ತಮಿಳುನಾಡಿನ ಅಮ್ಮನಿಗೆ ಮಕ್ಕಳಿತ್ತೆ ? ಕುಮಾರಿ ಜಯಲಲಿತಾ ಶ್ರೀಮತಿ ಆಗಿದ್ದು ಯಾವಾಗ ?

ತಮಿಳುನಾಡಿನ ಅಮ್ಮ ಜಯಲಲಿತಾ ನಿಧನದ ನಂತ್ರ ಅವ್ರ ಸುತ್ತ ಹೊಸ ವಿವಾದಗಳೇ ಸುತ್ತಿಕೊಂಡಿವೆ. ತೆಲುಗಿನ ಪ್ರಖ್ಯಾತ ನಟ ಶೋಭನ್​​ ಬಾಬು ಮತ್ತು ಜಯಲಲಿತಾ ನಡ್ವೆ ಮದ್ವೆ ಆಗಿತ್ತು. ಅವ್ರಿಗೆ ಒಂದು ಮಗುವೂ ಇತ್ತು ಎನ್ನುವ ಸುದ್ದಿ ಇತ್ತು. ಅದಕ್ಕೆ ಪುಷ್ಠಿ ನೀಡುವಂತಹ ದಾಖಲೆಯೊಂದು ಈಗ ಹರಿದಾಡುತ್ತಿದೆ. ವಸಂತಮಣಿ ಎಂಬುವರಿಗೆ ಶೋಭನ್​​ ಬಾಬು ಮತ್ತು ಜಯಲಲಿತಾ ಗಂಡು ಮಗುವನ್ನು ದತ್ತು ನೀಡಿದ್ದ ಅಂಶ ಈ ದಾಖಲೆಯಲ್ಲಿದೆ ಎಂದು ಹೇಳಲಾಗ್ತಿದೆ.

ad


ದತ್ತು ನೀಡಿರುವ ಸರ್ಟಿಫಿಕೇಟ್​ ಇದೀಗ ಅಂತರ್ಜಾಲದಲ್ಲಿ ಹರಿದಾಡುತ್ತಿದೆ. 1986ರಲ್ಲಿ ಈರೋಡ್ ನಲ್ಲಿ ಜಯಲಲಿತಾ ಅವರು ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾಗ ವಸಂತಮಣಿ ಪರಿಚಿತರಾಗಿದ್ದರು. ಆಕೆಗೆ ಇಬ್ಬರೂ ತಮ್ಮ ಮಗುವನ್ನು ದತ್ತು ನೀಡಿದ್ದರು ಎನ್ನುವ ಮಾಹಿತಿ ಇದೆ.

ಆದ್ರೆ ಆ ವೇಳೆಗಾಗಲೇ ಎಂಜಿಆರ್​​ ಜೊತೆ ಜಯಲಲಿತಾ ಸಖ್ಯ ಬೆಳೆಸಿದ್ದರು. ಇದೇ ಕಾರಣಕ್ಕೆ ಶೋಭನ್ ಬಾಬುರಿಂದ ದೂರ ಆಗಿದ್ದರು. ಆಗಾಗ ಈ ಮಗುವನ್ನು ಎಂಜಿಆರ್​​ ಕೂಡಾ ಬಂದು ನೋಡಿಕೊಂಡು ಹೋಗುತ್ತಿದ್ದರು ಅನ್ನೋ ಮಾಹಿತಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

 

ಹಾಗೆ ನೋಡಿದ್ರೆ ಜಯಾ ದತ್ತು ಮಗುವಿನ ವಿವಾದ ಇದೇನು ಹೊಸದಲ್ಲ. ಜೆ ಕೃಷ್ಣ ಮೂರ್ತಿ ಎಂಬಾತ ನಾನು ಜಯಲಲಿತಾ ಮತ್ತು ಶೋಭನ್​ ಬಾಬು ಮಗ ಅಂತಾ ಹೈಕೋರ್ಟ್​ ಮೊರೆ ಹೋಗಿದ್ದಾನೆ. ತಾನು ತೆಲುಗು ಸೂಪರ್ ಸ್ಟಾರ್ ಶೋಭನ್ ಬಾಬು ಹಾಗೂ ಜಯಲಲಿತಾ ದಂಪತಿಗೆ ಜನಿಸಿದ್ದೇನೆ. ನನ್ನನ್ನು ವಸಂತಮಣಿ ಎಂಬ ಮಹಿಳೆಗೆ ದತ್ತು ನೀಡಲಾಗಿತ್ತು. ಈ ಬಗ್ಗೆ ಕೃಷ್ಣಮೂರ್ತಿಯನ್ನು ದತ್ತು ಪಡೆದಿರುವ ದಾಖಲೆಯನ್ನು ಕೂಡ ಕೃಷ್ಣಮೂರ್ತಿ ಕೋರ್ಟ್​ಗೆ ಸಲ್ಲಿಸಿದ್ದಾರೆ.