ಐಟಿಐ ಪರೀಕ್ಷೆಯಲ್ಲಿ ಸಾಮೂಹಿಕ ನಕಲು.ಇಲ್ಲಿ ನಕಲಿಗೆ ಸಿಬ್ಬಂದಿಯೇ ಸಾಥ್. ಹೀಗೂ ನಡೆಯುತ್ತಾ ನಕಲು?

ಐಟಿಐ ಪರೀಕ್ಷೆಯಲ್ಲಿ ಸಾಮೂಹಿಕ ನಕಲು…..ಸಿಸಿ ಕ್ಯಾಮೆರಾ ಬಂದ್ ಮಾಡಿ ಕಾಪಿ ಮಾಡಿಸುತ್ತಿರೋ ಸಿಬ್ಬಂದಿ….ಪ್ರಶ್ನೆ ಪತ್ರಿಕೆ ಮೇಲೆಯೇ ಉತ್ತರದ ಚಿತ್ರಗಳನ್ನು ಬರೆದುಕೊಟ್ಟಿರೋ ಆರೋಪ….ಕ್ಯಾಮೆರಾ ಕಂಡ ಕೂಡಲೇ ಸಿಸಿ ಕ್ಯಾಮೆರಾ ಆನ್ ಮಾಡಿದ ಸಿಬ್ಬಂದಿ…

adಆಂಕರ್- ಗದಗ ನಗರದ ಶ್ರೀ ತೋಂಟದಾರ್ಯ ಇಂಜಿನಿಯರಿಂಗ್ ಕಾಲೇಜು ಆವರಣದಲ್ಲಿನ ಸರ್ ಸಿದ್ದಪ್ಪ ಕಂಬಳಿ ಸ್ಮಾರಕ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಇಂದು ನಡೀತಿರೋ ಐಟಿಐ ಪರೀಕ್ಷೆ ಯಲ್ಲಿ ಸಮೂಹಿಕ ನಕಲು ನಡೆದಿದೆ. ಕಾಲೇಜು ಸಿಬ್ಬಂದಿ ಹಾಗೂ ಕೊಠಡಿ ಮೇಲ್ವಿಚಾರಕರೇ ಹಣ ಪಡೆದು ಈ ಸಾಮೂಹಿಕ ನಕಲಿಗೆ ಅನುವು ಮಾಡಿಕೊಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದಕ್ಕೆ ಪುಷ್ಠಿ ನೀಡುವಂತೆ ಅರ್ಧಗಂಟೆಗಳ ಕಾಲ ಸಿಸಿ ಕ್ಯಾಮೆರಾ ಆಫ್ ಮಾಡಲಾಗಿತ್ತು.

ಇಂದು ಇಂಜಿನಿಯರಿಂಗ್ ಡ್ರಾಯಿಂಗ್ ವಿಷಯದ ಪರೀಕ್ಷೆ ನಡೆಯುತ್ತಿದ್ದು, ಪ್ರಶ್ನೆ ಪತ್ರಿಕೆ ಮೇಲೆ ಏನೂ ಬರೆಯಬಾರದು ಎಂಬ ನಿಯಮ ಇದ್ದರೂ ಕೂಡ ಪ್ರಶ್ನೆ ಪತ್ರಿಕೆ ಹಿಂಬದಿಯೇ ಉತ್ತರಗಳನ್ನು ಮೊದಲೇ ಬರೆದಿಡಲಾಗಿತ್ತು. ಡ್ರಾಯಿಂಗ್ ವಿಷಯ ಇದ್ದ ಕಾರಣ, ಪ್ರಶ್ನೆ ಪತ್ರಿಕೆ ಮೇಲೆಯೇ ವಿಷಯದ ಡ್ರಾಯಿಂಗ್ ಮಾಡಿರೋದು ಕ್ಯಾಮೆರಾಗಳ ಕಣ್ಣಿಗೆ ಸೆರೆ ಸಿಕ್ಕಿದೆ. ಮಾಧ್ಯಮಗಳ ಕ್ಯಾಮೆರಾ ಕಂಡ ನಂತರ ಉತ್ತರ ಬರೆದಿಟ್ಟುಕೊಂಡಿದ್ದ ಪ್ರಶ್ನೆ ಪತ್ರಿಕೆಯನ್ನು ವಿದ್ಯಾರ್ಥಿಗಳು ಮುಚ್ಚಿಟ್ಟುಕೊಳ್ಳಲು ಯತ್ನಿಸಿದ್ರು. ಇನ್ನು ಕಾಲೇಜು ಸಿಬ್ಬಂದಿಯೂ ಸಹ ಮಾಧ್ಯಮಗಳ ಕ್ಯಾಮೆರಾ ಕಂಡ ನಂತರವಷ್ಟೇ ಸಿಸಿ ಕ್ಯಾಮೆರಾ ಆನ್ ಮಾಡಿದ್ರು. ಸುಮಾರು ಅರ್ಧ ಗಂಟೆಗಳ ಕಾಲ ಸಿಸಿ ಕ್ಯಾಮೆರಾ ಆಫ್ ಆಗಿತ್ತು. ಈ ಬಗ್ಗೆ ಕೇಂದ್ರದ ಮುಖ್ಯಸ್ಥರಾದ ಶ್ರೀಧರ ಅವ್ರನ್ನ ಕೇಳಿದ್ರೆ ಕರೆಂಟ್ ಹೋಗಿತ್ತು ಎಂದು ಹಾರಿಕೆ ಉತ್ತರ ನೀಡ್ತಾರೆ.

 

ವರದಿ: ಎಚ್ ಎಮ್ ಶರೀಫನವರ್ ಬಿಟಿವಿ ನ್ಯೂಸ್ ಗದಗ.