ಗೃಹಸಚಿವರಿಗೆ ಸಲಹೆ ಕೊಟ್ಟ ನಟ ಯಶ್. .

ರಾಕಿಂಗ್​ ಸ್ಟಾರ್​ ಯಶ್​ ಇತ್ತೀಚೆಗೆ ಸಮಾಜಮುಖಿ ಕಾರ್ಯಗಳಿಂದ ಹೆಚ್ಚು ಸದ್ದು ಮಾಡ್ತಿದ್ದಾರೆ. ಇದೀಗ ಗೃಹ ಸಚಿವರಿಗೆ ಟ್ರಾಫಿಕ್​ ಜಾಗೃತಿ ಕಾರ್ಯಕ್ರಮ ನಡೆಸುವಂತೆ ಮನವಿ ಮಾಡುವ ಮೂಲಕ ತಮ್ಮ ಸಾಮಾಜಿಕ ಕಳಕಳಿಯನ್ನ ಮೆರೆದಿದ್ದಾರೆ.

ಬೆಂಗಳೂರಿನ ಸಿಕೆಪಿಯಲ್ಲಿ ನಡೆದ ಫೋಟೋ ಎಕ್ಸಿಬಿಷನ್​ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಯಶ್​, ಮಾಧ್ಯಮದ ಪ್ರಶ್ನೆಗಳಿಗೆ ಉತ್ತರಿಸುವಾಗ ಗೃಹ ಸಚಿವರ ಬಳಿ ಮನವಿ ಮಾಡ್ಕೊಂಡ್ರು.

ಇದೇ ಹೊತ್ತಲ್ಲಿ ಯಶ್ ತಮ್ಮ ಕೆಜಿಎಫ್​ ಸಿನಿಮಾ ಬಗ್ಗೆ ಕೂಡ ಮಾತನಾಡಿದ್ರು.