ಚುನಾವಣೆಗೆ ಸೀರೆ ಹಂಚುತಿದ್ದೋನ ಕೈ ಕಟ್!

Gauribidanur: JDS Activist Swank on Congress Activist.
Gauribidanur: JDS Activist Swank on Congress Activist.

ಎಲೆಕ್ಷನ್​ ಡೇಟ್​ ಅನೌನ್ಸ್​ ಆಗೋ ಮುನ್ನವೇ ರಾಜ್ಯದಲ್ಲಿ ರಕ್ತರಾಜಕೀಯ ಶುರುವಾಗಿದೆ.

ಹೌದು ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲ್ಲೂಕು ಮಂಚೇನಹಳ್ಳಿ ಹೋಬಳಿಯಲ್ಲಿ ಸೀರೆ ಹಂಚುತ್ತಿದ್ದ ಕಾಂಗ್ರೆಸ್​ ಕಾರ್ಯಕರ್ತನ ಕೈ ಕತ್ತರಿಸಲಾಗಿದ್ದು, ಕೈ ಕಳೆದುಕೊಂಡ ಕಾರ್ಯಕರ್ತ ಸಾವು ಬದುಕಿನ ನಡುವೆ ಒದ್ದಾಡುತ್ತಿದ್ದಾನೆ.
ಹೌದು ಚಿಕ್ಕಬಳ್ಳಾಪುರದ ಹಾಲಿ ಶಾಸಕ ಡಾ.ಸುಧಾಕರ್​, ಕಳೆದ ಒಂದು ವಾರದಿಂದ ಸೀರೆ ಹಂಚಿ ಮತಬೇಟೆಯಾಡುವ ಪ್ರಯತ್ನ ಆರಂಭಿಸಿದ್ದರು.

 

 

ಸಂಜೆ ಹಾಗೂ ರಾತ್ರಿ ವೇಳೆ ಸುಧಾಕರ್ ಬೆಂಬಲಿಗರು ಸೀರೆ ಹಂಚಿ ಮತದಾರರನ್ನು ಸೆಳೆಯುತ್ತಿದ್ದರು. ನಿನ್ನೆ ಕೂಡ ಇದೇ ರೀತಿ ಸೀರೆ ಹಂಚಲು ಹೋದಾಗ ಕಾಂಗ್ರೆಸ್ ಹಾಗೂ ಜೆಡಿಎಸ್​ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ.
ಮಾತಿನ ಚಕಮಕಿ ಹೊಡೆದಾಟಕ್ಕೆ ತಿರುಗಿದ ಪರಿಣಾಮ ಕಾಂಗ್ರೆಸ್ ಕಾರ್ಯಕರ್ತ ರವಿ ಕುಮಾರ್​ ಎಂಬಾತನ ಮೇಲೆ ಜೆಡಿಎಸ್​ ಕಾರ್ಯಕರ್ತ ಲೋಕೇಶ್​ ಎಂಬಾತ ಹಲ್ಲೆ ನಡೆಸಿದ್ದು, ಕತ್ತಿಯಿಂದ ರವಿ ಕೈ ಕತ್ತರಿಸಿದ್ದಾನೆ. ಕತ್ತರಿಸಿದ ಕೈ ಸಮೇತ ರವಿಕುಮಾರ್​ನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನಡೆದಿದೆ. ಈ ಸಂಬಂಧ ಗೌರಿಬಿದನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ‘

1 ಕಾಮೆಂಟ್

Comments are closed.