3 ದಿನಗಳಿಂದ ನಾಪತ್ತೆಯಾದ ಆ ಖ್ಯಾತ ವೈದ್ಯರು ಪತ್ತೆಯಾಗಿದ್ದು ಅರೆಬರೆ ಬೆಂದ ಶವವಾಗಿ!! ಇದರ ಹಿಂದೆ ಯಾರ್ಯಾರಿದ್ದಾರೆ? ಪೋಲೀಸರು ಏನಂತಾರೆ?

   ಪ್ರಖ್ಯಾತ ವೈದ್ಯನ ಹತ್ಯೆ.. ಹೆಂಡತಿ ಅಳಿಯ ಸೇರಿಕೊಂಡು ವೈದ್ಯನ ಕೊಲೆ ಮಾಡಿರೋ ಶಂಕೆ.. ಆಸ್ತಿ ಹಾಗೂ ಹಣಕಾಸಿನ ವಿಷಯಕ್ಕೆ ಬಿತ್ತು ವೈದ್ಯನ ಹೆಣ…

ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದ ಹುಬ್ಬಳ್ಳಿಯ ಪ್ರಖ್ಯಾತ ವೈದ್ಯ ಡಾ: ಬಾಬಾ ಹುಂಡೇಕರ್ ಅವರನ್ನು ಹತ್ಯೆ ಮಾಡಿರೋ ಶಂಕೆ ವ್ಯಕ್ತವಾಗಿದೆ. ಆಸ್ತಿ ಹಾಗೂ ಹಣಕಾಸಿನ ವಿಷಯಕ್ಕಾಗಿ ಪತ್ನಿ ಶಶಿಕಲಾ ಹುಂಡೇಕರ್ ಹಾಗೂ ಅಳಿಯ ನವೀನ ಮುಲ್ಕಿಗೌಡ ಸೇರಿದಂತೆ ಹಲವರು ಸೇರಿಕೊಂಡು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಕೊಲೆಯಾದ ವೈದ್ಯ ಡಾ: ಬಾಬು ಹುಂಡೇಕರ್ ‌
ಅರೆ ಬೆಂದ ವೈದ್ಯರ ಶವ

ಹುಬ್ಬಳ್ಳಿಯ ಜಯನಗರ ನಿವಾಸಿಯಾದ ಡಾ: ಬಾಬು ಹುಂಡೇಕರ್ ಅವರನ್ನು ಮನೆಯಲ್ಲಿ ಮಾರಕಾಸ್ತ್ರಗಳಿಂದ ಕೊಲೆ ಮಾಡಿ ನಂತರ ಹುಬ್ಬಳ್ಳಿ ತಾಲೂಕಿನ ಕುಸುಗಲ್ ಹಾಗೂ ಇಂಗಳಹಳ್ಳಿ ಗ್ರಾಮದ ಬಳಿ ಶವವನ್ನು ಅರೆಬರೆಯಾಗಿ ಸುಡಲಾಗಿದ್ದು, ಶವ ಪತ್ತೆಯಾಗಿದ್ದು, ಇದು ಮೃತ ವೈದ್ಯ ಬಾಬು ಹುಂಡೇಕರ್ ಅವರದೇ ಶವ ಎನ್ನಲಾಗಿದ್ದು ಶವ ಪರೀಕ್ಷೆ ನಡೆಯುತ್ತಿದೆ.

ಕೊಲೆ ಆರೋಪಿ ಶಶಿಕಲಾ

ಡಾ: ಬಾಬು ಹುಂಡೇಕರ್ ಅವರ ತಂದೆ ಸೇರಿದಂತೆ ಶುಶ್ರೂತ ನರ್ಸಿಂಗ್ ಹೋಮ್ ಸಿಬ್ಬಂದಿಗಳು ವಿದ್ಯಾನಗರ ಪೊಲೀಸ ಠಾಣೆಯ ಮುಂದೆ ಕೆಲವೊತ್ತು ಪ್ರತಿಭಟನೆ ನಡೆಸಿದ್ರು. ಕೊಲೆ ಪ್ರಕರಣವನ್ನು ಮುಚ್ಚಿ ಹಾಕುವದು ಹಾಗೂ ಕೊಲೆ ಆರೋಪಿಗಳಿಗೆ ರಕ್ಷಣೆ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಕೊಲೆ ಆರೋಪಿಗಳು
ಕೊಲೆ ಆರೋಪಿಗಳು

ಇನ್ನೂ ಮೃತ ವೈದ್ಯನ ಮನೆಗೆ ತೆರಳಿದ ಕಮಿಷನರ್ ಎಮ್ ಎನ್ ನಾಗರಾಜ್ ಮನೆಗೆ ತೆರಳಿ ಪರಿಶೀಲನೆ ನಡೆದಿದ್ದು, ಪ್ರಕರಣವನ್ನು ಡಿಸಿಪಿ ರೇಣುಕಾ ಸುಕುಮಾರ ನೇತೃತ್ವದಲ್ಲಿ ತನಿಖೆಗೆ ಆದೇಶ ಮಾಡಿದ್ದಾರೆ.

ಮೇಲ್ನೋಟಕ್ಕೆ ವೈದ್ಯ ಡಾ: ಬಾಬು ಹುಂಡೇಕರ್ ಅವರ ಹತ್ಯೆ ಹಣ ಹಾಗೂ ಆಸ್ತಿಗಾಗಿ ನಡೆದಿದೆ ಎಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದು , ಸಂಪೂರ್ಣ ಪ್ರಕರಣವನ್ನ ಬೇಧಿಸುವ ಕೆಲಸವನ್ನು ಹುಬ್ಬಳ್ಳಿ ಪೊಲೀಸರು ಮಾಡಬೇಕಾಗಿದೆ..

ವರದಿ: ಮಂಜು ಪತ್ತಾರ ಬಿಟಿವಿ ಹುಬ್ಬಳ್ಳಿ..