ಭೀಕರ ಅಪಘಾತದಲ್ಲಿ ಆರು ಜನ ದುರ್ಮರಣ..!

ಟೂರಿಸ್ಟ್ ಬಸ್ ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಹಂಪಿಗೆ ಹೊರಟ್ಟಿದ್ದ ಆರು ಜನ ಪ್ರವಾಸಿಗರು ಸ್ಥಳದಲ್ಲಿ ರ್ದುಮರಣಕಿಡಾದ ಘಟನೆ ಧಾರವಾಡ ಜಿಲ್ಲೆ ಅಣ್ಣಿಗೇರಿ ತಾಲೂಕಿನ ಭದ್ರಾಪುರ ಬಳಿ ನಡೆದಿದೆ.

ad

ಅಪಘಾತದಲ್ಲಿ 10 ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದು ಗಾಯಳುಗಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರನನ್ನು ವಿಶ್ವನಾಥ ಮಾತ್ರೆ (76), ದಿನಕರ ಮಾತ್ರೆ (74), ರಮೇಶ ಜಯಮಾಲ (70), ಸುಮೇದ ಜಮಖಂಡಿ (65), ಲಾಹೂ ಕೆಲೋಸ್ಕರ (65) ಸುಚಿತ್ರಾ ರಾಹೂಲ್ (60) ಎಂದು ಗುರುತಿಸಲಾಗಿದೆ.

ಮೃತರು ಮುಂಬಯಿ ಮೂಲದವರಾಗಿದ್ದು, ಗಾಯಾಳುಗಳಿಗೆ ಹುಬ್ಬಳ್ಳಿಯ ಕಿಮ್ಸ್‌, ವೈದ್ಯರು ಚಿಕಿತ್ಸೆ ನೀಡಲಾಗುತ್ತಿದೆ. ಮುಂಬಯಿಯಿಂದ ರಾಜ್ಯದ ಪ್ರವಾಸಿತಾಣಗಳಿಗೆ ಭೇಟಿ‌ ನೀಡುವ ಉದ್ದೇಶದಿಂದ ಹತ್ತಕ್ಕೂ ಹೆಚ್ಚು ಕುಟುಂಬಗಳು ಒಟ್ಟುಗೂಡಿ ವಾರದ ಹಿಂದೆ ಪ್ರವಾಸಕ್ಕೆ ಬಂದಿದ್ದು. ಶ್ರವಣಬೆಳಗೊಳ, ಸೇರಿದಂತೆ ವಿವಿಧ ಸ್ಥಳಗಳಿಗೆ ಭೇಟಿ ನೀಡಿ, ನಿನ್ನೆ ರಾತ್ರಿ ಹುಬ್ಬಳ್ಳಿಯಲ್ಲಿ ವಾಸ್ತವ್ಯ ಹೂಡಿದ್ದರು.‌

ಇಂದು ಬೆಳಗ್ಗೆ ಹಂಪಿಗೆ ತೆರಳುವಾಗ ಬೆಳಗಿನ ಜಾವ ಈ ಅಪಘಾತ ಸಂಭವಿಸಿದೆ. ಬಸ್ ಚಾಲಕ ನಿರ್ಲಕ್ಷ್ಯತನದಿಂದ ಈ ಅಪಘಾತ ಸಂಭವಿಸಿದೆ. ಓವರ್ ಟೆಕ್ ಮಾಡುವ ಸಂದರ್ಬದಲ್ಲಿ ಎದರುಗಡೆ ಬಂದ ಲಾರಿ ಡಿಕ್ಕಿಯಾಗಿದ್ದು ಡಿಕ್ಕಿಯಾದ ರಭಸಕ್ಕೆ ಬಸ್ ಪಲ್ಟಿಯಾಗಿದೆ. ಘಟನಾ ಸ್ಥಳಕ್ಕೆ ದೌಡಾಯಿಸಿರುವ ಅಣ್ಣಿಗೇರಿ ಠಾಣೆ ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.