ಸೆಕ್ಯೂರಿಟಿಯನ್ನು ಬಾಳೆಹಣ್ಣು ತರಲು ಕಳಿಸಿದವರು ದೋಚಿದ್ದು ಕೋಟ್ಯಾಂತರ ರೂಪಾಯಿ!

Bengaluru: 90 lakhs of ATM money theft case Robbers got arrested
Bengaluru: 90 lakhs of ATM money theft case Robbers got arrested

ಬ್ಯಾಂಕ್​​ನ ಎಟಿಎಂಗೆ ಹಣ ತುಂಬೋಕೆ ಅಂತ ಹೊರಟಿದ್ದ ವಾಹನದಲ್ಲಿ ಸಾಕಷ್ಟು ಹಣವಿತ್ತು. ಅಷ್ಟೇ ಅಲ್ಲ ಸೆಕ್ಯೂರಿಟಿ ಗಾರ್ಡ್ ಕೂಡ ಇದ್ದ. ಆದರೇ ಗಾಡಿಯಲ್ಲಿದ್ದವರೇ ಹಣ ದೋಚೋಕೆ ಪ್ಲಾನ್​ ಹಾಕಿದ್ದರು.

ad

 

ಅದಕ್ಕೆ ಸೆಕ್ಯೂರಿಟಿ ಗಾರ್ಡ್​​​​ನ್ನು ಬಾಳೆಹಣ್ಣು ತರೋ ನೆಪದಲ್ಲಿ ಕಳಿಸಿದ್ದರು. ಅಷ್ಟೇ ಆತ ಬಾಳೆಹಣ್ಣಿನ ಜೊತೆ ವಾಪಸ್ಸಾದಾಗ ಅಲ್ಲಿ ಹಣ ತುಂಬಿದ್ದ ವಾಹನವೇ ಇರಲಿಲ್ಲ. ಹೀಗೆ ಬೆಂಗಳೂರಿನಲ್ಲಿ ನಡೆದಿದ್ದ ರಾಜ್ಯವನ್ನೇ ಬೆಚ್ಚಿಬೀಳಿಸುವ ಸಿಎಂಎಸ್​​ ಕ್ಯಾಶ್​ ಕಳ್ಳತನ ಪ್ರಕರಣವನ್ನು ಕೊನೆಗೂ ಪೊಲೀಸರು ಬೇಧಿಸಿದ್ದು, ಆರೋಪಿಗಳನ್ನು ಬಂಧಿಸಿದ್ದಾರೆ.
ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಸಿಎಂಎಸ್ ಕ್ಯಾಶ್ ವಾಹನದ ಕಳ್ಳತನದ ಪ್ರಕರಣವನ್ನು ಪೊಲೀಸ್ರು ಬೇಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾರಾಯಣಸ್ವಾಮಿ ನರಸಿಂಹರಾಜು ರಿಜ್ವಾನ್ ಪಾಷಾ, ಜಗದೀಶ್ ಹಾಗೂ ರವಿ ಎಂಬುವವರನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳೆಲ್ಲರು ಸಿಎಂಎಸ್ ಕಂಪನಿಯ ಉದ್ಯೋಗಿಗಳಾಗಿದ್ದು ತಮಗೆ ಇದ್ದ ವೈಯಕ್ತಿಕ ಸಾಲಗಳನ್ನು ತೀರಿಸಲು ಕೃತ್ಯ ಎಸಗಿದ್ದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

 

ದಿನಾಂಕ 29 ರಂದು ಆರೋಪಿಗಳು ಸಿಎಂಎಸ್ ಕಂಪನಿಯ ವಾಹನ ಹಾಗೂ 1 ಕೋಟಿ 12 ಲಕ್ಷ ಹಣದೊಂದಿಗೆ ಪರಾರಿಯಾಗಿದ್ದರು. ಸದ್ಯ ಆರೋಪಿಗಳೀಂದ 1 ಕೊಟಿ ಮೂರು ಲಕ್ಷ ನಗದು, ಎರಡು ಕಾರು ಒಂದು ಬೈಕ್ ಹಾಗೂ ಒಂದು ಡಮ್ಮಿ ಏರ್ ಗನ್ ವಶಪಡಿಸಿಕೊಂಡಿದ್ದಉ ತನಿಖೆ ಮುಂದುವರೆಸಿದ್ದಾರೆ.

ಆರೋಪಿಗಳಾದ ನರಸಿಂಹರಾಜು, ನಾರಾಯಣಸ್ವಾಮಿ ಹಾಗೂ ರಿಜ್ವಾನ್ ಭಾಷಾಗೆ ಬೆಟ್ಟಿಂಗ್ ಜೂಜು ರೇಸ್ ಆಡುವ ವಿಪರೀತ ಹುಚ್ಚಿತ್ತು. ಅದ್ದರಿಂದಲೆ ಮೂವರು ಸುಮಾರು 50 ಲಕ್ಷ ಸಾಲ ಮಾಡಿಕೊಂಡಿದ್ದರು. ಹೀಗಾಗಿ ದಿನ ಹಣ ಸಂಗ್ರಹಿಸುತ್ತಿದ ಇವರಿಗೆ ಹಣ ನೋಡಿ ಸುಲಭ ದಾರಿಯಲ್ಲಿ ಹಣ ಸಂಗ್ರಹಿಸಲು ಸ್ಕೆಚ್ ಹಾಕುತ್ತಿದ್ದರು. ಆದ್ದರಂತೆ ಮೂವರು ಸೇರಿ ಪ್ಲಾನ್ ಮಾಡಿ 29 ನೇ ತಾರೀಖು ಗಾಡಿಯಲ್ಲಿದ್ದ ಸೆಕ್ಯೂರಿಟಿಯನ್ನ ಬಾಳೆ ಹಣ್ಣು ತೆಗೆದುಕೊಂಡು ಬಾ ಎಂದು ಕಳಿಸಿ ಹಣದ ವಾಹನದ ಸಮೇತ ಪರಾರಿಯಾಗಿದ್ದರು.

 

ಸಿಎಂಎಸ್ ಕಂಪನಿ ಬೃಹತ್ ವ್ಯಾಪಾರ ಮಳಿಗೆಗಳಿಂದ ಹಣ ಸಂಗ್ರಹಿಸಿ ಬ್ಯಾಂಕಿನಲ್ಲಿ ಅವರ ಖಾತೆಗೆ ಹಣ ಹಾಕುತ್ತಾರೆ. ಜನವರಿ 25 ಕರ್ನಾಟಕ್ ಬಂದ್, 26 ಗಣರಾಜ್ಯೋತ್ಸವ 27, 28 ವಿಕೇಂಡ್ ಇತ್ತು. ಹಾಗಾಗಿ 29 ನೇ ತಾರೀಖು ಸೋಮವಾರ ಎಲ್ಲಾ ಕಡೆ ಜಾಸ್ತಿ ಹಣ ಸಂಗ್ರಹವಾಗುವುದರಿಂದ ಇದೇ ಸರಿಯಾದ ಸಮಯ ಪರಾರಿಯಾಗಲು ಎಂದು ಆರೋಪಿಗಳು ಮೊದಲೇ ನಿರ್ಧರಿಸಿದ್ದರು. ಒಟ್ಟಿನಲ್ಲಿ ಎಟಿಎಂ ಹಣವನ್ನೇ ಟಾರ್ಗೆಟ್​ ಮಾಡಿದವರು ಅಂದರ್ ಆಗಿದ್ದು, ಪೊಲೀಸರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.