ನವೀನ್ ಬಂಧನ ಖಂಡಿಸಿ ಮುತಾಲಿಕ್ ಪ್ರತಿಭಟನೆ!!

 

ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ವಿಚಾರಣೆ ಎದುರಿಸುತ್ತಿರುವ ಕೆ.ಟಿ ನವೀನ್ ಬಂಧನ ಖಂಡಿಸಿ ಹಿಂದೂ ಪರ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಬೆಂಗಳೂರಿನ ಮೌರ್ಯ ಸರ್ಕಲ್ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ನವೀನ್ ಕುಮಾರ್ ಬಂಧನ ಖಂಡಿಸಿ ಪ್ರತಿಭಟನೆ ನಡೆಯಿತು. ವಕೀಲ ಅಮೃತೇಶ್ ಸೇರಿದಂತೆ ಹಲವು ಹಿಂದೂಪರ ಕಾರ್ಯಕರ್ತರು ಭಾಗಿಯಾಗಿದ್ರು. ಇದು ರಾಜ್ಯ ಸರ್ಕಾರದ ಷಡ್ಯಂತ್ರ ಎಂದು ಆರೋಪಿಸಿದ್ರು. ಮಾಲೇಂಗಾವ್ ಸ್ಫೋಟ ಪ್ರಕರಣದಂತೆ ಇಲ್ಲೂ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ. ಹಿಂದು ಕಾರ್ಯಕರ್ತರ ವಿರುದ್ಧ ಸರ್ಕಾರ ಕುತಂತ್ರ ನಡೆಸ್ತಿದ್ರೂ ಬಿಜೆಪಿ ಸುಮ್ಮನೆ ಕುಳಿತಿದೆ.

ಬಿಜೆಪಿಯವರಿಗೆ ನಾಚಿಕೆಯಾಗ್ಬೇಕು.ಎಪ್ಪತ್ತೈದು ವರ್ಷವಾದ ಮುದುಕ ನೀನು ಎಂದು ಯಡಿಯೂರಪ್ಪರಿಗೆ ವಕೀಲ ಅಮೃತೇಶ್ ವ್ಯಂಗ್ಯವಾಡಿದ್ರು. ಇನ್ನೂ, ಪ್ರಮೋದ್ ಮುತಾಲಿಕ್ ಮಾತನಾಡಿ ನವೀನ್ ಅತ್ಯಂತ ಅಮಾಯಕ ಹಿಂದೂ ಕಾರ್ಯಕರ್ತ. ಗೋರಕ್ಷಣೆ, ಲವ್ ಜಿಹಾದ್, ಮತಾಂತರವನ್ನು ತಡೆಯಲು ಹೋರಾಟ ಮಾಡ್ತಿರುವ ಹಿಂದೂ ಕಾರ್ಯಕರ್ತ. ಆದ್ರೆ, ವ್ಯವಸ್ಥಿತ ಸಂಚು ಮಾಡಿ, ಪೊಲೀಸ್ ಇಲಾಖೆ ದುರ್ಬಳಕೆ ಮಾಡಿಕೊಂಡು ಈ ರೀತಿ ಬಂಧಿಸಲಾಗಿದೆ ಅಂತಾ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ರು.