ಕ್ರೂರ ಹತ್ಯೆ ಕಂಡು ಬೆಚ್ಚಿ ಬಿತ್ತು ದೇಶ- ಲವ್ ಜೆಹಾದ್ ಗೆ ಇದೇ ಉತ್ತರ ಎಂದ ಕೊಲೆಗಾರ!!

Caught On Camera: Man Murdered for love indignation in Rajasthan.
Caught On Camera: Man Murdered for love indignation in Rajasthan.

ದೇಶದ ಉದ್ದಗಲಕ್ಕೆ ಲವ್​​ ಜಿಹಾದ್​ ಕಿಚ್ಚು ಹೆಚ್ಚುತ್ತಲೇ ಇದೆ. ರಾಜಸ್ಥಾನದಲ್ಲಿ ಹಿಂದೂ ಯುವತಿಯನ್ನು ವರಿಸಿದ ಅನ್ನೋ ಕಾರಣಕ್ಕೆ ಅನ್ಯಕೋಮಿನ ವ್ಯಕ್ತಿಯನ್ನು ಕೊಡಲಿಯಿಂದ ಕೊಚ್ಚಿ, ಮಚ್ಚಿನಿಂದ ಕತ್ತರಿಸಿ ಬಳಿಕ ಬೆಂಕಿ ಹಚ್ಚಿ ಭಯಾನಕವಾಗಿ  ಕೊಲೆ ಮಾಡಲಾಗಿದ್ದು, ಈ ಹೃದಯವಿದ್ರಾವಕ ಹತ್ಯೆ ದೃಶ್ಯ ಕಂಡು ದೇಶವೇ ಬೆಚ್ಚಿ ಬಿದ್ದಿದೆ.

ಪಶ್ಚಿಮ ಬಂಗಾಳದಿಂದ ವಲಸೆ ಬಂದಿದ್ದ ಮಹಮದ್ ಅಫ್ರಲ್​​​ ಕೊಲೆಯಾದ ವ್ಯಕ್ತಿ. ಈತ ಕೆಲದಿನದ ಹಿಂದೆ ಅನ್ಯಕೋಮಿನ ಯುವತಿಯೊಬ್ಬಳನ್ನು ಪ್ರೀತಿಸಿ ಮದುವೆಯಾಗಿದ್ದ ಎನ್ನಲಾಗಿದೆ. ಇದನ್ನು ಗಮನಿಸಿದ ಸ್ಥಳೀಯ ವ್ಯಕ್ತಿಯೊರ್ವ ಇದು ಲವ್ ಜೆಹಾದ್ ಎಂದು ಆರೋಪಿಸಿ ಮಹಮದ್​ನನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಮಚ್ಚಿನಿಂದ ಕೊಚ್ಚಿ, ಹಲ್ಲೆ ಮಾಡಿ ಬಳಿಕ ಪೆಟ್ರೋಲ್ ಹಾಕಿ ಸುಟ್ಟಿದ್ದಾನೆ. ಇಷ್ಟೊಂದು ಹೇಯವಾಗಿ ವ್ಯಕ್ತಿಯನ್ನು ಕೊಂದಿದ್ದಲ್ಲದೇ ಅದನ್ನು ಮೊಬೈಲ್​ನಲ್ಲಿ ರೆಕಾರ್ಡ್​ ಮಾಡಿಕೊಂಡಿದ್ದಾನೆ.

 

 

ಬಳಿಕ ಈ ಕ್ರೂರ ಹತ್ಯೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಲವ್ ಜೆಹಾದ್​ ಮಾಡುವ ಎಲ್ಲರಿಗೂ ಇದೇ ಗತಿ ಎಂಬ ಬೆದರಿಕೆ ಒಡ್ಡಿದ್ದಾನೆ. ವಿಡಿಯೋದಲ್ಲಿರುವ ಕ್ರೂರಿಯನ್ನು ಶಂಭೂಲಾಲ್​ ರೇಗಾರ್​ ಎಂಬು ಗುರುತಿಸಲಾಗಿದ್ದು, ಇದೀಗ ಪ್ರಕರಣ ದಾಖಲಿಸಿಕೊಂಡಿರುವ ರಾಜಸ್ಥಾನ ಪೊಲೀಸರು ಈ ವ್ಯಕ್ತಿಯನ್ನು ಬಂಧಿಸಿದ್ದಾರೆ.

ಈತ ಲವ್​ ಜೆಹಾದ್​ ಮಾಡಿದ್ದಾನೆ ಎಂಬ ಕಾರಣಕ್ಕೆ ಮಹಮದ್​​ ನನ್ನು ಕೆಲಸದ ನೆಪದಲ್ಲಿ ಕರೆತಂದು ಹತ್ಯೆ ಮಾಡಿರೋದನ್ನು ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಒಟ್ಟಿನಲ್ಲಿ ಈ ಭರ್ಬರ ಹತ್ಯೆಯ ವಿಡಿಯೋ ದೇಶದಾದ್ಯಂತ ಸಂಚಲನ ಮೂಡಿಸಿದ್ದು ಜನರು ಉಸಿರು ಬಿಗಿಹಿಡಿದು ನೋಡುವಂತಾಗಿದೆ.

1 ಕಾಮೆಂಟ್

Comments are closed.