ಪತ್ನಿಯನ್ನು ಹತ್ಯೆ ಮಾಡಲು ಆ್ಯಕ್ಸಿಡೆಂಟ್ ಪ್ಲಾನ್ ಮಾಡಿದ ಕಿರಾತಕ ಪತಿ.. ಯಾಕೆ ಅಂತೀರಾ ಹಾಗಾದ್ರೆ ಈ ಸುದ್ದಿ ಓದಿ…

ಗಂಡ-ಹೆಂಡತಿ ಜಗಳ ಉಂಡು ಮಲಗೋ ತನಕ ಅಂತಾರೆ. ಆದ್ರೆ, ಇಲ್ಲೊರ್ವ ಕಿರಾತಕ ಮಾತ್ರ ತನ್ನ ಹೆಂಡತಿಯನ್ನು ಹತ್ಯೆ ಮಾಡಲು ಸಕ್ಕತ್ ಪ್ಲಾನ್ ಮಾಡಿದ್ದಾ. ಆ ಪ್ಲಾನ್ ಏನು ಅಂತಾ ಹೇಳಿದ್ರೆ, ನೀವು ಖಂಡಿತಾ ಇಂತ ಗಂಡ ಇರ್ತಾನಾ ಅಂತಾ ಆತನಿಗೆ ಒಂದು ಸಾರಿ ಉಗುಳುವದು ಗ್ಯಾರಂಟಿ.

ಅಂದಹಾಗೆ ಹೀಗೆ ಕಿಮ್ಸ್ ಆಸ್ಪತ್ರೆಯಲ್ಲಿ ನರಕಯಾತನೆ ಅನುಭವಿಸುತ್ತಿರುವ ಈ ಮಹಿಳೆ ಹೆಸರು ಗೀತಾ ಬ್ಯಾಡಗಿ. ಕಳೆದ ಒಂದುವರೆ ವರ್ಷಗಳ‌ ಹಿಂದೆ ಹುಬ್ಬಳ್ಳಿಯ ಕೇಶ್ವಾಪುರ ನಿವಾಸಿಯಾದ ರಾಘವೇಂದ್ರ ಬ್ಯಾಡಗಿ ಅವರೊಂದಿಗೆ ಹುಬ್ಬಳ್ಳಿಯ ಹೆಗ್ಗೇರಿ ನಿವಾಸಿಯಾದ ಗೀತಾಳನ್ನು ಮದುವೆ ಮಾಡಿಕೊಂಡಲಾಗಿತ್ತು.‌ ಆದ್ರೆ, ಮದುವೆಯಾದ ಕೆಲವು ತಿಂಗಳು ಚನ್ನಾಗಿ ಜೀವನ ನಡೆಸಿದ ರಾಘವೇಂದ್ರ ನಂತ್ರ ಗೀತಾಳ ನಡತೆ ಕುರಿತು ಸಂಶಯ ವ್ಯಕ್ತಪಡೆಸುತ್ತಿದ್ದ. ಹೀಗಾಗಿ ಗಂಡ ಹೆಂಡತಿ ನಡುವೆ ಆಗಾಗ ಜಗಳ ಆಗ್ತಿತ್ತು. ಆದಾದ ನಂತ್ರ ಗಂಡ ರಾಘವೇಂದ್ರ ಗೀತಾಳ ಮೇಲೆ ಅಟ್ಯಾಕ್ ಮಾಡಿದ್ದ. ಈವಾಗ ಮತ್ತೆ ಆಟೋ ಹತ್ತಿಸಿ ಕೊಲೆಗೆ ಯತ್ನಿಸಿದ್ದಾನೆ ಅಂತ ಗೀತಾ ವಿದ್ಯಾನಗರ ಪೊಲೀಸ ಠಾಣೆಯಲ್ಲಿ‌ ಪ್ರಕರಣ ದಾಖಲಿಸಿದ್ದಾಳೆ…

ರಾಘವೇಂದ್ರ ಹಾಗೂ ಗೀತಾಳ ವೈವಾಹಿಕ ಜೀವನ ಅಷ್ಟೊಂದು ಸರಿ ಇರದಿದಕ್ಕೆ‌ ಗೀತಾ ತವರು ಮನೆಯಲ್ಲಿ ವಾಸವಾಗಿದ್ದಳು. ಮೊನ್ನೆ ಗೀತಾ ಹಾಗೂ ಅವಳ ಸಹೋದರಿ ಬೈಕ್ ನಲ್ಲಿ ಮಾರುಕಟ್ಟೆಗೆ ಹೋದಾಗ ಅವರನ್ನು ನೋಡಿ ಆಟೋ ದಲ್ಲಿ ಹಿಂಬಾಲಿಸುತ್ತಾ ಬಂದು, ಹುಬ್ಬಳ್ಳಿಯ ಹೊಸೂರು ವೃತ್ತದ ಬಳಿ ಬೈಕ್ ಗೆ ಆಟೋ‌ ಡಿಕ್ಕಿ‌ ಹೊಡೆಸಿದ್ದಾನೆ ಈ‌ ಕಿರಾತಕ ಗಂಡ ರಾಘವೇಂದ್ರ. ಈ ಹಿಂದೆಯು ತಲೆಗೆ ಬಲವಾಗಿ ಹೊಡೆದು ‌ಕೊಲೆಗೆ ಯತ್ನಿಸಿದ್ದ ರಾಘವೇಂದ್ರರಾಘವೇಂದ್ರ. ಮೊನ್ನೆ ಆಟೋ ಆ್ಯಕ್ಸಿಡೆಂಟ್ ಮಾಡಿ‌ ಕೊಲೆಗೆ ಯತ್ನಿಸಿದ್ದಾನೆ ಎಂದು ಗೀತಾಳ ತಾಯಿ‌ ಆರೋಪವಾಗಿದೆ.

ಸದ್ಯ ವಿದ್ಯಾನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹತ್ಯೆಗೆ ಸಂಚು ರೂಪಿಸಿದ ಗಂಡ ರಾಘವೇಂದ್ರನಿಗಾಗಿ ಬಲೆ ಬಿಸಿದ್ದಾರೆ. ಗಂಡನ ಕಿರಾತಕ ಬುದ್ದಿಯಿಂದ ಹೆಂಡತಿ ಆಸ್ಪತ್ರೆಯಲ್ಲಿ ನರಳಾಡುತ್ತಿದ್ದಾಳೆ.‌‌ ಕೂಡಲೇ ಕಿರಾತಕ ಗಂಡನನ್ನು ಬಂಧಿಸಿ ಗೀತಾಳಿಗೆ ರಕ್ಷಣೆ ನೀಡಬೇಕು. ಯಾವ ಸಮಯದಲ್ಲಿ ಏನಾಗುತ್ತೇ ಎನ್ನುವ ಭಯದಲ್ಲಿದ್ದಾಳೆ ನೊಂದ ‌ಹೆಂಡತಿ..