಾದ್ರೆ, ಅಂಬರೀಶ್ ಸಾವಿನ ಮನೆಗೆ ಹೋಗದಿರಲು ಕಾರಣವೇನು ಅನ್ನೋದನ್ನ ಸ್ವತಃ ಅಂಬರೀಶ್ ಅವರೇ ಹೇಳಿದ್ದಾರೆ.

 o

ಹೌದು, ಅಂಬರೀಶ್ ರಾಜ್ಯ ಅಷ್ಟೇ ಅಲ್ಲದೆ ದೇಶದ ಎಲ್ಲೆಡೆ ಅವರದೇ ಆದ ಅಭಿಮಾನಿ ಸಮೂಹ ಇದೆ. ಅಂಬಿ ಬರ್ತಿದ್ದಂತೆ ಅವ್ರನ್ನ ಅಪ್ಪಿಕೊಳ್ಳೋಕೆ, ಹಸ್ತ ಲಾಘವ ಮಾಡಿ, ಸೆಲ್ಫೀ ತೆಗೆಸಿಕೊಳ್ಳೋಕೆ ಮುಗಿ ಬೀಳ್ತಾರೆ. ಇನ್ನು ಮಂಡ್ಯ ಜಿಲ್ಲೆಯಲ್ಲಂತೂ ಅವರನ್ನು ಆತ್ಮೀಯವಾಗಿ ಸ್ವಾಗತಿಸ್ತಾರೆ.

ಒಮ್ಮೆ ಅಂಬರೀಶ್ ಅವ್ರು ಮಂಡ್ಯದಲ್ಲಿ ಆಪ್ತರೊಬ್ಬರ ಸಾವಿಗೆ ತೆರಳಿದ್ರಂತೆ. ಆ ವೇಳೆ ಅಭಿಮಾನಿಗಳು ಅಂಬರೀಶ್ ಅವ್ರನ್ನ ನೋಡಿ ಸಂಭ್ರಮಾಚರಣೆ ಮಾಡಿದ್ದರಂತೆ. ಇನ್ನೊಮ್ಮೆ ತಿಥಿಗೆ ಹೋಗಿದ್ದ ವೇಳೆ ಲಾರಿಯಲ್ಲಿ ಮೆರವಣಿಗೆ ಮೂಲಕ ಸ್ವಾಗತಿಸಿದ್ರಂತೆ. ಹೀಗಾಗಿ ಸಾವು, ತಿಥಿಗೆ ಹೋಗದಿರಲು ಅಂಬರೀಶ್ ನಿರ್ಧರಿಸಿದ್ದಾರಂತೆ. ಸಾವು, ತಿಥಿಗೆ ತೆರಳಿದ್ದ ವೇಳೆ ಅಂಬರೀಶ್ ಆದ ಅನುಭವವನ್ನು ಹೇಳಿಕೊಂಡಿದ್ದು ಹೀಗೇ…

Avail Great Discounts on Amazon Today click here