ಕೊಟ್ಟ ಮಾತಿಗೆ ತಪ್ಪಿದರೆ ಏನಾಗುತ್ತದೆ?

ಹೀಗೆ ಮಾಡುತ್ತೇನೆ ಎಂದು ಮಾತು ಕೊಟ್ಟು

ಮಾಡದೇ ಇರುವವನ ಪುಣ್ಯ ನಾಶವಾಗುತ್ತದೆ.

  • ರಾಮಾಯಣ

***

 ಹೊನ್ನುಡಿ 2

{ರಾಮಾಯಣದ ಸುಭಾಷಿತಗಳ ಅವಲೋಕನ}

 

ದಶರಥ ಅಶ್ವಮೇಧ ಯಾಗ ಮಾಡುತ್ತಾನೆ. ಅದರ ಕೊನೆಯಲ್ಲಿ ಋಷ್ಯಶೃಂಗರ ನೇತೃತ್ವದಲ್ಲಿ ಪುತ್ರಕಾಮೇಷ್ಟಿ ಯಾಗವನ್ನೂ ಮಾಡುತ್ತಾನೆ. ಯಜ್ಞದ ಕೊನೆಯಲ್ಲಿ ಅಗ್ನಿಯಿಂದ ಪ್ರಾಜಾಪತ್ಯ ಪುರುಷ ಮೇಲೆದ್ದುಬರುತ್ತಾನೆ. ಆತ ದಶರಥನಿಗೆ ದಿವ್ಯ ಪಾಯಸ ನೀಡುತ್ತಾನೆ. ಅದನ್ನು ದಶರಥ ತನ್ನ ಪತ್ನಿಯರಾದ ಕೌಸಲ್ಯೆ, ಸುಮಿತ್ರೆ, ಕೈಕೇಯಿಯರಿಗೆ ಹಂಚುತ್ತಾನೆ.

ದಶರಥನಿಗೆ ನಾಲ್ಕು ಜನ ಮಕ್ಕಳು ಹುಟ್ಟುತ್ತಾರೆ. ಕೌಸಲ್ಯೆಯ ಮಗನಿಗೆ ರಾಮನೆಂದೂ, ಸುಮಿತ್ರೆಯ ಮಕ್ಕಳಿಗೆ ಲಕ್ಷ್ಮಣ – ಶತ್ರುಘ್ನರೆಂದೂ, ಕೌಸಲ್ಯೆಯ ಮಗನಿಗೆ ಭರತನೆಂದೂ ಹೆಸರಿಡುತ್ತಾರೆ.

ಮಕ್ಕಳು ಬೆಳೆಯತೊಡಗುತ್ತಾರೆ. ವೇದಾಧ್ಯಯನ ಮಾಡುತ್ತಾರೆ. ಯುದ್ಧವಿದ್ಯೆಯಲ್ಲಿ ವಿಶಾರದರಾಗುತ್ತಾರೆ. ದಶರಥ ಮಕ್ಕಳ ವಿವಾಹದ ಬಗ್ಗೆ ಚಿಂತನೆ ನಡೆಸತೊಡುಗುತ್ತಾನೆ.ಆಗ ಅಲ್ಲಿಗೆ ಮಹರ್ಷಿ ವಿಶ್ವಾಮಿತ್ರರು ಬರುತ್ತಾರೆ.

 

 

ವಿಶ್ವಾಮಿತ್ರರು ಮಹಾನ್ ತಪಸ್ವಿಗಳು. ಮೊದಲು ರಾಜರ್ಷಿಯಾಗಿದ್ದು ಈಗ ಬ್ರಹ್ಮರ್ಷಿಯಾದವರು. ಅವರ ಆಗಮನ ದಶರಥನಿಗೆ ಆನಂದ ಕೊಡುತ್ತದೆ. ಏನು ಹೇಳಿದರೂ ಮಾಡುತ್ತೇನೆ ಎನ್ನುತ್ತಾನೆ ಅವರಿಗೆ.

 

ಅವರೊಂದು ಯಜ್ಞ ಮಾಡುತ್ತಿರುತ್ತಾರೆ. ಅದಕ್ಕೆ ಮಾರೀಚ – ಸುಬಾಹು ಎನ್ನುವ ಇಬ್ಬರು ರಾಕ್ಷಸರು ತೊಂದರೆ ಕೊಡುತ್ತಾರೆ. ಅವರಿಂದ ಯಜ್ಞರಕ್ಷಣೆಗೆ ರಾಮನನ್ನು ಕಳಿಸಿಕೊಡು ಎಂದು ಕೇಳುತ್ತಾರೆ.

 

ಇದನ್ನು ಕೇಳಿದ ದಶರಥನಿಗೆ ಆಘಾತವಾಗುತ್ತದೆ. ರಾಕ್ಷಸರ ನಾಶಕ್ಕೆ ಪುಟ್ಟ ರಾಮನನ್ನು ಕಳಿಸುವುದು ಹೇಗೆ? ಎಂದು. ಒಪ್ಪುವುದಿಲ್ಲ ದಶರಥ. ಸಿಟ್ಟಾಗುತ್ತಾರೆ ವಿಶ್ವಾಮಿತ್ರರು. ಆಗ ಮಹರ್ಷಿ ವಸಿಷ್ಠರು ದಶರಥನಿಗೆ ಹೀಗೆ ಹೇಳುತ್ತಾರೆ-

ಸಂಶ್ರುತ್ಯೈವಂ ಕರಿಷ್ಯಾಮೀತ್ಯಕುರ್ವಾಣಸ್ಯ ರಾಘವ |

ಇಷ್ಟಾಪೂರ್ತವಧೋ ಭೂಯಾತ್ತಸ್ಮಾದ್ರಾಮಂ ವಿಸರ್ಜಯ ||

 

ಹೀಗೆ ಮಾಡುತ್ತೇನೆ ಎಂದು ಮಾತು ಕೊಟ್ಟು ಮಾಡದೇ ಇರುವವನು ಯಾಗಗಳಿಂದ ಮತ್ತು ಕೆರೆ ಕಟ್ಟೆ ಕಟ್ಟಿಸಿ ಸಂಪಾದಿಸಿದ ಪುಣ್ಯ ನಾಶವಾಗುತ್ತದೆ. ಹಾಗಾಗಿ ಕಳಿಸು ರಾಮನನ್ನು.

 

 

 

 

ಲೇಖನ:  ವಿದ್ವಾನ್ ಜಗದೀಶಶರ್ಮಾ ಸಂಪ