ಪತ್ನಿ ಮುಖಕ್ಕೆ ಬಿಸಿ ಎಣ್ಣೆ ಎರಚಿದ ಪತಿ!!

Kalburgi: Husband pour hot oil in her Wife Face
Kalburgi: Husband pour hot oil in her Wife Face

ಅಡುಗೆ ಗೆ ಜಾಸ್ತಿ ಎಣ್ಣೆ ಹಾಕಿದ್ದಕ್ಕೆ ಕೋಪಗೊಂಡ‌ ಗಂಡನೊಬ್ಬ ಕುದಿಯುವ ಎಣ್ಣೆಯನ್ನು ಪತ್ನಿಗೆ ಎರಚಿ ಕೌರ್ಯ ಮೆರೆದ ಘಟನೆ ಕಲಬುರ್ಗಿಯಲ್ಲಿ ನಡೆದಿದೆ.

ad

ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ನೆಲೋಗಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಭೀಮಾಶಂಕರ ಎಂಬಾತನೇ ಹೀಗೆ ಕೌರ್ಯ ಮೆರೆದ ಪತಿ.

ಬಿಸಿ ಎಣ್ಣೆ ಎರಚಿದ್ದರಿಂದ ಪತ್ನಿ ಪ್ರಿಯಾಂಕ ಮುಖ ಸಂಪೂರ್ಣ ಸುಟ್ಟುಹೋಗಿದ್ದು ಸಧ್ಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮದುವೆಯಾದಾಗಿನಿಂದಲೂ ಪತ್ನಿ ಗೆ ಕಿರುಕುಳ ನೀಡುತ್ತಲೇ ಬಂದಿದ್ದ ಪಾಪಿ ಪತಿ ಭೀಮಾಶಂಕರ ಆಗಾಗ ಪತ್ನಿಯನ್ನು ಮನಬಂದಂತೆ ಥಳಿಸುತ್ತಿದ್ದ ಎನ್ನಲಾಗಿದೆ.

 

ಇಂದು ಕೂಡ ಪತ್ನಿ ಪ್ರಿಯಾಂಕ ಮಾಡಿದ ಅಡುಗೆಗೆ ಎಣ್ಣೆ ಜಾಸ್ತಿಯಾಗಿದೆ ಎಂದು ತಗಾದೆ ತೆಗೆದ ರಾಕ್ಷಸ ಬಿಸಿ ಎಣ್ಣೆ ಎರಚಿ ಅಮಾನವೀಯತೆ ಮೆರೆದಿದ್ದಾನೆ. ಇದೀಗ ಜೇವರ್ಗಿ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದು ಪಾಪಿ ಪತಿ ಬಂಧಿಸಿದ್ದಾರೆ.