ಕೇಳದೆ ರಜೆ ಹಾಕಿದ ಲಾರಿ ಚಾಲಕನಿಗೆ ಸಿಕ್ಕ ಉಡುಗೊರೆ ಏನು ಗೊತ್ತಾ?!

ಮಾಲೀಕರ ಅನುಮತಿ ಪಡೆಯದೇ ರಜೆ ಹಾಕಿದ್ದಕ್ಕೆ ಲಾರಿ ಮಾಲೀಕ ಮತ್ತು ಆತನ ಸ್ನೇಹಿತರು ಬಡ ಲಾರಿ ಚಾಲಕನಿಗೆ ಹಿಗ್ಗಾಮುಗ್ಗ ಥಳಿಸಿರುವ ಘಟನೆ ಮಂಡ್ಯದಲ್ಲಿ ನಡೆದಿದೆ‌.ಮಂಡ್ಯ ನಗರದ ಕಲ್ಲಹಳ್ಳಿಯಲ್ಲಿರುವ ಎಪಿಎಂಸಿ ಬೆಲ್ಲದ ಮಾರುಕಟ್ಟೆಯಲ್ಲಿ ಘಟನೆ ನಡೆದಿದ್ದು, ಮಾರುಕಟ್ಟೆಯಲ್ಲಿ ಬೆಲ್ಲವನ್ನು ಹೊರಗೆ ರಫ್ತು ಮಾಡಲಾಗುತ್ತದೆ. ಆದರೆ ಲಾರಿ ಮಾಲೀಕ ಮಹೇಶ್ ಎಂಬಾತ ಡ್ರೈವರ್ ಅನುಮತಿ ಪಡೆಯದೇ ರಜೆ ಹಾಕಿದ್ದಾನೆವೆಂಬ ಕಾರಣಕ್ಕೆ ಮಹೇಶ್ ಮತ್ತು ಆತನ ಸ್ನೇಹಿತರಾದ ಶಿವು, ಬೋರ ಎಂಬೋರನ್ನು ಕರೆ ತಂದು ಹಿಗ್ಗಾ ಮುಗ್ಗ ಥಳಿಸಿದ್ದಾನೆ.

ad


ಬೆಲ್ಟ್ ನಿಂದ ಹಿಗ್ಗಾಮುಗ್ಗ ಥಳಿಸಿ, ಕಾಲಿನಿಂದ ಒದ್ದು ಅಮಾನವೀಯ ಕೃತ್ಯ ಮೆರೆದಿದ್ದು, ಅವಾಚ್ಯ ಶಬ್ದಗಳಿಂದಲೂ ನಿಂದಿಸಿದ್ದಾನೆ. ಬಡ ಚಾಲಕ ಮತ್ತೊಂದು ಬಾರಿ ತಪ್ಪು ಮಾಡಲ್ಲ ಎಂದು ಕೇಳಿದರೂ ಅವನನ್ನು ಬಿಡದೇ ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡಿದವರ ಪೈಕಿ ಶಿವು ಎಂಬಾತ ಮಂಡ್ಯ ಜೆಡಿಎಸ್ ನಾಯಕಿ‌ ಅಂಬುಜಮ್ಮ ಅವರ ಪುತ್ರನಾಗಿದ್ದಾನೆ.

ಚಾಲಕ ಮಾಲೀಕರನ್ನು ಕೇಳದೇ ಎರಡು ದಿನ ಕೆಲಸಕ್ಕೆ ಗೈರಾಗಿದ್ದ ಅನ್ನೋ ಸಣ್ಣ ಕಾರಣಕ್ಕೆ ಕೂಲಿ ಕಾರ್ಮಿಕನ ಮೇಲೆ ಮೃಗೀಯ ವರ್ತನೆ ತೋರಿದ ಮಾಲೀಕ ಮತ್ತು ಆತನ ಸ್ನೇಹಿತರು ಅದನ್ನು ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿ ತಮ್ಮ ಪೌರುಷವನ್ನು ಸ್ನೇಹಿತರಿಗೆ ತೋರಿಸಿ ವಿಕೃತಿ ಸಹ ಮೆರೆದಿದ್ದಾರೆ. ಘಟನೆಯು ಮಂಡ್ಯ ಪಶ್ಚಿಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಆದರೆ ಪ್ರಕರಣ ದಾಖಲಾಗಿಲ್ಲ.