ಹಳೆಯ ವೈಷಮ್ಯಕ್ಕೆ ಬಲಿಯಾದನಾ ಈ ಮ್ಯಾಕಾನಿಕ್?

ಆ ಯುವಕ ತಾನಾಯಿತು ತನ್ನ ಕೆಲಸ ಆಯಿತೆಂದು ಮ್ಯಾಕಾನಿಕ್ ಆಗಿ ಕೆಲಸ ಮಾಡ್ತಿದ್ದ..ಆದರೆ ಕೆಲವು ದಿನಗಳಿಂದ ಕೆಲಸ ಬಿಟ್ಟು ಬಿಡಾಡಿ ಥರ ಓಡಾಡ್ಕೊಂಡಿದ್ದ… ಇದೀಗ ಆ ಯುವಕ ಬರ್ಬರವಾಗಿ ಹತ್ಯೆಯಾಗಿ ಹೋಗಿದ್ದಾನೆ. ಅಷ್ಟಕ್ಕೂ ಆ ಕೊಲೆ ನಿಗೂಢವಾಗಿದ್ದು ಹಂತಕರ ಬಂಧನಕ್ಕೆ ಖಾಕಿ ಪಡೆ ತಲಾಶ್ ನಡೆಸಿದೆ..

ad

ಬರ್ಬರವಾಗಿ ಹತ್ಯೆಯಾಗಿ ಬಿದ್ದಿರುವ ಯುವಕ.. ಆಸ್ಪತ್ರೆಯ ಶವಗಾರದ ಮುಂದೆ ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ.. ಮತ್ತೊಂದೆಡೆ ಹತ್ಯೆಯಾದ ಸ್ಥಳವನ್ನ ಪರಿಶೀಲನೆ ನಡೆಸುತ್ತಿರುವ ಪೊಲೀಸರು.. ಅಷ್ಟಕ್ಕೂ ಇಂತಹದೊಂದ ಭಯಾನಕ ದೃಶ್ಯಗಳು ಕಂಡು ಬಂದಿದ್ದು ಕಲಬುರಗಿ ನಗರದ ದುಬೈ ಕಾಲೋನಿಯಲ್ಲಿ… ಹೌದು ಈ ಫೋಟೊದಲ್ಲಿ ಕಾಣ್ತಾಯಿರೋ ಯುವಕನ ಹೆಸರು ರಾಕೇಶ್…ವಯಸ್ಸು ಕೇವಲ 18 ಮಾತ್ರ… ಕಲಬುರಗಿ ನಗರದ ಆಶ್ರಯ ಕಾಲೋನಿ ನಿವಾಸಿ.. ಆದರೆ ಇತ ಕಳೆದ ತಡರಾತ್ರಿ ಬರ್ಬರವಾಗಿ ಕೊಲೆಯಾಗಿ ಹೋಗಿದ್ದಾನೆ.. ಗ್ಯಾರೇಜ್‌ವೊಂದರಲ್ಲಿ ಮ್ಯಾಕಾನಿಕ್ ಆಗಿ ಕೆಲಸ ಮಾಡ್ತಾ ಪೋಷಕರಿಗೆ ಆಶ್ರಯವಾಗಿದ್ದ ರಾಕೇಶ್‌ನನ್ನ ದುಷ್ಕರ್ಮಿಗಳು ಕುತ್ತಿಗೆಗೆ ಚಾಕುವಿನಿಂದ ಇರಿದು ನಂತರ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಎಂದಿನಂತೆ ಕಳೆದ ರಾತ್ರಿ ಖಾಕಿ ಪಡೆ ರೌಂಡ್ಸ್‌ಗೆ ತೆರಳಿದ್ದಾಗ ಘಟನೆ ಬೆಳಕಿಗೆ ಬಂದಿದ್ದು, ಹಂತಕರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.. ಇನ್ನು ಸ್ಥಳಕ್ಕೆ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಜಯಪ್ರಕಾಶ್ ಭೇಟಿ ನೀಡಿ ಪರಿಶೀಲನೆಯನ್ನ ನಡೆಸಿದ್ದು, ಶೀಘ್ರವೇ ಹಂತಕರನ್ನ ಬಂಧಿಸುವುದಾಗಿ ಭರವಸೆ ನೀಡಿದ್ದಾರೆ..

 

ಇನ್ನು ಕೊಲೆಯಾದ ರಾಕೇಶ್ ಕಲಬುರಗಿ ನಗರದ ಗ್ಯಾರೇಜ್‌ವೊಂದರಲ್ಲಿ ಮ್ಯಾಕಾನಿಕ್ ಆಗಿ ಕೆಲಸ‌ ಮಾಡುತ್ತಿದ್ದ. ತಂದೆ ಗಂಜ್‌ನಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು ಸಹ ಮಕ್ಕಳಿಗೆ ಏನು ಕೊರತೆಯಿಲ್ಲದ ಹಾಗೇ ನೋಡಿಕೊಳ್ಳುತ್ತಿದ್ದ. ಏತನ್ಮದ್ದೆ ರಾಕೇಶ್ ಕಳೆದ ಆರು ತಿಂಗಳ ಹಿಂದೆ ಕೆಲಸ ಬಿಟ್ಟು ಸ್ನೇಹಿತರೊಂದಿಗೆ ಅಲೆಯೋದು ಮಾಡುತ್ತಿದ್ದ.. ಕೆಲಸಕ್ಕೆ ಹೋಗೊ ಮಗನೇ ಅಂದರೆ ಸ್ನೇಹತರೊಡನೆ ಕಾಲಹರಣ ಮಾಡುತ್ತ ಓಡಾಡುತ್ತಿದ್ದ. ಅಲ್ಲದೇ ಕಳೆದ ವರ್ಷ ರಾಬರಿ ಪ್ರಕರಣವೊಂದರಲ್ಲಿ ಜೈಲಿಗೂ ಸಹ ಹೋಗಿ ಬಂದಿದ್ದ ರಾಕೇಶ್‌ನ ಸ್ನೇಹಿತರ ಮೇಲೆ ಕೊಲೆ ಅನುಮಾನ ವ್ಯಕ್ತವಾಗಿದೆ. ಯಾಕಂದ್ರೆ ರಾಕೇಶ್‌ನ ಜೊತೆ ಪ್ರತೊಯೊಂದು ಸಂದರ್ಭದಲ್ಲಿ ಜತೆಗಿರುತ್ತಿದ್ದ ಆತನ ಸ್ನೇಹಿತರು, ಕೊಲೆಯಾದಗ ಮಾತ್ರ ಯಾರು ಸುಳಿಯಲೆಯಿಲ್ಲ. ಹೀಗಾಗಿ ಎಲ್ಲೊ ಒಂದು ಕಡೆ ಸ್ನೇಹಿತರೇ ಕೊಲೆ ಮಾಡಿರಬಹುದಾ ಅಥಾವ ಹಳೆ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಡುಗಡೆಯಾದ ಆರೋಪಿಗಳೆ ಕೊಲೆ ಮಾಡಿರಬಹುದು ಎನ್ನೊ ಅನುಮಾನ ಪೋಷಕರದ್ದು…

ಅದೆನೇ ಇರಲಿ ಶರಣು ಸೂಫಿ ಸಂತರು ನಡೆದಾಡಿದ ಜಿಲ್ಲೆಯಲ್ಲಿ ಮೇಲಿಂದ ಮೇಲೆ ಕೊಲೆ ದರೋಡೆ ಪ್ರಕರಣಗಳು ಹೆಚ್ಚಾಗುತ್ತಿರುವುದು ಜನರನ್ನ ತೀವ್ರ ಆತಂಕಕ್ಕೆ ಇಡುಮಾಡಿದೆ. ಇನ್ನು ಪ್ರಕರಣವನ್ನ ದಾಖಲಿಸಿಕೊಂಡಿರುವ ಚೌಕ್ ಠಾಣೆ ಪೊಲೀಸರು ಹಂತಕರ ಬಂಧನಕ್ಕೆ ಬಲೆ ಬೀಸಿದ್ದಾರೆ..

ವರದಿ : ಅನಿಲ ಸ್ವಾಮಿ, ಗುಲ್ಬರ್ಗ