ಆಳ್ವಾಸ ಕ್ಯಾಂಪಸ್​​ನಲ್ಲಿ ಮುಂದುವರಿದ ಆತ್ಮಹತ್ಯೆ ಸರಣಿ- ಐದನೇ ಮಹಡಿಯಿಂದ ಹಾರಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಸಾವು

ಬೆಂಗಳೂರು ಮೂಲದ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣದ ನೆನಪು ಮಾಸುವ ಮುನ್ನವೇ ಮಂಗಳೂರಿನ ಆಳ್ವಾಸ್​​ನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೊರ್ವಳು ಆತ್ಮಹತ್ಯೆಗೆ ಶರಣಾಗಿದ್ದು, ಪೋಷಕರಲ್ಲಿ ಆತಂಕ ಮೂಡಿದೆ. ಚಿತ್ರದುರ್ಗ ಮೂಲದ ರಚನಾ ಕಾಲೇಜಿನ ಲೈಬ್ರರಿಯ ಐದನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಶರಣಾಗಿದ್ದು ನಿನ್ನೆ ಸಂಜೆ ವೇಳೆಗೆ ಘಟನೆ ನಡೆದಿದೆ. ಇನ್ನು ರಚನಾ ಪೋಷಕರು ತಮ್ಮ ಪುತ್ರಿದು ಆತ್ಮಹತ್ಯೆಯಲ್ಲ ಕೊಲೆ ಎಂದು ಆರೋಪಿಸಿದ್ದಾರೆ.

ಮಂಗಳೂರಿನ ಆಳ್ವಾಸ ಶಿಕ್ಷಣ ಸಂಸ್ಥೆಯಲ್ಲಿ ನಿನ್ನೆ ಸಂಜೆ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೊರ್ವಳ ಲೈಬ್ರರಿಯ 5 ನೇ ಮಹಡಿಯಿಂದ ಹಾರಿ ಆತ್ಮಹತ್ಯೆಗೆ ಶರಣಾಗಿದ್ದು, ತಾನು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವುದರಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ರಚನಾ ಡೆತ್ ನೋಟ್ ಬರೆದಿಟ್ಟಿದ್ದಾಳೆ ಎನ್ನಲಾಗಿದೆ.

ಇನ್ನು ಸ್ಥಳಕ್ಕೆ ಆಗಮಿಸಿದ ರಚನಾ ಪೋಷಕರು ಇದು ಆತ್ಮಹತ್ಯೆಯಲ್ಲ ಕೊಲೆ. ನಮ್ಮ ಮಗಳಿಗೆ ಯಾವುದೇ ಆರೋಗ್ಯ ಸಮಸ್ಯೆ ಇರಲಿಲ್ಲ. ಕ್ಯಾನ್ಸರ್ ಇದೆ, ಕಿಡ್ನಿ ಸಮಸ್ಯೆ ಅಂತ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಅವರೇ ನಮ್ಮ ಮಗಳನ್ನು ಕೊಂದು ಸತ್ಯ ಮುಚ್ಚಿ ಹಾಕಿದ್ದಾರೆ. ಎಂದು ಆರೋಪಿಸಿದ್ದಾರೆ. ಅಲ್ಲದೇ ಡೆತ್​ ನೋಟ್​​ನಲ್ಲಿರುವ ಹ್ಯಾಂಡ್​ ರೈಟಿಂಗ್​​ ರಚನಾದ್ದಲ್ಲ. ಆಕೆ ಐದನೇ ಮಹಡಿಯಿಂದ ಬಿದ್ದಿದ್ದರೇ ಮೈಮೇಲೆ ಗಾಯಗಳಾಗಿರಬೇಕಿತ್ತು. ಆದರೇ ಒಂದು ಹನಿ ರಕ್ತವೂ ಬರದೇ ಆಕೆ ಸಾವನ್ನಪ್ಪಿದ್ದು, ಇದು ಕೊಲೆ ಎಂದು ಆರೋಪಿಸಿದ್ದಾರೆ. ಮೂಡಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸಿದ್ದಾರೆ.