ಬೆಂಗಳೂರಿನ ಕೆ ಆರ್ ಪುರಂ ನಲ್ಲಿ ಬಿಜೆಪಿ ಕಾರ್ಯಕರ್ತರ ಮನೆಗೆ ನುಗ್ಗಿ ದಾಂಧಲೆ!! ಮಾಡಿಸಿದ್ಯಾರು..?

ಬೆಂಗಳೂರಿನ ಕೆ.ಆರ್​​.ಪುರ ಬಿಹಾರವಾಗ್ತಿದೆಯಾ ಅನ್ನೋ ಅನುಮಾನ ಶುರುವಾಗಿದೆ. ಕೆ.ಆರ್​.ಪುರ ಶಾಸಕ ಭೈರತಿ ಬಸವರಾಜ್​ ಬೆಂಬಲಿಗರ ಗೂಂಡಾಗಿರಿ ಮಿತಿ ಮೀರ್ತಿದೆ. ಗೋಡೆ ಬರಹ ವಿಚಾರದಲ್ಲಿ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ಮಾರಾಮಾರಿ ನಡೆದಿದ್ದು, ಬಿಜೆಪಿ ಕಾರ್ಯಕರ್ತರ ಮನೆಗೆ ನುಗ್ಗಿ ಭೈರತಿ ಬೆಂಬಲಿಗರು ದಾಂಧಲೆ ನಡೆಸಿದ್ದಾರೆ. ಬೆಂಗಳೂರಿನ ರಾಮಮೂರ್ತಿನಗರದ ಮುನೇಶ್ವರ ನಗರದಲ್ಲಿ ಘಟನೆ ನಡೆದಿದೆ. ‘ಈ ಬಾರಿ ಬಿಜೆಪಿ’ ಎಂದು ಗೋಡೆ ಮೇಲೆ ಬರೆದಿದ್ದಕ್ಕೆ ಮನೆಗಳಿಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಬಿಜೆಪಿ ಕಾರ್ಯಕರ್ತರ ಮೇಲೆ ಕೈ ಕೈ ಮಿಲಾಯಿಸಿರುವ ಭೈರತಿ ಬೆಂಬಲಿಗರು, ಮಹಿಳೆಯರು ಅನ್ನೋದನ್ನೂ ನೋಡದೇ ಹಲ್ಲೆ ಮಾಡಿದ್ದಾರೆ.

ad

ಇನ್ನು, ಈ ಸಂಬಂಧ ಬಿಟಿವಿಗೆ ಪ್ರತಿಕ್ರಿಯಿಸಿರುವ ಮಾಜಿ ಶಾಸಕ ನಂದೀಶ್​ ರೆಡ್ಡಿ, ಕೆ.ಆರ್​.ಪುರ ಕ್ಷೇತ್ರದಲ್ಲಿ ಡ್ರಗ್ಸ್ ಮಾಫಿಯಾ​, ಗೂಂಡಾಗಿರಿಗೆ ಶಾಸಕರು ಬೆಂಬಲ ನೀಡ್ತಿದ್ದಾರೆ. ಭೈರತಿ ಬಸವರಾಜ್​ ಕುಮ್ಮಕ್ಕಿನಿಂದಲೇ ಹಲ್ಲೆ ನಡೆದಿದೆ. ಈ ಬಗ್ಗೆ ಬೆಂಗಳೂರು ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ ಚರ್ಚಿಸುತ್ತೇವೆ ಅಂತ ತಿಳಿಸಿದರು.