ಕೆಲ ಹೊತ್ತಿನಲ್ಲೇ ಕಂಪ್ಲಿ ಶಾಸಕ ಜೆ ಎನ್ ಗಣೇಶ್ ಅವರನ್ನ ಬೆಂಗಳೂರಿನತ್ತ ಕರೆತಂದ ಪೊಲೀಸರು!

Ganesh Back to Bangalore

ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ಪ್ರಕರಣದಲ್ಲಿ ಬಂದಿಸಲಾಗಿದ್ದ ಕಂಪ್ಲಿ ಗಣೇಶ್ ಎಲ್ಲಿದ್ದ ಎಂಬ ಬಗ್ಗೆ ಮಾಹಿತಿ ದೊರೆತಿದೆ. ಬಿಡದಿ ಪೋಲೀಸರಿಗೆ  ಕಂಪ್ಲಿ ಶಾಸಕ ಗಣೇಶ್ ಗುಜರಾತಿನ ಅಹ್ಮದಾಬಾದ್ ನಲ್ಲಿ ಅಡಗಿದ್ದಾಗಿ ಮಾಹಿತಿ ದೊರೆತಿದ್ದು ಬುಧವಾರ ಕಂಪ್ಲಿ ಗಣೇಶ್ ನ್ನು ಬಂದಿಸಿದ್ದರು.

Ganesh Back to Bangalore
ad


ಗಣೇಶ್ ರನ್ನ ಎಸ್ ಜಿ – 921 ಸ್ಪೈಸ್ ಜೆಟ್ ವಿಮಾನದಲ್ಲಿ ಬಿಡದಿಯ ಪೊಲೀಸರು ಕರೆತರುತ್ತಿದ್ದು  ದೇವನಹಳ್ಳಿಯ ಕೆಂಪೇಗೌಡ ವಿಮಾನ  ನಿಲ್ದಾಣದಿಂದ ಗಣೇಶ್ ರನ್ನ ಪೊಲೀಸರು ನೇರ ಬಿಡದಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗುಕ್ಕೆ ತಲುಪಲಿದ್ದಾರೆ.ಬಿಡದಿ ಠಾಣೆಯಲ್ಲಿ ಕಾನೂನು ಪ್ರಕ್ರಿಯೆಗಳನ್ನ ಪೊಲೀಸರು ಮಾಡಿ ಮುಗಿದ ನಂತರ ಕೋರ್ಟಿ ಗೆ ಕಂಪ್ಲಿ ಶಾಸಕ ಗಣೇಶ್ ರನ್ನ ಹಾಜರ್ ಮಾಡಲಾಗುತ್ತದೆ.

ಈಗಲ್ ಟನ್ ರಿಸಾರ್ಟ್ ನಲ್ಲಿ ‘ಜನವರಿ – 2೦’ – ರಂದು ಆನಂದ್ ಸಿಂಗ್ ಅವರ ಮೇಲೆ ನಡೆದ್ದಿದ ಹಲ್ಲೆ ಪ್ರಕರಣ ಬಿಡದಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬರೋಬ್ಬರಿ ಕಳೆದ ಒಂದು ತಿಂಗಳಿಂದ ಶಾಸಕ ಗಣೇಶ್ ಅವರು ಎಲ್ಲಿದರೆ ಅನ್ನೋ ಮಾಹಿತಿ ಯಾಗಲಿ – ಸೂಚನೆ ಯಾಗಲಿ ಪೊಲೀಸರಿಗೆ ದೊರಕಿರಲಿಲ್ಲ , ಆದರೆ 2/20 ಬುಧವಾರದಂದು ಗಣೇಶ್ ಅವರು ಪೊಲೀಸರ ಕಣ್ಣಿಗೆ ಕಾಣಿಸಿಕೊಂಡಿದ್ದಾರೆ . ಸತತ ಒಂದು ತಿಂಗಳ ನಂತರ ಶಾಸಕ ಜೆ ಎನ್ ಗಣೇಶ್ ರನ್ನ  ಪೊಲೀಸರು ಬಂಧಿಸಿದ್ದಾರೆ.