ರಾಮನಗರದಲ್ಲಿ ಬಂಧಿತ ಉಗ್ರನ ಕರಾಳ ಇತಿಹಾಸ ಇಲ್ಲಿದೆ ನೋಡಿ- ಇದು ಬಿಟಿವಿ ನ್ಯೂಸ್​ ಎಕ್ಸಕ್ಲೂಸಿವ್​!

 

ad

ಮೂರು ದಿನಗಳ ಹಿಂದೆ ರಾಮನಗರದಲ್ಲಿ ಬಂಧಿತನಾಗಿದ್ದ ಉಗ್ರ ಜಹಿದುಲ್ ಇಸ್ಲಾಂ ಅಲಿಯಾಸ್ ಮುನೀರ್ ಕಳೆದ ನಾಲ್ಕು ವರ್ಷಗಳಿಂದ ಬೆಂಗಳೂರಿನಲ್ಲಿದ್ದ ಎನ್ನುವ ಸ್ಪೋಟಕ ಮಾಹಿತಿ ಹೊರ ಬಿದ್ದಿದೆ. ಹಾಗಾದ್ರೆ ಈ ನಟೋರಿಯಸ್ ಉಗ್ರ ಯಾರು..? ಈತನ ಹಿನ್ನಲೆ ಏನು ಅಂತೀರಾ ಇಲ್ಲಿದೆ ನೋಡಿ ಡಿಟೇಲ್ಸ್..

ಯೆಸ್ ಮೂರು ದಿನಗಳ ಹಿಂದೆ ರಾಮನಗರದಲ್ಲಿ ಎನ್ ಐ ಎ ಅಧಿಕಾರಿಗಳ ಬಲೆಗೆ ಬಿದ್ದ ಬಾಂಗ್ಲಾದೇಶದ ಮೋಸ್ಟ್ ವಾಂಟೇಡ್ ಟೆರರಿಸ್ಟ್ ಇಸ್ಲಾಂ ಅಲಿಯಾಸ್ ಮುನೀರ್ 2014 ರಿಂದ ಬೆಂಗಳೂರಿನ ವಿವಿಧ ಸ್ಥಳಗಳಲ್ಲಿ ವಾಸವಿದ್ದ ಎನ್ನುವ ಸ್ಪೋಟಕ ಸುದ್ದಿ ಈಗ ಹೊರ ಬಿದ್ದಿದೆ.ಹೌದು 2014 ರಲ್ಲಿ ಬಾಂಗ್ಲಾದಿಂದ ತಪ್ಪಿಸಿಕೊಂಡಿದ್ದ ಮುನೀರ್ ಆಕ್ರಮವಾಗಿ ಭಾರತಕ್ಕೆ ಬಂದಿದ್ದ. ಹೀಗೆ ಬಂದವನು ಬೆಂಗಳೂರಿನ ವಿವಿಧ ಸ್ಥಳಗಳಲ್ಲಿ ವಾಸವಿದ್ದ.ಈತ ಬಾಂಗ್ಲಾದಲ್ಲಿ ಬಂಧಿತನಾಗಿದ್ದಾಗ ವಿವಿಧ ಉಗ್ರ ಚಟುವಟಿಕೆಗಳಿಗೆ ಸಂಬಂಧಿಸಿದಂತೆ 95 ವರ್ಷ ಶಿಕ್ಷೆಗೆ ಒಳಪಟ್ಟಿದ್ದ.
ಯೆಸ್ ಜಹಿದುಲ್ ಇಸ್ಲಾಂ ಅಲಿಯಾಸ್ ಮುನೀರ್ ಬಾಂಗ್ಲಾದ ನಿಷೇಧಿತ ಸಂಘಟನೆ ಜಮಾತುಲ್ ಮುಜಾಹೀದ್ದೀನ್ ಬಾಂಗ್ಲಾದೇಶ್ ನ ಮಾಸ್ಟರ್ ಮೈಂಡ್. ಅಲ್ಲದೆ ಲಿಕ್ವಿಡ್ ಎಕ್ಸಪ್ಲೊಸಿವ್ ಡಿಟೋನೇಟರ್ ಅಳವಡಿಸುವುದರಲ್ಲಿ ಈತ ನಿಸ್ಸಿಮ.

ಇದೆ ವರ್ಷ ಜನವರಿಯಲ್ಲಿ ಪಾಟ್ನಾದ ಬುದ್ದ ಗಯಾದ ಬಳಿಯ ಕಾಲಚಕ್ರ ಮೈದಾನದಲ್ಲಿ ಸಿಕ್ಕಿದ್ದ ಲಿಕ್ವಿಡ್ ಎಕ್ಸಪ್ಲೊಸಿವ್ ಡಿಟೋನೇಟರ್ ಇಟ್ಟಿದ್ದು ಇದೆ ಮುನೀರ್ ಎಂದು ತನಿಕೆಯಲ್ಲಿ ತಿಳಿದು ಬಂದಿದೆ. ಈ ಅಪರೆಷನನ್ನ ಮುನೀರ್ ರಾಜಧಾನಿಯಿಂದಲೆ ನಿರ್ವಹಿಸಿದ್ದ ಎನ್ನುವ ಸ್ಪೊಟಕ ಸತ್ಯವು ಹೊರ ಬಿದ್ದಿದೆ. ಅಲ್ಲದೆ ಈತನು ನೀಡಿದ ಮಾಹಿತಿ ಅಧರಿಸಿಯೇ ಬೆಂಗಳೂರಿನಲ್ಲಿ ಅದಿಲ್ ಎಂಬ ಮತ್ತೊಬ್ಬ ಉಗ್ರನನ್ನು ಬಂಧಿಸಲಾಗಿದೆ.ಸದ್ಯ ಇಬ್ಬರನ್ನ ಎನ್ ಐ ಅಧಿಕಾರಿಗಳು ಬಂಧಿಸಿ ಪಾಟ್ನಾಗೆ ಕರೆದೊಯ್ದಿದ್ದಾರೆ. ಆದ್ರೆ ರಾಜಧಾನಿ ಬೆಂಗಳೂರು ಉಗ್ರರ ಅಡುಗುದಾಣವಾಗುತ್ತಿದೆಯಾ ಎನ್ನುವಾ ಅನುಮಾನ ಇದ್ರಿಂದಾಗಿ ಮತ್ತೆ ಕಾಡಲಿಕ್ಕೆ ಶುರುವಾಗಿದೆ.