ಸೀರಿಯಲ್​ ದೃಶ್ಯ ಮರಸೃಷ್ಟಿಸಲು ಹೋಗಿ ಬೆಂಕಿಗೆ ಆಹುತಿಯಾದ್ಲಾ ಬಾಲಕಿ?- ಅನುಮಾನ ಮೂಡಿಸಿದ ಪ್ರಾರ್ಥನಾ ಸಾವು !

Davangere: 7-year-old Child died in Sean's model of Nandini Serial.
Davangere: 7-year-old Child died in Sean's model of Nandini Serial.

ಇತ್ತೀಚಿನ ದಿನಗಳಲ್ಲಿ ಕನ್ನಡ ಕಿರುತೆರೆಯಲ್ಲಿ ಸೀರಿಯಲ್​ ಗಳದ್ದೇ ಹವಾ. ದೇವರು,ದೆವ್ವ-ಭೂತ,ಆತ್ಮ, ನಾಗದೇವತೆ ಕತೆಗಳು ಹೀಗೆ ನಾನಾ ವಿಷಯಗಳ ಮೇಲೆ ಎಲ್ಲ ಚಾನೆಲ್​ಗಳು ಎರ್ರಾಬಿರ್ರಿ ಸೀರಿಯಲ್​ ಪ್ರದರ್ಶಿಸುತ್ತಿವೆ. ಯುವಜನತೆ ಸೇರಿದಂತೆ ಗೃಹಿಣಿಯರು ಸೇರಿದಂತೆ ಎಲ್ಲರೂ ಸೀರಿಯಲ್​ ಪ್ರಿಯರಾಗಿದ್ದಾರೆ. ಆದರೇ ಇಂತಹುದೇ ಸೀರಿಯಲ್​ ಭೂತಕ್ಕೆ ಮಗುವೊಂದು ಬಲಿಯಾಗಿರುವ ಕತೆ ಇದೀಗ ಬೆಳಕಿಗೆ ಬಂದಿದ್ದು, ಸೀರಿಯಲ್​ ನಲ್ಲಿರುವಂತ ಬೆಂಕಿಯ ದೃಶ್ಯವನ್ನು ಮರುಸೃಷ್ಟಿ ಮಾಡುವ ಪ್ರಯತ್ನದಲ್ಲಿ ಪುಟ್ಟ ಬಾಲಕಿಯೊರ್ವಳು ಸಾವನ್ನಪ್ಪಿದ ಸಂಗತಿ ದಾವಣಗೆರೆಯಲ್ಲಿ ನಡೆದಿದೆ.

Davangere: 7-year-old Child died in Sean's model of Nandini Serial.
Davangere: 7-year-old Child died in Sean’s model of Nandini Serial.

ದಾವಣಗೆರೆ ಹರಿಹರ ನಗರದಲ್ಲಿ ಪ್ರಾರ್ಥನಾ ಎಂಬ ಎರಡನೇ ತರಗತಿ ಬಾಲಕಿಯೊರ್ವಳು ಖಾಸಗಿ ವಾಹಿನಿಯ ನಂದಿನಿ ಸೀರಿಯಲ್​ನಲ್ಲಿನ ದೃಶ್ಯ ಮರುಸೃಷ್ಟಿಸುವ ಪ್ರಯತ್ನದಲ್ಲಿ ಸಾವನ್ನಪ್ಪಿದ್ದಾಳೆ ಎನ್ನಲಾಗಿದೆ. ನಂದಿನಿ ಸೀರಿಯಲ್​​ನಲ್ಲಿ ಬೆಂಕಿಯ ವೃತ್ತ ಸೃಷ್ಟಿಸಿ ಅದರ ಮಧ್ಯದಲ್ಲಿ ನಿಂತು ಅಭಿನಯಿಸುವ ದೃಶ್ಯವಿತ್ತು. ಈ ದೃಶ್ಯ ನೋಡಿ ಪ್ರೇರಿತಳಾಗಿದ್ದ ಪ್ರಾರ್ಥನಾ ತಂದೆ-ತಾಯಿ ಮನೆಯಲ್ಲಿಲ್ಲದ ವೇಳೆ ಕಾಗದದ ಚೂರುಗಳಿಗೆ ಬೆಂಕಿ ಹಾಕಿ ಅದರ ಮಧ್ಯೆ ನಿಲ್ಲಲ್ಲು ಯತ್ನಿಸಿದ್ದಾಳೆ. ಈ ವೇಳೆ ಬೆಂಕಿ ಹೊತ್ತಿಕೊಂಡು ಕಿರುಚಾಡಿದ್ದಾಳೆ.
ತಕ್ಷಣ ಅಕ್ಕ-ಪಕ್ಕದ ಮನೆಯವರು ಈ ಬಾಲಕಿಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ. ಕೂಲಿಕಾರರಾದ ಚೈತ್ರಾ ಮತ್ತು ಮಂಜುನಾಥ ದಂಪತಿಯ ಪುತ್ರಿಯಾಗಿರುವ ಈಕೆ ಮಧ್ಯಾಹ್ನದ ವೇಳೆ ತಂಗಿಯ ಜೊತೆ ಮನೆಯಲ್ಲಿದ್ದಳು ಎನ್ನಲಾಗಿದೆ. ಸೀರಿಯಲ್ ನೋಡುವ ಅಭ್ಯಾಸವಿದ್ದ ಪ್ರಾರ್ಥನಾಗೆ ನಂದಿನಿ ಸೀರಿಯಲ್​ ತುಂಬಾ ಇಷ್ಟವಾಗಿತ್ತು ಎನ್ನಲಾಗಿದೆ.

Davangere: 7-year-old Child died in Sean's model of Nandini Serial.
Davangere: 7-year-old Child died in Sean’s model of Nandini Serial.

ಈ ಬಗ್ಗೆ ಹರಿಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆದರೇ ಪ್ರಾರ್ಥನಾ ತಾಯಿ ಪೊಲೀಸ್ ಠಾಣೆಯಲ್ಲಿ ಆಟವಾಡುವಾಗ ಮಗಳು ಕಾಗದದ ಚೂರಿಗೆ ಬೆಂಕಿ ಹಚ್ಚಲು ಹೋಗಿ ಬೆಂಕಿ ತಾಗಿ ಸಾವನ್ನಪ್ಪಿದ್ದಾಳೆ. ನಮಗೆ ಆಕೆಯ ಸಾವಿನ ಬಗ್ಗೆ ಯಾವುದೇ ಅನುಮಾನವಿಲ್ಲ ಎಂದು ಹೇಳಿಕೆ ನೀಡಿದ್ದಾಳೆ ಎನ್ನಲಾಗಿದೆ.
ಒಟ್ಟಿನಲ್ಲಿ ಎರಡನೇ ತರಗತಿಯ ವಿದ್ಯಾರ್ಥಿನಿ ಪ್ರಾರ್ಥನಾ ಸಾವು ಹಲವು ಅನುಮಾನ ಮೂಡಿಸಿದ್ದು, ಸೀರಿಯಲ್​ ಗೀಳು ಪುಟ್ಟ ಬಾಲಕಿಯನ್ನು ಬಲಿ ಪಡೆಯಿತಾ ಎಂಬ ಅನುಮಾನ ವ್ಯಕ್ತವಾಗಿದೆ.