ಸಲಿಂಗಕಾಮ ನಿರಾಕರಿಸಿದ್ದಕ್ಕೆ ಕೊಲೆಯಾದ ಚಿನ್ನೇಗೌಡ!!

ಅವರಿಬ್ಬರೂ ಒಂದೇ ಹೊಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ ಯುವಕರು. ವಿಕೃತ ಮನಿಸ್ಥಿತಿಯವರಾದ ಅವರು ಪರಸ್ಪರ ಸಲಿಂಗ ಕಾಮದಲ್ಲಿ ಆಕರ್ಷಿತರಾದರು. ಪ್ರತಿದಿನ ಇದನ್ನೇ ನಡುಸುತ್ತಿದ್ದ ಅವರು, ಆದ್ಯಾಕೋ ಒಬ್ಬನಿಗೆ ಆವತ್ತು ಅದು ಬೇಡವೆನಿಸಿತು, ಪರಿಣಾಮ ಬರ್ಬರ ಹತ್ಯೆ.

ಹೌದು.  ಚೆನ್ನೆಗೌಡ ಮತ್ತು ದೇವರಾಜ್ ಇಬ್ಬರು ಮಡಿವಾಳದ ಆರೋಗ್ಯ ರೆಸ್ಟೊರೆಂಟ್ ನಲ್ಲಿ ಕೆಲ್ಸಾ ಮಾಡ್ತಿದ್ರು .
ಕಳೆದ ನಾಲ್ಕೈದು ತಿಂಗಳಿಂದ ಇಬ್ಬರು ಸಲಿಂಗಕಾಮಿಗಳಾಗಿದ್ರು, ಇದೇ ಉದ್ದೇಶದಿಂದ ಸ್ಮಶಾಣಕ್ಕೆ ಚೆನ್ನೆಗೌಡನ ಕರೆದುಕೊಂಡು ಹೋಗಿದ್ದ
ಆದ್ರೆ ಚೆನ್ನೆಗೌಡ ಅವತ್ತು ಸಲಿಂಗಕಾಮಕ್ಕೆ ನಿರಾಕರಣೆ ಮಾಡಿದ್ದ. ಆದರೆ ಅದೇ ಅಮಲಿನಲ್ಲಿದ್ದ ದೇವರಾಜ್ ಅದನ್ನು ತಡೆದುಕೊಳ್ಳಲಾಗದೆ ಸ್ಮಶಾಣದಲ್ಲಿಯೇ ಕೊಲೆ ಮಾಡಿ ಚಿನ್ನೇಗೌಡನ ಗುರುತು ಪತ್ತೆಯಾಗದಂತೆ ಮಾಡಿದ್ದ.

 

ಸ್ಮಶಾನದಲ್ಲಿ ಸಿಕ್ಕ ಕೊಲೆಯಾದ ಶವದ ಬೆನ್ನು ಹತ್ತಿದ ಪೋಲೀಸರು ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ. ಕೊಲೆ ಮಾಡಿದ ಸ್ಥಳದಲ್ಲಿ ಸಿಕ್ಕ ಒಂದೇ ಒಂದು ಬ್ಯಾಂಕ್ ಸ್ಲಿಪ್ ಆರೋಪಿಯನ್ನು ಪತ್ತೆ ಹಚ್ಚಲು ಸಹಕಾರಿಯಾಗಿದೆ. ಬ್ಯಾಂಕ್ ಟ್ರಾನ್ಜಾಕ್ಷನ್ ಸ್ಲಿಪ್ ಮತ್ತು ಬಿಯರ್ ಬಾಟಲ್ ಆರೋಪಿಯ ಸುಳಿವು ನೀಡಿದೆ. ಮಡಿವಾಳ ಪೊಲೀಸರಿಂದ ಆರೋಪಿಯನ್ನು ಬಂಧಿಸಿದ್ದಾರೆ.