ಹುಬ್ಬಳ್ಳಿಯ ಇತಿಹಾಸದಲ್ಲಿ ಬಹುದೊಡ್ಡ ಕಿಡ್ನಾಪ್ ಪ್ರಕರಣವನ್ನು ಭೇದಿಸಿದ ಪೊಲೀಸರು… ಪೊಲೀಸ ಕಾರ್ಯಕ್ಕೆ ಇಲಾಖೆಯಿಂದ ಶ್ಲಾಘನೀಯ…

ಆತ ವಾಣಿಜ್ಯ ನಗರಿ ಹುಬ್ಬಳ್ಳಿಯ ಪ್ರತಿಷ್ಠಿತ ಉದ್ಯಮಿ. ರೀಯಲ್ ಏಸ್ಟೇಟ್ ದಂಧೆ ಮಾಡಿ ಕೋಟಿ‌ ಕೋಟಿಗಟ್ಟಲೆ ಆಸ್ತಿ ಮಾಡಿದ್ದ. ಹೀಗಾಗೇ ಆತನ‌ ಆಸ್ತಿ‌ ಮೇಲೆ ಆ‌ ಆಗುಂತಕರಿಗೆ ಕಣ್ಣು ಬಿದ್ದಿತ್ತು. ಏನಾದ್ರು ಮಾಡಿ ಉಧ್ಯಮಿಯಿಂದ ಹಣ ಕೀಳಬೇಕೆಂದು ಫ್ಲ್ಯಾನ್ ಮಾಡಿದ ತಂಡ ಆತನ ಮಗನನ್ನೆ ಕಿಡ್ನಾಪ್ ಮಾಡಿದ್ದರು. ಆದ್ರೆ ಪೊಲೀಸರು ಬಿಡಬೇಕಲ್ವಾ ಉಪ್ಪು ತಿಂದವನು ನೀರು ಕುಡಿಯಲೇ ಬೇಕು ಎನ್ನೋ ಗಾದೆ ಮಾತಿನಂತೆ ಸಧ್ಯ ಕಂಬಿ ಎಣಿಸುತ್ತಿದ್ದಾರೆ.

    

ಹೌದು , ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಅತೀ ದೊಡ್ಡ ಕಿಡ್ನ್ಯಾಪ್ ಪ್ರಕರಣ ಬೆಳಕಿಗೆ ಬಂದಿದೆ. ಅಂದಹಾಗೇ ನಗರದ ಪ್ರತಿಷ್ಠಿತ ಉಧ್ಯಮಿ ಹಾಗೂ ರೀಯಲ್ ಏಸ್ಟೇಟ್ ವ್ಯಾಪರಿ ನಜೀರ್ ಅಹ್ಮದ್ ಅತ್ತಾರ ಎಂಬುವರ ಮಗನ ಕಿಡ್ನ್ಯಾಪ್ ಆಗಿತ್ತು. ಅದು ಕಳೆದ ಜುಲೈ 30 ರಂದು ಹುಬ್ಬಳ್ಳಿಯ ವಿಧ್ಯಾನಗರದ ಸೆಂಟ್ ಅಂಥೋನಿ ಶಾಲೆಯ ಬಳಿಯಿಂದ 11 ಜನರ ತಂಡ ನಜೀರ್ ಪುತ್ರ ಅಬ್ದುಲ್ ರಫಾ ಎಂಬ 14 ವರ್ಷ ಬಾಲಕನನ್ನ ಕಿಡ್ನ್ಯಾಪ್ ಮಾಡಿದ್ದ ಜನರ ತಂಡ ಸಧ್ಯ ಅಂದರ್ ಆಗಿದ್ದಾರೆ.‌ ಒಂದು ಕೋಟಿ ರೂ. ಗೆ ಬೇಡಿಕೆಯಿಟ್ಟು ,ಕೊನೆಗೆ ನಲವತ್ತು ಲಕ್ಷ ಹಣವನ್ನ ತೆಗೆದುಕೊಂಡು ಬಾಲಕನ್ನ‌ ಕಿಡ್ನ್ಯಾಪ್ಸ್೯ ಬಿಟಿದ್ದರು. ಬಳಿಕ ಪೊಲೀಸರಿಗೆ ದೂರು ನೀಡಿದ್ದ ಬಾಲಕನ ತಂದೆ ಹಾಗೂ ಉಧ್ಯಮಿ ನಜೀರ್ ದೂರಿನ ಮೇರೆಗೆ ಪೊಲೀಸರು ಪ್ರಕರಣದ ಪ್ರಮುಖ ಆರೋಪಿ ಅಬ್ದುಲ್ ರೆಹಮಾನ ಸೇರಿದಂತೆ ಒಟ್ಟು 10 ಜನರನ್ನ ಬಂಧಿಸಿದ್ದಾರೆ.

ಬಾಲಕನ್ನ‌ ಕಿಡ್ನಾಪ್ ಮಾಡಿದ್ದ ತಂಡ ಆತನ ತಂದೆ‌ ಉಧ್ಯಮಿ ನಜೀರ್ ಅಹ್ಮದ್ ಗೆ ಕರೆ ಮಾಡಿ ಒಂದು ಕೋಟಿ ಹಣ ನೀಡುವಂತೆ ಬೇಡಿಕೆ‌ ಇಟ್ಟಿದ್ದರು, ಆದ್ರೆ ಕೊನೆಗೆ 40 ಲಕ್ಷಕ್ಕೆ ವ್ಯಹಹಾರ ಮುಗಿಸಿ ಗದಗ ಜಿಲ್ಲೆಯ ಕದಂಪೂರ ಗ್ರಾಮಕ್ಕೆ ಹೋಗಿ ಮಗನನ್ನ ಕರೆತಂದಿದ್ದರು. ಬಳಿಕೆ ಪೊಲೀಸರಿಗೆ ದೂರು ನೀಡಿದ ಪರಿಣಾಮ ಸಧ್ಯ ಆ ಕಿಡ್ನ್ಯಾಪ್ಸ್೯ ರನ್ನ ಪೊಲೀಸರು ಬಂಧಿಸಿದ್ದಾರೆ. ಇನ್ನು ಬಾಲಕ ನೀಡಿದ ಒಂದೇ ಒಂದು ಸುಳಿವು ಆರೋಪಿಗಳನ್ನ ಬಂಧಿಸುವಲ್ಲಿ ಪೊಲೀಸರಿಗೆ ಬಹಳ ಸಹಕಾರಿಯಾಗಿತ್ತು. ಅದೆನೆಂದ್ರೆ ಪೊಲೀಸ್ ಇಲಾಖೆ ನೀಡಿದ್ದ ಆಟೋ ನಂಬರ್ ನ್ನ ಬಾಲಕ ನೆನಪಿನಲ್ಲಿಟ್ಟುಕೊಂಡಿದ್ದ ಬಾಲಕ ಪೊಲೀಸರಿಗೆ ಆ ನಂಬರ್ ಹೇಳಿದ್ದ. ಆತನನ್ನ ಕಿಡ್ನ್ಯಾಫ್ಸ್೯ ಆಟೋದಲ್ಲಿ ಹತ್ತಿಸಿಕೊಂಡು ಹೋಗುತ್ತಿದ್ದಾಗ ನಂಬರ್ ನೋಡಿದ್ದ, ಹೀಗಾಗಿ ಆ ನಂಬರ್ ನ ಹಿಡಿದು ತಲಾಷ್‌ ಮಾಡಿದ ಪೊಲೀಸರು ಕೊನೆಗೂ ಪ್ರಕರಣವನ್ನ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.ಅಲ್ಲದೆ ಆರೋಪಿಗಳಿಂದ 26 ಲಕ್ಷ ನಗದು ಸೇರಿದಂತೆ ಪ್ರಕರಣಕ್ಕೆ ಬಳಸಿದ್ದ ಒಂದು ಆಟೋ ಹಾಗೂ ಬೈಕ್‌ನ್ನ ಸೀಜ್ ಮಾಡಿದ್ದಾರೆ. ಅಲ್ಲದೆ ಅವರನ್ನು ಕರೆತಂದು ವಿಚಾರಣೆ‌ ಮಾಡಿದಾಗ ನಜೀರ್‌ ಮನೆಯಲ್ಲಿ ಪ್ಲಂಬರ್ ಕೆಲಸ‌ಮಾಡುತ್ತಿದ್ದವನೆ ಪ್ರಕರಣದ ಸೂತ್ರದಾರ ಎನ್ನುವದು ಗೊತ್ತಾಗಿದೆ. ಇಷ್ಟೊಂದು ಆಸ್ತಿ‌‌ ಇದೆ ಮಗನನ್ನ ಕಿಡ್ನ್ಯಾಪ್ ಮಾಡಿದ್ರೆ ಹಣ ಬಿಜ್ತಾನೆ ಅಂತ ತಿಳಿದ ಪ್ಲಂಬರ್ ಅಜಾದ್ ತನ್ನ ಸ್ನೇಹಿತರಿಗೆ ವಿಷಯ ತಿಳಿಸಿದ್ದಾನಂತೆ. ಅದರಂತೆ ಒಟ್ಟು 11 ಜನರ ತಂಡ ಕಿಡ್ನ್ಯಾಪ್ ಮಾಡಿ 40 ಲಕ್ಷ ವಸೂಲಿ‌ ಮಾಡಿದ್ರು.

ಸಧ್ಯ ಪ್ರಕರಣ ಇನ್ನೋಬ್ಬ ಆರೋಪಿ ಹಾಗೂ ನಜೀರ್ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಅಜಾದ್ ಏಸ್ಕೇಪ್ ಆಗಿದ್ದಾನೆ , ಸಧ್ಯ ಪೊಲೀಸರು ಆತನನ್ನ ಬಂಧಿಸಲು ಬಲೆ ಬೀಸಿದ್ದಾರೆ.ಅದೇ‌ ಏನೆ‌ ಇರಲಿ ತಾವು ಕೇಳಿದ್ದು ಬಂತು ಎಂದುಕೊಂಡಿದ್ದ ಕಿಡ್ನ್ಯಾಪ್ಸ್೯ ಗೆ ಪೊಲೀಸರು ಕೃಷ್ಣನ‌ ಜನ್ಮಸ್ಥಾನವ ತೊರಿಸಿದ್ದಾರೆ. ಅ ಮೂಲಕ ವಾಣಿಜ್ಯ ನಗರಿಯ ಬಹುದೊಡ್ಡ ಕಿಡ್ನ್ಯಾಪ್ ಕೇಸ್ ಸುಖಾಂತ್ಯಗೊಂಡಿದೆ.