ನನ್ನ ಮೇಲೂ ನಲಪಾಡ್ ದೌರ್ಜನ್ಯ ನಡೆಸಿದ್ದರು- ಮಹಿಳೆಯಿಂದ ಎಮ್ ಎಲ್ ಎ ಪುತ್ರನ ವಿರುದ್ದ ಮತ್ತೊಂದು ಆರೋಪ!

Harris Son's Harassment against Woman.
Harris Son's Harassment against Woman.

ಬೆಂಗಳೂರು ಶಾಂತಿನಗರ ಎಮ್​ಎಲ್​ಎ ಹ್ಯಾರೀಸ್​ ಮಗನ ಆಟಾಟೋಪದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ.

 

ಈಗಾಗಲೇ ಪೊಲೀಸರ ಅತಿಥಿಯಾಗಿರುವ ಮಗ ಮೊಹಮ್ಮದ್​ ನಲಪಾಡ್​ನನ್ನು ರಕ್ಷಿಸಲು ಹ್ಯಾರೀಸ್​ ಇನ್ನಿಲ್ಲದ ಸರ್ಕಸ್​ ನಡೆಸಿರುವಾಗಲೇ ಇದೀಗ ಮತ್ತೊಮ್ಮೆ ಹ್ಯಾರೀಸ್ ಗೆ ಸಂಕಷ್ಟ ಎದುರಾಗಿದ್ದು, ಮತ್ತೊಬ್ಬಳು ಮಹಿಳೆ ಹ್ಯಾರೀಸ್​​ ಮಗ ದೌರ್ಜನ್ಯದ ವಿರುದ್ಧ ಧ್ವನಿ ಎತ್ತಿದ್ದಾರೆ.  ಹೌದು ನಗರದ ಮಹಿಳೆಯೊಬ್ಬರು ಹ್ಯಾರೀಸ್ ಮಗನ ಮತ್ತೊಂದು ಗೂಂಡಾಗಿರಿ ಬಗ್ಗೆ ಧ್ವನಿ ಎತ್ತಿದ್ದು, ತನ್ನ ಮೇಲೆ ನಡೆದಿರುವ ದೌರ್ಜನ್ಯವನ್ನು ಬಹಿರಂಗಪಡಿಸಿದ್ದಾರೆ. ಸಾಮಾಜಿಕ ಸಾಮಾಜಿಕ ಜಾಲತಾಣದಲ್ಲಿ ತನ್ನ ಮೇಲೆ ನಡೆದ ದೌರ್ಜನ್ಯದ ಬಗ್ಗೆ ಮಹಿಳೆ ವಿಡಿಯೋ ರೆಕಾರ್ಡ್ ಮಾಡಿ​​ ಬಿಡುಗಡೆ ಮಾಡಿದ್ದಾರೆ.

 

ಮೂರು ವರ್ಷದ ಹಿಂದೆ ಹ್ಯಾರಿಸ್​ ಪುತ್ರ ಮೊಹಮ್ಮದ್​​​ ಮಹಿಳೆಗೆ ಕಿರುಕುಳ ನೀಡಿದ್ದು, ದೂರು ಕೊಡಲು ಹೋದ ಆಕೆಗೆ ಹ್ಯಾರಿಸ್​ ಪಡೆ ಕೊಲೆ ಬೆದರಿಕೆ ಹಾಕಿತ್ತಂತೆ. ಇಷ್ಟಲ್ದೆ, ದೂರು ಕೊಡಲು ಹೋದ್ರೂ ಹ್ಯಾರಿಸ್​ ಒತ್ತಡಕ್ಕೆ ಮಣಿದು ಪೊಲೀಸರು ದೂರು ದಾಖಲಿಸಿಕೊಳ್ಳದೆ ಕಳಿಸಿದ್ರು ಅಂತ ಮಹಿಳೆ ಆರೋಪಿಸಿದ್ದಾರೆ. ಸದ್ಯ ಈಗಲಾದ್ರೂ ಪೊಲೀಸರು ಸುಮೋಟೋ ದೂರು ದಾಖಲಿಸಿಕೊಳ್ಬೇಕಿದೆ. ಒಟ್ಟಿನಲ್ಲಿ ವಿದ್ವತ್​ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಬಳಿಕ ಹ್ಯಾರೀಸ್​ ಪುತ್ರ ಮೊಹಮ್ಮದ್​ ನಲಪಾಡ್​​ ಒಂದೊಂದೆ ಕರ್ಮಕಾಂಡಗಳು ಬೆಳಕಿಗೆ ಬರುತ್ತಿದ್ದು, ಪೊಲೀಸರು ಯಾವ ರೀತಿ ಕ್ರಮಕೈಗೊಳ್ತಾರೆ ಕಾದು ನೋಡಬೇಕಿದೆ