ರಾಜ್ಯದಾದ್ಯಂತ ಅಪಘಾತಕ್ಕೆ 13 ಬಲಿ- ಕರಾಳವಾಯ್ತು ಶನಿವಾರ!!

13 killed in accident across the state.
13 killed in accident across the state.

ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ವಿವಿಧ ಅಪಘಾತಗಳಲ್ಲಿ ಒಟ್ಟು 13 ಜನರು ಸಾವನ್ನಪ್ಪಿದ್ದು, ಶನಿವಾರ ಹಲವು ಕುಟುಂಬಗಳ ಪಾಲಿಗೆ ಶನಿವಾರವಾಗಿ ಪರಿಣಮಿಸಿದೆ. ಬೆಂಗಳೂರಿನಿಂದ ಗದಗಕ್ಕೆ ಮದುವೆಗಾಗಿ ತೆರಳುತ್ತಿದ್ದ ಕುಟುಂಬವಿದ್ದ ಎರ್ಟಿಗಾ ಕಾರಿನ ಟೈರ್​ ಸಿಡಿದು ಎದುರಿಗೆ ಬರುತ್ತಿದ್ದ ಸ್ಕಾರ್ಪಿಯೋ ವಾಹನಕ್ಕೆ ಗುದ್ದಿದ ಪರಿಣಾಮ ಚಿತ್ರದುರ್ಗದ ಹಿರಿಯೂರು ಬಳಿ ಒಂದೇ ಕುಟುಂಬದ 5 ಜನ ಸೇರಿ ಒಟ್ಟು 6 ಜನರು ಸಾವನ್ನಪ್ಪಿದ್ದಾರೆ.

ಮೃತರನ್ನು ಬೆಂಗಳೂರು ಮತ್ತಿಕೆರೆ ಮೂಲದ ದೇವಿಶೆಟ್ಟಿ ಆತನ ಪತ್ನಿ ಸೌಮ್ಯ ಮಕ್ಕಳಾದ ಶರತ್, ಪ್ರಣೀಕ ಮತ್ತು ಸೌಮ್ಯಳ ತಮ್ಮ ಸಾಗರ್ ಹಾಗೂ ಸ್ಕಾರ್ಪಿಯೋ ಚಾಲಕ ಚಿತ್ರದುರ್ಗ ಮೂಲನ ಅನ್ವರ್ ಎಂದು ಗುರುತಿಸಲಾಗಿದೆ. ಇನ್ನು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಚೋರಡಿ ಬಳಿ ನಡೆದ ಅಪಘಾತದಲ್ಲಿ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಭದ್ರತಾ ಸಿಬ್ಬಂದಿ ಲೊಕೇಶ್​ ಹಾಗೂ ಅವರ ಪತ್ನಿ ಪದ್ಮಾವತಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಅಪಘಾತದ ತೀವ್ರತೆಗೆ ವಾಹನ ಸಂಪೂರ್ಣ ನುಜ್ಜುಗುಜ್ಜಾಗಿದೆ. ನಿಯಂತ್ರಣ ತಪ್ಪಿದ ಲೋಕೇಶ್​-ಪದ್ಮಾವತಿ ಪ್ರಯಾಣಿಸುತ್ತಿದ್ದ ಕಾರು ಮರಕ್ಕೆ ಡಿಕ್ಕಿ ಹೊಡೆದು ದುರ್ಘಟನೆ ಸಂಭವಿಸಿದೆ.

13 killed in accident across the state.
13 killed in accident across the state.

ಇನ್ನು ಕಲಬುರಗಿ- ಅಫಜಲಪೂರ ರಸ್ತೆಯ ಚವಡಾಪೂರ ಬಳಿ ಕಾರ್ ಮತ್ತು ಟಂಟಂ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿ ಪರಿಣಾಮ ಇಬ್ಬರು ಸಾವನ್ನಪ್ಪಿದ್ದು, ಮೃತರನ್ನು ಗಾಣಗಾಪುರದ ನಿವಾಸಿಗಳೆಂದು ಗುರುತಿಸಲಾಗಿದೆ. ಗಾಣಗಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗದಗದಲ್ಲಿ ಹಿಟ್ ಅಂಡ್ ರನ್ ಗೆ ಓರ್ವ ಸಾವನ್ನಪ್ಪಿದ್ದು, ರೋಣ ತಾಲೂಕಿನ ಸಂಧಿಗವಾಡ ಗ್ರಾಮದ ಬಳಿ ಘಟನೆ ನಡೆದಿದೆ. ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನ ದಾಟನಾಳ ಗ್ರಾಮದ ನಿವಾಸಿ ಶಿವಪ್ಪ ತಳವಾರ (೩೫) ಮೃತ ದುರ್ದೈವಿ. ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಡಿಕ್ಕಿ ಹೊಡೆದ ವಾಹನಕ್ಕಾಗಿ ಶೋಧ ನಡೆದಿದೆ.

13 killed in accident across the state.
13 killed in accident across the state.

ಇನ್ನು ಬೆಂಗಳೂರಿನಲ್ಲಿ ಕೆಎಸ್​ಆರ್​ಟಿಸಿ ಬಸ್​​ಗೆ ಪುಟ್ಟ ಬಾಲಕನೊರ್ವನ ಬಲಿಯಾಗಿದ್ದು, ಮೆಜೆಸ್ಟಿಕ್​​ನ ಸಂಗೊಳ್ಳಿ ರಾಯಣ್ಣ ಸರ್ಕಲ್​​ ಬಳಿ ನಡೆದ ಅಪಘಾತದಲ್ಲಿ ಅಜ್ಜನ ಜೊತೆ ಬೈಕ್​​ನಲ್ಲಿ ತೆರಳುತ್ತಿದ್ದ ದರ್ಶನ ಎಂಬ ಬಾಲಕನಿಗೆ ಕೆಎಸ್​ಆರ್​ಟಿಸಿ ಬಸ್​ ಡಿಕ್ಕಿ ಹೊಡೆದಿದೆ. ಈ ವೇಳೆ ಬಾಲಕ ಕೆಳಕ್ಕೆ ಬಿದ್ದಿದ್ದು, ಅಪಘಾತದ ತೀವ್ರತೆಗೆ ಆತನ ಮೆದುಳು ಹೊರಬಂದಿದೆ.

13 killed in accident across the state.

ರಾಜಾಜಿನಗರದ ವಿದ್ಯಾವರ್ಧಕ ಶಾಲೆಯ 5 ನೇ ತರಗತಿ ವಿದ್ಯಾರ್ಥಿ ದರ್ಶನ್ ಸಾವನ್ನಪ್ಪಿದ ಬಾಲಕ. ಶಾಲೆ ಮುಗಿಸಿದ ದರ್ಶನ, ತಾತನ ಜೊತೆ ಕಾಟನ ಪೇಟೆಯ ಸಂಬಂಧಿಕರ ಮನೆಗೆ ತೆರಳುತ್ತಿದ್ದ. ಈ ವೇಳೆ ದರ್ಶನ್ ಹೆಲ್ಮೆಟ್​ ಹಾಕದ ಹಿನ್ನೆಲೆಯಲ್ಲಿ ಪೊಲೀಸರು ದರ್ಶನ ತಾತನ ಬೈಕ್​ ತಡೆಯಲು ಯತ್ನಿಸಿದ್ದಾರೆ. ಇದರಿಂದ ದರ್ಶನ ತಾತನ ಬೈಕ್​ ನಿಯಂತ್ರಣ ತಪ್ಪಿದ್ದು, ದರ್ಶನಕ್ಕೆ ಕೆಳಕ್ಕೆ ಬಿದ್ದಿದ್ದಾನೆ. ಈ ವೇಳೆ ಕೆಎಸ್​ಆರ್​ಟಿಸಿ ಬಸ್ ಹರಿದ ಪರಿಣಾಮ ದರ್ಶನ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಪಶ್ಚಿಮ ವಿಭಾಗದ ಸಂಚಾರಿ ಡಿಸಿಪಿ ಶಿವಕುಮಾರ್ ಭೇಟಿ, ಪರಿಶೀಲನೆ ನಡೆಸಿದ್ದಾರೆ. ಒಟ್ಟಿನಲ್ಲಿ ರಾಜ್ಯದಲ್ಲಿ ಇದುವರೆಗೂ ಇಬ್ಬರು ಮಕ್ಕಳು ಸೇರಿ 13 ಜನರು ಸಾವನ್ನಪ್ಪಿದ್ದರು. ಶನಿವಾರ ಕರಾಳ ಶನಿವಾರವಾಗಿ ಬದಲಾಗಿದೆ.