ಪದ್ಮಾವತಿ ಚಿತ್ರದಲ್ಲಿ ವಿವಾದಿತ ದೃಶ್ಯವಿಲ್ಲ- ಬಿಡುಗಡೆಗೆ ಅವಕಾಶಕೊಡಿ ಎಂದ ಬನ್ಸಾಲಿ!!

ಸಂಜಯ ಲೀಲಾ ಬನ್ಸಾಲಿ ನಿರ್ದೇಶನದ ಬಹುನೀರಿಕ್ಷಿತ ಹಾಗೂ ಅದ್ದೂರಿ ತಾರಾಗಣದ ಪದ್ಮಾವತಿ ಚಿತ್ರ ಬಿಡುಗಡೆಗೆ ದೇಶಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಡಿಸೆಂಬರ್ 1 ರಂದು ಪದ್ಮಾವತಿ ಚಿತ್ರ ವಿಶ್ವದಾದ್ಯಂತ ತೆರೆಕಾಣಲಿದೆ. ಈ ಚಿತ್ರದಲ್ಲಿ ಇತಿಹಾಸ ತಿರುಚಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಈ ಹಿನ್ನೆಲೆಯಲ್ಲಿ ವಿರೋಧ ವ್ಯಕ್ತವಾಗಿದೆ.

ಭಾರತದ ಇತಿಹಾಸವನ್ನು ತಿರುಚಲಾಗಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಚಿತ್ರ ಬಿಡುಗಡೆ ಅವಕಾಶ ಕೊಡೋದಿಲ್ಲ ಅಂತ ಹಿಂದು ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೀಪಿಕಾ ಪಡುಕೋಣ ಪದ್ಮಾವತಿಯಾಗಿ ನಟಿಸಿರುವ ಈ ಚಿತ್ರದಲ್ಲಿ ರಣಬೀರ ಕಪೂರ ಸೇರಿದಂತೆ ಹಲವು ಖ್ಯಾತ ನಟರ ಸಂಗಮವಿದ್ದು, ಅತ್ಯಂತ ಅದ್ದೂರಿ ಸೆಟ್ ಹಾಗೂ ವಸ್ತ್ರಾಂಲಕಾರದಲ್ಲಿ ಚಿತ್ರ ಸುಂದರವಾಗಿ ಮೂಡಿಬಂದಿದೆ. ಹಾಡುಗಳು ಸಾಂಪ್ರದಾಯಿಕ ನೃತ್ಯಗಳನ್ನು ಒಳಗೊಂಡಿದ್ದು, ಬಾಕ್ಸಾಫೀಸನಲ್ಲಿ ಹೊಸ ದಾಖಲೆ ಸೃಷ್ಟಿಸುವ ಭರವಸೆ ಮೂಡಿಸಿದೆ.

ಆದರೇ ಚಿತ್ರದಲ್ಲಿ ಪದ್ಮಾವತಿಯನ್ನು ಅವಹೇಳನಕರವಾಗಿ ಚಿತ್ರಿಸಲಾಗಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಚಿತ್ರದ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ, ಹೇಳಿಕೆ ನೀಡಿದ್ದು, ಚಿತ್ರದಲ್ಲಿ ಯಾವುದೇ ವಿವಾದಿತ ದೃಶ್ಯಗಳಿಲ್ಲ. ಧಾಳಿಕೋರ ಅಲ್ಲಾವುದ್ಧೀನ ಖಿಲ್ಜಿ ಮತ್ತು ರಾಣಿ ಪದ್ಮಾವತಿ ನಡುವೆ ಯಾವುದೇ ರೋಮಾನ್ಸ್​ ದೃಶ್ಯವಿಲ್ಲ. ನಾನು ಸದಾ ಪದ್ಮಾವತಿಯ ಕತೆಯಿಂದ ಪ್ರಭಾವಿತನಾಗಿದ್ದೇನೆ. ಪದ್ಮಾವತಿಯವರ ವೀರತ್ವ ಮತ್ತು ಬಲಿದಾನ ಸದಾ ಆದರ್ಶವಾದದ್ದು. ಹೀಗಾಗಿ ನಾನು ತುಂಬ ಜವಾಬ್ದಾರಿಯಿಂದ ನಿರ್ಮಿಸಿರುವ ಚಿತ್ರಪ್ರದರ್ಶನಕ್ಕೆ ಅವಕಾಶ ನೀಡಿ ಎಂದು ಮನವಿ ಮಾಡಿದ್ದಾರೆ.