ದಯಾನಂದ ಸಾಗರ್ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ – ರ್ಯಾಗಿಂಗ್​ ಆರೋಪ!

Bengaluru: Engineering Student Commit Suicide for Ragging.
Bengaluru: Engineering Student Commit Suicide for Ragging.

ಸಿಲಿಕಾನ ಬೆಂಗಳೂರಿನಲ್ಲಿ ಮತ್ತೊಂದು ವಿದ್ಯಾರ್ಥಿ ಆತ್ಮಹತ್ಯೆ ಸದ್ದು ಮಾಡುತ್ತಿದೆ.

ad

 

ಹೌದು ಶಂಕಿತ್ ರ್ಯಾಗಿಂಗ್​ಗೆ ಇಂಜೀನಿಯರಿಂಗ್ ವಿದ್ಯಾರ್ಥಿಯೊಬ್ಬಳು ಬಲಿಯಾಗಿದ್ದು, ಕುಟುಂಬಸ್ಥರು ಕಾಲೇಜಿನ ಮುಖ್ಯಸ್ಥರು ಹಾಗೂ ಇತರ ವಿದ್ಯಾರ್ಥಿಗಳತ್ತ ಬೊಟ್ಟು ಮಾಡಿದ್ದಾರೆ.ಕುಮಾರಸ್ವಾಮಿ ಲೇಔಟ್​​ನ ದಯಾನಂದ ಸಾಗರ ಕಾಲೇಜಿನಲ್ಲಿ ಎರಡನೇ ಸಿವಿಲ್​ ಇಂಜೀನಿಯರಿಂಗ್ ಡಿಪ್ಲೋಮಾ ಓದುತ್ತಿದ್ದ ಮೇಘನಾ ಆತ್ಮಹತ್ಯೆಗೆ ಶರಣಾದ ದುರ್ದೈವಿ. ಕಾಲೇಜು ಚುನಾವಣೆಯಲ್ಲಿ ಮೇಘನಾ ಸ್ಪರ್ಧಿಸಿದ್ದಳು. ಆದರೇ ಸೋಲು ಕಂಡಿದ್ದಳು. ಹೀಗಾಗಿ ಎದುರು ಪಾರ್ಟಿಯವರನ್ನು ಮೇಘನಾ ಅವರನ್ನು ಹಂಗಿಸಿದ್ದರು ಎನ್ನಲಾಗಿದೆ. ಇದರಿಂದ ಮನನೊಂದು ಮೇಘನಾ ಮನೆಯಲ್ಲೇ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.  ಮೇಘನಾ ಕುಟುಂಬಸ್ಥರು ಮೇಘನಾ ಎಚ್​ಓಡಿ ರಾಜಕುಮಾರ್ ಹಾಗೂ ನಾಲ್ವರು ವಿದ್ಯಾರ್ಥಿಗಳ ವಿರುದ್ಧ ರ್ಯಾಗಿಂಗ್ ಆರೋಪ ಮಾಡಿದ್ದಾರೆ.

 

ಅಲ್ಲದೇ ಕಾಲೇಜಿನಲ್ಲಿ ವಿದ್ಯಾರ್ಥಿಗಳನ್ನು ಯಾರು ಗಮನಿಸೋದಿಲ್ಲ. ಅವರ ಬಗ್ಗೆ ಕೇರ್ ತೆಗೆದುಕೊಳ್ಳೋದಿಲ್ಲ. ಹೀಗಾಗಿ ಮೇಘನಾ ಮೇಲೆ ರ್ಯಾಂಗಿಗ್​ ನಡೆದಿದೆ. ಅದಕ್ಕೆ ಆಕೆ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಆರೋಪಿಸಿದ್ದಾರೆ. ರಾಜರಾಜೇಶ್ವರಿ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.  ಇನ್ನು ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ದಯಾನಂದ ಸಾಗರ್ ಕಾಲೇಜಿನ ವೈಸ್ ಪ್ರಿನ್ಸಿಪಲ್ ನಮ್ಮ ಕಾಲೇಜು ವಿದ್ಯಾರ್ಥಿ ಸೂಸೈಡ್ ಮಾಡಿಕೊಂಡಿರುವ ವಿಚಾರ ಕೇಳಿ ಬೇಸರವಾಗಿದೆ. ಮೇಘನಾ ಅಂತ ಪಸ್ಟ್ ಇಯರ್ ನಲ್ಲಿ CTM ನಲ್ಲಿ ಸ್ಟೆಡಿ ಮಾಡುತ್ತಿದ್ದಳು. ನಮ್ಮ ಕಾಲೇಜಿನಲ್ಲಿ ಅಧಿಕೃತವಾಗಿ ಯಾವುದೇ ರೀತಿಯ ಯೂನಿಯನ್ , ಕ್ಲಸ್ ರೆಪ್ರೆಸೆಂಟೇಟಿವ್ಸ್ ಮತ್ತು ವಾಟ್ಸಪ್ ಗ್ರೂಪ್ ಗಳಿಗೆ ಅನುಮತಿ ಕೊಟ್ಟಿಲ್ಲ.ಸ್ ವಿಚಾರವಾಗಿ ವಿದ್ಯಾರ್ಥಿಗಳು ಆ ರೀತಿಯ ಗ್ರೂಪ್ ಅಥವಾ ಕ್ಲಾಸ್ ರೆಪ್ರೆಸೆಂಟೇಟಿವ್ಸ್ ಮಾಡಿಕೊಂಡಿರಬಹುದು. ಆಕೆ ಕೆಲದಿನಗಳಿಂದ ಕ್ಲಾಸ್​​ಗೆ ಗೈರಾಗಿದ್ದಳು. ನಮಗೆ ಆಕೆ ಬಗ್ಗೆ ಗೊತ್ತಿರುವ ಕೆಲ ಮಾಹಿತಿಯನ್ನು ಪೊಲೀಸರಿಗೆ ಕೊಟ್ಟಿದ್ದೇವೆ ಎಂದರು. ಒಟ್ಟಿನಲ್ಲಿ ಬಾಳಿಬದುಕಬೇಕಿದ್ದ ವಿದ್ಯಾರ್ಥಿನಿಯೊರ್ವಳು ಕ್ಷುಲಕ ಕಾರಣಕ್ಕೆ ಬಲಿಯಾಗಿದ್ದು, ತನಿಖೆಯಿಂದ ಹೆಚ್ಚಿನ ಮಾಹಿತಿ ಹೊರಬರಬೇಕಿದೆ.