ವಯೋವೃದ್ಧನನ್ನೂ ಬಿಡಲಿಲ್ಲ ಇವರ ಹಣದ ದಾಹ ..! ಇದು ATM ಮೋಸ..

ವಯೋವೃದ್ಧನನ್ನೂ ಬಿಡಲಿಲ್ಲ ಇವರ ಹಣದ ದಾಹ. 

adಆ ತಾತ ಹಣ ತೆಗೆಯಲು ATM ಬಳಿ ಹೋಗಿದ್ದಾನೆ. ಪಾಪ ವಯಸ್ಸಾದ ಕಾರಣ ಅಲ್ಲಿದ್ದ ಯುವಕರಿಗೆ ನೆರವಾಗಲು ತಿಳಿಸಿದ್ರು. ಅವರು ತಾತನಿಗೇ ಪಂಗನಾಮ ಹಾಕಿ ತಮ್ಮ ಹಣದ ದಾಹ ತೀರಿಸಿಕೊಂಡ್ರು.

ಹೌದು. ಹಣ ವಿತ್​​​ ಡ್ರಾ ಮಾಡಿಕೊಡುವ ನೆಪದಲ್ಲಿ ಹಣ ಎಗರಿಸಿದ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ವೆಂಕಟಗಿರಿ ಗ್ರಾಮದಲ್ಲಿ ನಡೆದಿದೆ. ಮರಿಯಪ್ಪ ಎನ್ನುವವರು ಹಣ ಕಳೆದುಕೊಂಡವರು. ಹಣ ವಿತ್ ಡ್ರಾ ಮಾಡಿಕೊಡೋ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಸಹಾಯ ಕೇಳಿದ ವೃದ್ದನಿಗೆ ಯುವಕರ ತಂಡ ಪಂಗನಾಮ ಹಾಕಿದೆ. ಕಳೆದ 11ರಂದು ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ವೃದ್ಧನಿಂದ ವಂಚಕರು 10 ಸಾವಿರ ರೂಪಾಯಿಯನ್ನು ದೋಚಿದ್ದಾರೆ. ಹಣ ಕಳೆದುಕೊಂಡ ತಾತ ಕಂಗಾಲಾಗಿದ್ದಾರೆ.