ಸಂತೆಯಲ್ಲಿ‌ ಹುಚ್ಚು ನಾಯಿ ದಾಳಿ…‌ಚಿಕಿತ್ಸೆ ನೀಡದ ಕಿಮ್ಸ್ ವೈದ್ಯರ ಹುಚ್ಚು ಬಿಡಿಸಿದ ಸಂಸದ ಪ್ರಲ್ಹಾದ ಜೋಶಿ..

ಉತ್ತರ ಕರ್ನಾಟಕದ ಸಂಜೀವಿನಿ ಎಂದು ಕರೆಸಿಕೊಳ್ಳುವ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ಮತ್ತೊಂದು ‌ಯಡವಟ್ಟು ಮಾಡಿದೆ. ಹೌದು ಧಾರವಾಡ ಜಿಲ್ಲೆ ನವಲಗುಂದ ಪಟ್ಟಣದ ಸಂತೆಯಲ್ಲಿ ಹುಚ್ಚು ನಾಯಿ ಏಕಾಏಕಿ‌ 4 ಜನರ ಮೇಲೆ‌ ದಾಳಿ ಮಾಡಿದ್ದು, ಗಾಯಾಳುಗಳನ್ನು ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ರು ಸಹ 4 ಗಂಟೆಯಾದ್ರು ಕಿಮ್ಸ್ ವೈದ್ಯರು ಚಿಕಿತ್ಸೆ ನೀಡದೆ‌ ಅಮಾನವೀಯತೆ ಮೆರೆದಿದ್ದಾರೆ…

ನವಲಗುಂದ ತಾಲೂಕಿನ ಹನುಮಂತಪ್ಪ ಬಾರಕೇರ, ಗುರುಶಾಂತಪ್ಪ ಬೆಂಡಿಗೇರಿ, ದ್ಯಾವಪ್ಪ ಪೂಜಾರ ಹಾಗೂ ಶಿವಪ್ಪ ರಾಮಪ್ಪ ಗೌಜಗೇರಿ ಎನ್ನುವ ಬಡ ರೋಗಿಗಳಿಗೆ ಚಿಕಿತ್ಸೆ ನೀಡದೆ ಕಿಮ್ಸ್ ನಲ್ಲಿ ನಾಯಿ‌ ಕಡಿತದ ಔಷಧಿ ಇದ್ರು ‌ಸಹ ವೈದ್ಯರು ಹೊರಗಡೆ ಬರದುಕೊಟ್ಟು ಕ್ರೂರತೆಯಿಂದ ವರ್ತಿಸಿದ್ದಾರೆ…

ಕೆಂಡಾಮಂಡಲವಾದ ಸಂಸದ ಪ್ರಲ್ಹಾದ ಜೋಶಿ:

ಕಿಮ್ಸ್ ಆಸ್ಪತ್ರೆಗೆ ಬಂದಿದ್ದ ಬಿಜೆಪಿ ಸಂಸದ ಪ್ರಲ್ಹಾದ ಜೋಶಿ ಬಡರೋಗಿಗಳನ್ನು ಕಂಡು ವೈದ್ಯರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ್ರು , 4 ಗಂಟೆಗೆ ಬಂದ್ರು‌ ಸಂಜೆ‌ 7 ಗಂಟೆಯಾದ್ರು‌ ಸಹ ಚಿಕಿತ್ಸೆ ‌ನೀಡಿದೇ ಹಾಗೇ ರಕ್ತ ಹರಿಯುತ್ತಿದ್ರು ವೈದ್ಯರು ಚಿಕಿತ್ಸೆ ನೀಡದಿದಕ್ಕೆ ಕಿಮ್ಸ್ ನಿರ್ದೇಶಕ ದತ್ತಾತ್ರೇಯ ಬಂಟ್ ಹಾಗೂ ಅಧೀಕ್ಷರಾದ ಡಾ: ಶಿವಪ್ಪ ಹಾಗು ರಾಮಲಿಂಗಪ್ಪ ತರಾಟೆಗೆ ತೆಗೆದುಕೊಡ್ರು. ಬಡರೋಗಿಗಳನ್ನು ಹೀಗೆ ಉಪಚಾರ ಮಾಡೋದು ಎಂದು ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು. ‌ಕೂಡಲೇ ಆ ವೈದ್ಯರನ್ನು ಅಮಾನತು ಮಾಡಬೇಕೆಂದು ಒತ್ತಾಯಿಸಿದ್ರು..

ಕಿಮ್ಸ್ ಆಸ್ಪತ್ರೆಯಲ್ಲಿ ಬಿಜೆಪಿ ಕಾರ್ಯಕರ್ತರ ಮೌನ ಹೋರಾಟ:

ಚಿಕಿತ್ಸೆ ನೀಡದ ವೈದ್ಯರನ್ನು ಅಮಾನತು ಮಾಡಬೇಕೆಂದು‌ ಒತ್ತಾಯಿಸಿ‌ ಬಿಜೆಪಿ ಕಾರ್ಯಕರ್ತರು ಕಿಮ್ಸ್ ಆಸ್ಪತ್ರೆ ಒಳಗಡೆಯೇ ಮೌನ ಹೋರಾಟ ಮಾಡಿದ್ರು. ರೋಗಿಗಳಿಗೆ ಹೊರಗಡೆ ಔಷಧಿ ಬರೆದುಕೊಂಟ ವೈದ್ಯರನ್ನು ಅಮಾನತು ಮಾಡೋದಾಗಿ ಭರವಸೆ ನೀಡಿದ ಬಳಿ‌ಕ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ವಾಪಾಸ್ಸ್ ಪಡೆದರು.

ವರದಿ: ಮಂಜು ಪತ್ತಾರ ಬಿಟಿವಿ ಹುಬ್ಬಳ್ಳಿ..