ಪರೀಕ್ಷೆ ಮುಂದೂಡಲು ಸಹಪಾಠಿಯ ಹತ್ಯೆ ಮಾಡಿದ ವಿದ್ಯಾರ್ಥಿ!

ಶಾಲಾ ಆಡಳಿತ ಮಂಡಳಿ ಪರೀಕ್ಷೆ ಮುಂದೂಡಲಿ ಎಂಬ ಕ್ಷುಲಕ ಕಾರಣಕ್ಕೆ ೧೧ ನೇ ತರಗತಿ ವಿದ್ಯಾರ್ಥಿಯೊಬ್ಬ ೨ ನೇ ತರಗತಿಯ ೭ ವರ್ಷದ ಬಾಲಕನನ್ನು ಹತ್ಯೆಗೈಯ್ದ ಘಟನೆ ನಡೆದಿದೆ.
ಗುರ್ಗಾಂವ್ ನ ರಯಾನ್ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ನಡೆದಿದ್ದ ಈ ಹತ್ಯೆ ಈ ದೇಶವನ್ನೆ ಬೆಚ್ಚಿಬೀಳಿಸಿತ್ತು. ಸಲಿಂಗಕಾಮ ಸೇರಿದಂತೆ ವಿವಿಧ ರೀತಿಯ ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದ ಈ ಹತ್ಯೆ ಪ್ರಕರಣವನ್ನು ಕೊನೆಗೂ ಸಿಬಿಐ ಬೇಧಿಸಿದ್ದು, ೭ ವರ್ಷದ ಬಾಲಕ ಪ್ರದ್ಯುಮನ್ ಠಾಕೂರ್ ನನ್ನು ಹತ್ಯೆ ಮಾಡಿದ್ದ ಶಾಲೆಯ 11 ನೇ ತರಗತಿ ವಿದ್ಯಾರ್ಥಿಯನ್ನು ವಶಕ್ಕೆ ಪಡೆದಿದ್ದಾರೆ.

ಶಾಲೆಯ ಟಾಯ್ಲೆಟ್ ನಲ್ಲೇ ಪ್ರದ್ಯುಮ್ನ ಬರ್ಬರವಾಗಿ ಹತ್ಯೆಯಾಗಿ ಹೋಗಿದ್ದ . ಈ ವೇಳೆ ಶಾಲಾ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಪೋಷಕರು ಶಾಲೆಯಲ್ಲಿ ದಾಂಧಲೆ ನಡೆಸಿದ್ದರು.ಸೆಪ್ಟೆಂಬರ್ 8 ರಂದು ನಡೆದಿದ್ದ ಈ ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿದ್ದ ಗುರ್ಗಾಂವ್ ಪೊಲೀಸರು ಬಸ್ ಚಾಲಕ ಅಶೋಕಕುಮಾರನನ್ನು ವಶಕ್ಕೆ ಪಡೆದಿದ್ದರು. ಅಲ್ಲದೇ ಶಾಲಾ ಬಸ್ ಚಾಲಕ, ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ್ದ. ಇದಕ್ಕೆ ಬಾಲಕ ಪ್ರದ್ಯುಮ್ನ ವಿರೋಧ ವ್ಯಕ್ತಪಡಿಸಿದ್ದ. ಹೀಗಾಗಿ ಆತನೇ ಹತ್ಯೆ ಎಸಗಿರಬಹುದೆಂದು ಪೊಲೀಸರು ಶಂಕಿಸಿದ್ದರು.

ಆದರೆ ಪೊಲೀಸರ ತನಿಖೆ ಪ್ರದ್ಯುಮನ್ ಠಾಕೂರ್ ಪೋಷಕರಿಗೆ ಸಮಾಧಾನ ತಂದಿರಲಿಲ್ಲ. ಹೀಗಾಗಿ ತಮ್ಮ ಮಗನ ಸಾವಿನ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕೆಂದು ಒತ್ತಾಯಿಸಿದ್ದರು.

ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ತಕ್ಷಣ ಸ್ಪಂದಿಸಿ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಲಾಗಿತ್ತು. ಇದಕ್ಕೆ ಸ್ಪಂದಿಸಿದ್ದರು. ಪ್ರಕರಣ ಕೈಗೆತ್ತಿಕೊಂಡ ಸಿಬಿಐ ವಿಚಾರಣೆ ನಡೆಸಿ, ಅದೇ ಶಾಲೆಯ 11 ನೇ ತರಗತಿ ವಿದ್ಯಾರ್ಥಿ ಕೊಲೆಗೈಯ್ದಿರುವುದನ್ನು ಪತ್ತೆ ಹಚ್ಚಿದೆ.
ಸಪ್ಟೆಂಬರ್ ೮ ರಂದು ಶಾಲೆಯಲ್ಲಿ ನಡೆಯುತ್ತಿದ್ದ ಪರೀಕ್ಷೆಗೆ ನಾನು ಸಿದ್ಧವಾಗಿ ಬಂದಿರಲಿಲ್ಲ. ಹೀಗಾಗಿ ಕೊಲೆ ಮಾಡಿದರೇ ಶಾಲೆಗೆ ರಜೆ ಸಿಗುತ್ತೆ ಎಂಬ ಕಾರಣಕ್ಕೆ ಹತ್ಯೆ ನಡೆಸಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಟಾಯ್ಲೇಟ್ ನಲ್ಲೇ ಪ್ರದ್ಯುಮ್ನ ಕತ್ತು ಸೀಳಿ ಹತ್ಯೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.
ಇದೀಗ ನಿಜವಾದ ಆರೋಪಿ ಬಂಧನವಾಗುತ್ತಿದ್ದಂತೆ ಗುರಂಗಾವ ಪೊಲೀಸರ ಕಾರ್ಯವೈಖರಿಯ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದ್ದು, ಶಾಲಾ ಚಾಲಕನ ಮೇಲೆ ದೌರ್ಜನ್ಯ ಎಸಗಲಾಯಿತು ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.