ಮಾಜಿ‌‌ ಸಿಎಂ ಬಿಎಸ್‌ವೈ ವಿರುದ್ಧ ಪ್ರಕರಣ‌ ದಾಖಲಿಸಲು ಕಲಬುರಗಿ JMFC ಕೋಟ್೯ ಆದೇಶ

ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಸಿಎಂ ಎಚ್ ಡಿ ಕುಮಾರಸ್ವಾಮಿ ವಿರುದ್ಧ ಬಿಜೆಪಿ‌ ರಾಜ್ಯಾದ್ಯಕ್ಷ ಬಿಎಸ್ ಯಡಿಯೂರಪ್ಪ ನಡೆಸಿದ್ದ ತೀವ್ರ ವಾಗ್ದಾಳಿಗೆ, ಇದೀಗ ಅವರ ವಿರುದ್ಧ ಪ್ರಕರಣ ದಾಖಲಿಸುವಂತೆ ಕಲಬುರಗಿ ಜೆಎಮ್‌ಎಫ್‌ಸಿ ಕೋಟ್೯ ಆದೇಶ ನೀಡಿದೆ.

ಎಚ್‌ಡಿ ಕುಮಾರಸ್ವಾಮಿ ಸೇನೆ ಅಭಿಮಾನಿ ಬಳಗದ ರಾಜ್ಯಾದ್ಯಕ್ಷ ವೀರಣ ಕೊರಳ್ಳಿ‌ ಎಚ್‌ಡಿಕೆ ವಿರುದ್ಧ ಬಿಎಸ್‌ವೈ ಬಳಸಿದ್ದ ಭಾಷೆಯನ್ನ ಖಂಡಿಸಿ ಕೋಟ್೯ ಮೇಟ್ಟಿಲೆರಿದ್ದರು. ಹೀಗಾಗಿ ದೂರುದಾರನ ವಿಚಾರಣೆ ನಡೆಸಿದ ನ್ಯಾಯಾಲಯ, ಬಿಎಸ್‌ವೈ ವಿರುದ್ಧ ಐಪಿಸಿ ಸೆಕ್ಷನ್ 153(A) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳುವಂತೆ ಆದೇಶ ನೀಡಿದೆ. ಇನ್ನು ವಿಧಾನಸಭೆ ಚುನಾವಣಾ ಪ್ರಚಾರದಲ್ಲಿ ಬಿಎಸ್‌ವೈ,‌ ಎಚ್‌ಡಿಕೆ ಓರ್ವ ವಚಭ್ರಷ್ಟ ವ್ಯಕ್ತಿ, ಬೆನ್ನಿಗೆ ಚೂರಿ ಹಾಕುವುದು, ಮೋಸ ಮಾಡುವುದು, ವಂಚನೆ ಮಾಡುವುದು ಇವೆಲ್ಲ ಎಚ್‌ಡಿಕೆ ರಕ್ತದಲ್ಲೆ ಬಂದಿದೆ ಅಂತಾ ವಿವಾದತ್ಮಕ ಹೇಳಿಕೆಯನ್ನ ನೀಡಿದ್ದರು..‌

 

ಇದೀಗ ಬಿಎಸ್‌ವೈಗೆ ಒಂದರ ಮೇಲೊಂದರಂತೆ ಸಂಕಷ್ಟ ಎದುರಾಗುತ್ತಿದ್ದು, ಅಶೋಕ ನಗರ ಠಾಣೆ ಪೊಲೀಸರು ಇದೀಗ ಬಿಎಸ್‌ವೈ ವಿರುದ್ಧ ಪ್ರಕರಣ ದಾಖಲಿಸಿಕೊಂಡು‌ ಮುಂದೆನ್ ಮಾಡ್ತಾರೆ ಅನ್ನೊದು ಕಾದು ನೋಡಬೇಕು…