ಚಿತ್ರದುರ್ಗದಲ್ಲಿ ಮರ್ಯಾದಾ ಹತ್ಯೆ- ಗರ್ಭಿಣಿ ಮಗಳನ್ನೆ ಕೊಲ್ಲಲು ಯತ್ನಿಸಿದ ಹೆತ್ತವರು!!

Chitradurga: Parents hits his 3 month pregnant daughter's belly.
Chitradurga: Parents hits his 3 month pregnant daughter's belly.

ಮನೆ ಮಗಳು ಅನ್ಯಜಾತಿಯ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದಕ್ಕೆ ಕೋಪಗೊಂಡ ಪೋಷಕರು ಆಕೆಯ ಪತಿಯ ಮನೆಗೆ ನುಗ್ಗಿ ಗರ್ಭಿಣಿಯಾಗಿರುವ ಮಗಳನ್ನು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಈ ಮರ್ಯಾದಾ ಹತ್ಯೆ ಯತ್ನಕ್ಕೆ ಚಿತ್ರದುರ್ಗ ಬೆಚ್ಚಿಬಿದ್ದಿದ್ದು, ಆಕ್ರೋಶ ವ್ಯಕ್ತವಾಗಿದೆ.

Chitradurga: Parents hits his 3 month pregnant daughter's belly.
Chitradurga: Parents hits his 3 month pregnant daughter’s belly.

ಚಿತ್ರದುರ್ಗ ಮೂಲದ ಆಶಾ ಕಳೆದ ಕೆಲ ವರ್ಷದಿಂದ ಚಿಕ್ಕಬೆನ್ನೂರು ಗ್ರಾಮದ ಮಧು ಎಂಬಾತನನ್ನು ಪ್ರೀತಿಸುತ್ತಿದ್ದಳು. ಅದರೇ ಆತ ಬೇರೆ ಜಾತಿಯವನು ಎಂಬ ಕಾರಣಕ್ಕೆ ಆಶಾ ಮನೆಯವರು ಮದುವೆಗೆ ಒಪ್ಪಿರಲಿಲ್ಲ. ಹೀಗಾಗಿ ಆಶಾ ಹೆತ್ತವರನ್ನು ಧಿಕ್ಕರಿಸಿ ಹೋಗಿ ಮಧುವನ್ನು ಮದುವೆಯಾಗಿದ್ದರು. ಇದರಿಂದ ಆಶಾ ಹೆತ್ತವರಿಗೆ ಊರಿನಲ್ಲಿ ಅವಮಾನವಾಗಿತ್ತು.

Chitradurga: Parents hits his 3 month pregnant daughter's belly.
Chitradurga: Parents hits his 3 month pregnant daughter’s belly.

ಮದುವೆ ಬಳಿಕ ಚಿತ್ರದುರ್ಗದ ಚಿಕ್ಕಬೆನ್ನೂರು ಗ್ರಾಮದಲ್ಲಿ ಆಶಾ ತನ್ನ ಪತಿ ಮಧು ಜೊತೆ ವಾಸವಾಗಿದ್ದನ್ನು ಪತ್ತೆಹಚ್ಚಿದ ಆಶಾ ಕುಟುಂಬಸ್ಥರು 12 ಜನ ನಿನ್ನೆ ತಡರಾತ್ರಿ ಮಧು ಮನೆಗೆ ನುಗ್ಗಿ ಆಶಾ ಮೇಲೆ ಹಲ್ಲೆ ಮಾಡಿದ್ದಾರೆ. ಅಷ್ಟೇ ಅಲ್ಲ ಮೂರು ತಿಂಗಳ ಗರ್ಭಿಣಿಯ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಲು ಕೂಡ ಯತ್ನಿಸಿದ್ದಾರೆ. ಆಶಾ ತಾಯಿ, ಆಕೆಯ ದೊಡ್ಡಮ್ಮ ಸೇರಿದಂತೆ ಹಲವು ಸಂಬಂಧಿಗಳು ಆಶಾಳನ್ನು ಅವಾಚ್ಯವಾಗಿ ನಿಂದಿಸಿದ್ದಾರೆ. ಈ ಆಡಿಯೋ ರೆಕಾರ್ಡ್ ಕೂಡ ಲಭ್ಯವಾಗಿದೆ.
ಕುಟುಂಬಸ್ಥರ ಹಲ್ಲೆಯಿಂದ ಆಶಾ ತೀವ್ರ ಅಸ್ವಸ್ಥಳಾಗಿದ್ದು, ತಕ್ಷಣ ಮಧು ಆಶಾಳನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾನೆ. ಈ ಬಗ್ಗೆ ಆಶಾ ಪತಿ ಮಧು ಭರಮಸಾಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಒಟ್ಟಿನಲ್ಲಿ ಇನ್ನು ಮರ್ಯಾದೆ ನೆಪದಲ್ಲಿ ಪ್ರೇಮಿಗಳನ್ನು ಹಿಂಸಿಸುವ ಪ್ರವೃತ್ತಿ ಮುಂದುವರೆದಿದ್ದು ಮಾತ್ರ ನಿಜಕ್ಕೂ ಆತಂಕ ಮೂಡಿಸಿದೆ.

 

Watch Here: https://youtu.be/ByI9IgACpP8