ಚಾಲೆಂಜಿಂಗ್ ಸ್ಟಾರ್ ಹುಟ್ಟುಹಬ್ಬಕ್ಕೆ ಪತ್ನಿ ನೀಡಿದ ಸಪ್ರೈಸ್ ಏನು ಗೊತ್ತಾ?

Wife's Surprise Gift to Darshan for his Birthday.

ಇನ್ನೇನು ದರ್ಶನ ಹುಟ್ಟುಹಬ್ಬಕ್ಕೆ ದಿನಗಣನೆ ನಡೆದಿದೆ.

ad

ಈಗಾಗಲೇ ದಚ್ಚು ಫ್ಯಾನ್ಸ್​​ ರಾಜ್ಯದಾದ್ಯಂತ ದರ್ಶನ ಹುಟ್ಟುಹಬ್ಬವನ್ನು ಉತ್ಸವವಾಗಿ ಆಚರಿಸಲು ಸಿದ್ಧತೆ ನಡೆಸಿದ್ದಾರೆ. ಈಗಾಗಲೇ ಡಿ ಫ್ಯಾನ್ಸ್​ ಉತ್ಸವ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ದರ್ಶನ ಅಭಿಮಾನಿಗಳು ಹೊಸ ಅಲೆ ಸೃಷ್ಟಿಸಿದ್ದಾರೆ. ಇವೆಲ್ಲದರ ಮಧ್ಯದಲ್ಲಿ ದರ್ಶನ ಪತ್ನಿ ವಿಜಯಲಕ್ಷ್ಮೀ ಕೂಡ ತಮ್ಮ ಪ್ರೀತಿಯ ಗಂಡನ ಹುಟ್ಟುಹಬ್ಬಕ್ಕಾಗಿ ಸಫ್ರೈಸ್ ಗಿಫ್ಟ್​​ವೊಂದನ್ನು ನೀಡಿದ್ದಾರೆ. ಅದು ಅಂತಿಂಥ ಗಿಫ್ಟ್​​​ಲ್ಲ. ಜೀವನದ ಕೊನೆಯ ಕ್ಷಣದವರೆಗೂ ಇರುವಂತದ್ದು.
ಹೌದು ದರ್ಶನ ಪತ್ನಿ ವಿಜಯಲಕ್ಷ್ಮೀ ಪತಿಯ ಹುಟ್ಟುಹಬ್ಬಕ್ಕಾಗಿ ಸಪ್ರೈಸ್ ನೀಡಿದ್ದಾರೆ.ಅದೇನು ಅಂದ್ರಾ ವಿಜಯಲಕ್ಷ್ಮೀ ತಮ್ಮ ಉಂಗುರ ಬೆರಳಿನ ಮೇಲೆ ದರ್ಶನ ಹೆಸರನ್ನು ಹಚ್ಚೆ ಹಾಕಿಸಿಕೊಂಡಿದ್ದಾರೆ.

 

 

ಒಂದು ಪುಟ್ಟ ಹಾರ್ಟ್​​ ಮಾರ್ಕ್​ ಜೊತೆ ದಾಸಾ ಎಂಬ ಹೆಸರು ಬರೆಸಿಕೊಂಡಿದ್ದಾರೆ. ಇದು ದರ್ಶನ್​​ ಬರ್ತಡೇ ವಿಜಯ್ ಲಕ್ಷ್ಮೀ ನೀಡುತ್ತಿರುವ ಗಿಫ್ಟ್​.
ಇದೇ ಫೆಬ್ರವರಿ 16 ರಂದು ದರ್ಶನ ಹುಟ್ಟುಹಬ್ಬವಿದೆ. ಸ್ಯಾಂಡಲ್​ವುಡ್​​ ಸಾರಥಿ ದರ್ಶನ 40 ವರ್ಷಕ್ಕೆ ಕಾಲಿರಿಸುತ್ತಿದ್ದಾರೆ.

 

 

 

 

ದರ್ಶನ್​ಗೆ ಬ್ರೇಕ್​ ನೀಡಿದ ಚಿತ್ರ ಮೆಜೆಸ್ಟಿಕ್​. ಆ ಚಿತ್ರದಲ್ಲಿ ದರ್ಶನಗೆ ದಾಸ ಎಂಬ ಹೆಸರಿತ್ತು. ಇದರ ಸವಿ ನೆನಪಿಗಾಗಿ ವಿಜಯಲಕ್ಷ್ಮೀ ದಾಸಾ ಎಂದು ಬರೆಸಿಕೊಂಡಿದ್ದಾರೆ. ಒಟ್ಟಿನಲ್ಲಿ ದರ್ಶನ್​ಗೆ ಪ್ರೀತಿಯ ಹೆಂಡತಿ ಇಂತಹದೊಂದು ಸಪ್ರೈಸ್​ ಸಿದ್ದಪಡಿಸಿದ್ದು ದಚ್ಚು ಈ ಪ್ರೀತಿಗೆ ಮಾರುಹೋಗೋದ್ರಲ್ಲಿ ಸಂಶಯವೇ ಇಲ್ಲ.