ನಡುರೋಡ್​ನಲ್ಲಿ ಪೊಲೀಸರನ್ನೇ ಅಟ್ಟಾಡಿಸಿಕೊಂಡು ಹೊಡೆದ್ರು ಗೂಂಡಾಗಳು- ಪೊಲೀಸರಿಗೆ ಇದೆಂತಾ ಸ್ಥಿತಿ ರಾಮ…ರಾಮ!

KARNATAKA KURUKSHETRA: Hooligan's Attack Police in Bengaluru.

ಎಲೆಕ್ಷನ್​ ಹೊತ್ತಿನಲ್ಲೇ ರಾಜ್ಯದಲ್ಲಿ ಕಾಂಗ್ರೆಸ್​​ ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿದ್ದು, ನಗರದಲ್ಲಿ ಪೊಲೀಸರಿಗೆ ರಕ್ಷಣೆ ಇಲ್ಲದಂತಾಗಿದೆ.

ad

ಹೌದು ವರ್ತೂರಿಯಲ್ಲಿ ಗೂಂಡಾಗಳು ಪೊಲೀಸರನ್ನೇ ಅಟ್ಟಾಡಿಸಿಕೊಂಡು ಹಲ್ಲೆ ನಡೆಸಿದ್ದು, ಇಸ್ಪೀಟ್​​ ಆಟ ಆಡಿದನ್ನು ಪ್ರಶ್ನಿಸಿದ್ದಕ್ಕೆ ಪೊಲೀಸರೇ ಹಲ್ಲೆಗೊಳಗಾಗಿದ್ದಾರೆ.
ಹೌದು ವರ್ತೂರಿನಲ್ಲಿ ನಿನ್ನೆ ಇಸ್ಪೀಟ್​​ ಆಟ ಎಲ್ಲೆ ಮೀರಿತ್ತು. ಈ ಹಿನ್ನೆಲೆಯಲ್ಲಿ ವರ್ತೂರು ಪೊಲೀಸ್ ಠಾಣೆಯ ಬಸಪ್ಪ ಗಾಣಗೇರ್,ಶರಣಪ್ಪ ಇಸ್ಪೀಟ್​ ಅಡ್ಡೆಯ ಮೇಲೆ ದಾಳಿ ನಡೆಸಿದ್ದರು. ಆದರೇ ಈ ವೇಳೆ ಕುಮಾರ್,ಸಂದೀಪ,ಮೂರ್ತಿ,ಮುರಳಿ,ಮೋಹನ ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ್ದಾರೆ.

ನಿನ್ನೆಯೂ ಜಾಲಹಳ್ಳಿಯಲ್ಲಿ ಹೋಂ ಗಾರ್ಡ್​ ಮೇಲೆಯೂ ಹಲ್ಲೆ ನಡೆದಿತ್ತು. ವರ್ತೂರಿನಲ್ಲಿ ನಡೆದ ಹಲ್ಲೆ ದೃಶ್ಯಾವಳಿಗಳು ಸಖತ್ ವೈರಲ್​ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ. ನಗರದಲ್ಲಿ ಪೊಲೀಸರಿಗೆ ರಕ್ಷಣೆ ಇಲ್ಲದಂತಾಗಿದ್ದು, ಗೃಹ ಸಚಿವರು ಏನು ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.  ಇನ್ನು ಘಟನೆ ನಡೆದ ಬಳಿಕ ಎಚ್ಚೆತ್ತ ಗೃಹ ಸಚಿವರು ಗೂಂಡಾಗಳ ವಿರುದ್ಧ ಕ್ರಮಕ್ಕೆ ಮುಂಧಾಗಿದ್ದು, ಪೊಲೀಸರ ಮೇಲೆ ಯೇ ಹಲ್ಲೆ ನಡೆಸಿದ ನಾಲ್ವರನ್ನು ಬಂಧಿಸಿದ್ದಾರೆ. ಒಂದೆಡೆ ವಿದ್ವತ್ ಮೇಲೆ ಹಲ್ಲೆ, ಬಳಿಕ ಪೊಲೀಸರ ಮೇಲೆಯೇ ಹಲ್ಲೆ ನಗರದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿರೋದಕ್ಕೆ ಸಾಕ್ಷಿ ಒದಗಿಸಿದ್ದು, ಸರ್ಕಾರ ಇನ್ನಾದರೂ ಎಚ್ಚೆತ್ತುಕೊಳ್ಳುತ್ತಾ ಕಾದು ನೋಡಬೇಕಿದೆ.