ಮಗಳನ್ನು ರೇಪ್​ ಮಾಡ್ತಿನಿ ಅಂದವನಿಗೆ ಹೆತ್ತಮ್ಮ ಕೊಟ್ಟ ಉಡುಗೊರೆ ಏನು ಗೊತ್ತಾ?

Filmy Style Murder in Bengaluru.

ಹೆತ್ತ ತಾಯಿ ತನ್ನ ಮಗುವನ್ನು ಕಾಪಾಡಿಕೊಳ್ಳೋಕೆ ಯಾವ ತ್ಯಾಗ ಬೇಕಾದ್ರೂ ಮಾಡ್ತಾರೆ.

ಇದಕ್ಕೆ ಜೀವಂತ ಸಾಕ್ಷಿ ಎಂಬಂತೆ ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯೊರ್ವಳು ತನ್ನ ಮಗಳ ಬಗ್ಗೆ ಕೆಟ್ಟದಾಗಿ ಮಾತಾಡಿದ್ದಕ್ಕೆ ಪ್ರಿಯಕರನನ್ನೇ ಕೊಚ್ಚಿ ಕೊಲೆಗೈಯ್ದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಪೀಣ್ಯದ ಚಿಕ್ಕಬಿದರಕಲ್ಲಿನಲ್ಲಿ ಘಟನೆ ನಡೆದಿದ್ದು, ರೂಪಾ ಎಂಬಾಕೆಯೇ ಪ್ರೇಮಿಯನ್ನು ಕೊಲೆಗೈಯ್ದ ಮಹಿಳೆ. ರೂಪಾ ರಘು ಎಂಬಾತನ ಜೊತೆ ಅನೈತಿಕ ಸಂಬಂಧ ಹೊಂದಿದ್ದರು. ಅಲ್ಲದೇ ಕಳೆದ 6 ವರ್ಷದಿಂದ ರಘು ಜೊತೆ ರೂಪಾ ಲಿವಿಂಗ್ ಟುಗೇದರ್​​ನಲ್ಲಿ ಇದ್ದರು ಎನ್ನಲಾಗಿದೆ.

ರೂಪಾ ಈ ಮೊದಲೇ ಮದುವೆಯಾಗಿ ಒಬ್ಬಳು ಮಗಳಿದ್ದಳು. ರಘು ಆ ಮಗಳ ಕೆಟ್ಟ ದೃಷ್ಟಿ ಬೀರಿದ್ದು ಆಕೆಯನ್ನು ರೇಪ್​ ಮಾಡುತ್ತೇನೆ ಎಂದಿದ್ದ ಎನ್ನಲಾಗಿದೆ. ಇದರಿಂದ ಕೆರಳಿದ ರೂಪಾ ರಘುನನ್ನು ಮಂಚಕ್ಕೆ ಕಟ್ಟಿಹಾಕಿ ಮನಬಂದಂತೆ ಕೊಚ್ಚಿ ಹತ್ಯೆ ನಡೆಸಿದ್ದಾಳೆ.  ನಿನ್ನೆ ಸಂಜೆ 7 ಗಂಟೆಯಿಂದ 12 ಗಂಟೆಯವರೆಗೂ ರೂಪಾ ಮತ್ತು ರಘು ಮಧ್ಯೆ ಗಲಾಟೆಯಾಗಿತ್ತು. ಈ ವೇಳೆ ಪ್ಲ್ಯಾನ್ ಮಾಡಿದ ರೂಪಾ ರಘುವಿಗೆ ನಿದ್ರೆ ಮಾತ್ರೆ ಹಾಕಿದ್ದು, ಆತನಿಗೆ ನಿದ್ದೆ ಬಂದ ಬಳಿಕ ಮಂಚಕ್ಕೆ ಕಟ್ಟಿ ಹಾಕಿ ಕೊಲೆ ಗೈಯ್ದಿದ್ದಾಳೆ. ಈ ವೇಳೆ ಗಲಾಟೆ ಗಮನಿಸಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಮನೆಗೆ ಬಂದು ಬಾಗಿಲು ತಟ್ಟಿದ್ದರೂ ರೂಪಾ ಬಾಗಿಲು ತೆಗೆದಿಲ್ಲ ಎನ್ನಲಾಗಿದೆ. ಅಲ್ಲದೇ ರಘು ಸಾವನ್ನಪ್ಪಿರೋದನ್ನು ಖಚಿತಪಡಿಸಿಕೊಂಡೇ ರೂಪಾ ಬಾಗಿಲು ತೆಗೆದಿದ್ದಾಳೆ ಎನ್ನಲಾಗಿದೆ. ಸದ್ಯ ಪೀಣ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ರೂಪಾ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.