ಪೊಲೀಸ್​​ ಪೇದೆ ನೇಮಕಕ್ಕೆ ಬಂದವನು ಹೆಣವಾಗಿ ಹೋದ- ಇದು ಓಟ ತಂದ ಸಾವು!!

Man Died in Heart attack by Physical Eligibility Testing Time.
Man Died in Heart attack by Physical Eligibility Testing Time.

ಆತ ಉದ್ಯೋಗ ಸೇರುವ ಕನಸಿನೊಂದಿಗೆ ಅಲ್ಲಿಗೆ ಬಂದಿದ್ದ. ದೈಹಿಕ ಅರ್ಹತೆ ಪರೀಕ್ಷೆಗಾಗಿ ಶಕ್ತಿಮೀರಿ ಓಡಿದ್ದ. ಆದರೇ ಆ ಓಟವೇ ಆತನ ಸಾವಿಗೆ ಕಾರಣವಾಗಿದ್ದು, ಆತ ಕೆಲಸದ ಕನಸು ಹೊತ್ತು ಕಾಲಿಟ್ಟಿದ್ದ ಕ್ರೀಡಾಂಗಣವೇ ಆತನ ಸಾವಿಗೆ ಸಾಕ್ಷಿಯಾಗಿದೆ.

ಹೌದು ಗುಲ್ಬರ್ಗಾದ ಡಿಆರ್ ಮೈದಾನದಲ್ಲಿ ಇಂತಹದೊಂದು ಹೃದಯ ವಿದ್ರಾವಕ ಘಟನೆ ನಡೆದಿದೆ.  ಗುಲ್ಬರ್ಗಾದ ಡಿಆರ್​ ಮೈದಾನದಲ್ಲಿ ಕೆಎಸ್​ಆರ್​ಪಿ ಬೆಟಾಲಿಯನ್​​ನಲ್ಲಿ ಪೇದೆಗಳ ನೇಮಕಕ್ಕಾಗಿ ದೈಹಿಕ ಕ್ಷಮತೆ ಪರೀಕ್ಷೆ ನಡೆದಿತ್ತು. ಈ ವೇಳೆ ನೂರಾರು ಯುವಕರು ಪಾಲ್ಗೊಂಡಿದ್ದರು. ಈ ವೇಳೆ ಓಟದಲ್ಲಿ ಪಾಲ್ಗೊಂಡಿದ್ದ 21 ವರ್ಷದ ವಿಕಾಸ್ ಗಾಯಕ್ವಾಡ್ ಎಂಬ ಯುವಕ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ.
ಮೃತ ವಿಕಾಸ್​ ಬೀದರ್ ಜಿಲ್ಲೆ ಬಸವಕಲ್ಯಾಣ ಪಟ್ಟಣ ನಿವಾಸಿಯಾಗಿದ್ದು, ಪೊಲೀಸ್ ಪೇದೆ ಕೆಲಸಕ್ಕೆ ಅರ್ಜಿ ಸಲ್ಲಿಸಿ ದೈಹಿಕ್ ಪರೀಕ್ಷೆಗಾಗಿ ಗುಲ್ಬರ್ಗಾಗೆ ಬಂದಿದ್ದ. ತೀವ್ರ ಹೃದಯಾಘಾತದಿಂದ ವಿಕಾಸ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

 

 

 

 

ಸ್ಥಳಕ್ಕೆ ಐಜಿಪಿ ಮುರುಗನ್​ ಹಾಗೂ ಎಸ್​​ಪಿ ಶಶಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಒಟ್ಟಿನಲ್ಲಿ ಕೆಲಸ ಸೇರುವ ಕನಸಿನಲ್ಲಿ ಬಂದಿದ್ದ ವ್ಯಕ್ತಿ ಮಸಣ ಸೇರಿದ್ದು, ಮಾತ್ರ ದುರಂತವೇ ಸರಿ