ಯಜಮಾನ ಚಿತ್ರದ ಕಲೆಕ್ಷನ್ ಎಷ್ಟು ಅಂತ ಕೇಳಿದ್ದಕ್ಕೆ ದರ್ಶನ್ ಗರಂ..

ಯಜಮಾನ ಚಿತ್ರದ ಕಲೆಕ್ಷನ್​ ಬಗ್ಗೆ ಕೇಳಿದ್ದಕ್ಕೆ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಗರಂ ಆಗಿದ್ದಾರೆ. ಮೈಸೂರಿನಲ್ಲಿ ಯಜಮಾನ ಸಕ್ಸಸ್​​ ಮೀಟ್ ವೇಳೆ ಮಾಧ್ಯಮ ಪ್ರತಿನಿಧಿಗಳಿಂದ ಕೇಳಿ ಬಂದ ಪ್ರಶ್ನೆಗೆ ದಚ್ಚು ಗರಂ ಆದ್ರು. ಸಿನಿಮಾ ಕಲೆಕ್ಷನ್ ಕಟ್ಟಿಕೊಂಡು ಏನ್​ ಮಾಡ್ತೀರ ಅಂತಾ ಕೇಳಿದ್ರು.

ಇನ್ನು ಚಿತ್ರವೊಂದಕ್ಕೆ 19 ಕೋಟಿ ಪಡೆಯುತ್ತೀರ ಅನ್ನೋ ಪ್ರಶ್ನೆಗೆ ಅದೆಲ್ಲಾ ಸುಳ್ಳು ಅಂದಿದ್ದಾರೆ.ಸಿನಿಮಾ ಕಲೆಕ್ಷನ್ ಎಷ್ಟು ಎನ್ನುತ್ತಿದ್ದಂತೆ ಗರಂ ಆದ ಚಾಲೆಂಂಜಿಂಗ್ ಸ್ಟಾರ್ ಸಿನಿಮಾ ಕಲೆಕ್ಷನ್ ಬಗ್ಗೆ ಕಟ್ಟಿಕೊಂಡ ಏನ್ ಮಾಡ್ತಿರಾ..? ಎಂದು ನಿಮ್ಗೆ ಅದ್ರಿಂದ ಉಪಯೋಗ ಆಗೋದಾದ್ರೆ ಹೇಳಿ ಪೂರ್ತಿ ದಾಖಲೆ ಕೊಡ್ತಿನಿ ಎಂದರು.ಒಂದು ಶೋ ಕಲೆಕ್ಷನ್ ಎಷ್ಟು, ದಿನಕ್ಕೆ ಎಷ್ಟು ಕಲೆಕ್ಷನ್ ಅಂತ ಲೆಕ್ಕ ಹಾಕಿ .

ಯಾರು ಸಾರ್ ನಿಮ್ಗೆ ಹೇಳಿದ್ದು.. ಹಾಗಿದ್ರೆ ಬನ್ನಿ ಸಿನಿಮಾ ಮಾಡ್ತಿನಿ ಎಂದು ನೀವು ಹೀಗೆ ಹೇಳಿ ಹೇಳಿ ಐಟಿಯವ್ರು ನಮ್ಮ ಲೆಕ್ಕ ಕೇಳುವಂತಾಗಿದೆ ಎಂದರು.