ಕಡಲತಡಿಗೆ ಬಂದ್ರು ಶುಭಾ ಪೂಂಜಾ-ಸುಕೃತಾ-ಯಾಕೆ ಅಂದ್ರಾ ನೀವೆ ನೋಡಿ.!!

ಸದಾ ಫಿಲ್ಮ್​​ ಶೂಟಿಂಗ್​​ನಲ್ಲಿ ಬ್ಯುಸಿಯಾಗಿರ್ತಿದ್ದ ಸ್ಯಾಂಡಲ್​ವುಡ್​​​ ನಟಿ ಮಣಿಯರಿಬ್ಬರು ನಿನ್ನೆ ಕಡಲನಗರಿ ಕಾರವಾರದಲ್ಲಿ ಸಖತ್​​ ಎಂಜಾಯ್​ ಮಾಡಿದ್ರು.

ನಟಿ ಶುಭಾ ಪೂಂಜಾ ಮತ್ತು ಸುಕೃತಿ ದೇಶಪಾಂಡೆ ಇಲ್ಲಿನ ಜಂಗಲ್ ಬೀಚ್ ರೇಸಾರ್ಟ್ ಗೆ ಆಗಮಿಸಿದ್ರು.
ಹೌದು ಜಂಗಲ್ ರೆಸಾರ್ಟ್​​ ಆರಂಭಿಸಿರುವ ಸ್ಕೂಬಾ ಡ್ರೈವಿಂಗ್ ತರಬೇತಿ ಶಾಲೆ ಹಾಗೂ ನೂತನ ಕಟ್ಟಡದ ಉದ್ಘಾಟನೆಗೆ ಆಗಮಿಸಿದ ನಟಿಮಣಿಯರು ಪ್ಯಾರಾ ಮೋಟಾರ್​ನಲ್ಲಿ ಕುಳಿತು ಆಕಾಶದಲ್ಲಿ ತೇಲಾಡಿ ಸಂಭ್ರಮಿಸಿದ್ದರು. ನೈಸರ್ಗಿಕ ಸೊಬಗಿನ ತಾಣ ಕಾರವಾರದ ರವೀಂದ್ರನಾಥ ಟಾಗೋರ ಕಡಲ ತೀರದಲ್ಲಿ ಸಖತ್ ಎಂಜಾಯ್ ಮಾಡಿದ್ರು. ಇನ್ನು ಕಾರವಾರದಲ್ಲಿ ಸ್ಕೂಬಾ ಡೈವಿಂಗ್​​ ಎಂಜಾಯ್ ಮಾಡಿದ ಸುಕೃತಿ ದೇಶಪಾಂಡೆ ಈ ಬಗ್ಗೆ ಮಾತನಾಡಿ, ಯೂಥ್ಸ್​ ಈ ರೀತಿ ಸಾಹಸದ ಚಟುವಟಿಕೆಯಲ್ಲಿ ಪಾಲ್ಗೊಳ್ಳಬೇಕು.

ನಾನು ಗ್ರೀನರಿ ಮತ್ತು ಸಮುದ್ರದ ಬಳಿ ಸ್ಕೂಬಾ ಡೈವಿಂಗ್​ ಮಾಡಿ ಎಂಜಾಯ್​ ಮಾಡಿದೆ ಎಂದರು. ಇನ್ನು ಸ್ಕೂಬಾ ಡೈವಿಂಗ್ ನಲ್ಲಿ ಪಾಲ್ಗೊಂಡ ಶುಭಾ ಪೂಂಜಾ ಮಾತಾಡಿ, ಸ್ಕೂಬಾ ಡೈವಿಂಗ್​​ ಗೆ ಹಲವೆಡೆ ಅವಕಾಶವಿದ್ದರೂ ಇದನ್ನು ಕಲಿಯಲು ಮಾತ್ರ ಬೇರೆ ದೇಶಕ್ಕೆ ತೆರಳಬೇಕಾದ ಅಗತ್ಯವಿತ್ತು. ಆದರೇ ಇದೀಗ ಕರ್ನಾಟಕದಲ್ಲೇ ಸ್ಕೂಬಾ ಡೈವಿಂಗ್ ಆರಂಭವಾಗಿರೋದು ಯೂಥ್ಸ್​ ನೆರವಾಗಲಿದೆ ಅಂತಾರೆ ಶುಭಾ. ಒಟ್ಟಿನಲ್ಲಿ ಸ್ಕೂಬಾ್​ ಡೈವಿಂಗ್​ನಲ್ಲಿ ಶುಭಾ-ಸುಕೃತಾ ಎಂಜಾಯ್ ಮಾಡಿದ್ರೆ, ಸುಂದರ ನಟಿಮಣಿಯರನ್ನು ನೋಡಿ ಕಡಲ ತಡಿಯ ಜನರು ಸಂಭ್ರಮಿಸಿದರು.