ಗೋಲಿಯಾಟದಲ್ಲಿ ನಿಸ್ಸೀಮನಾಗಿದ್ದ ಆತ ಕೊಲೆಯಾಗಿದ್ದು ಹೇಗೆ? ಕೊಲೆಗೆ ಬಳಸಿದ ಸಾಧನಗಳ್ಯಾವುವು?

ಈತ ಬಕ್ಳಾಸ್ ಆಡೋದ್ರಲ್ಲಿ ಅಂದ್ರೆ ಗೋಲಿಯನ್ನ ಗುಂಡಿಯಲ್ಲಿ ಹಾಕೋ ಜೂಜು ಆಡೋದ್ರಲ್ಲಿ
ನಿಸ್ಸೀಮ. ಮೊನ್ನೆ ತನ್ನ ಸ್ನೇಹಿತನ ಬರ್ತ್​ ಡೇಗೆ ಸ್ಪಾಟ್ ಗೆ ಬರಬೇಕಿತ್ತು ಆದ್ರೆ ನೆನ್ನೆ ಆ ಸ್ಪಾಟ್ ಗೆ ಬಂದಿದ್ದ ಯುವಕ ಇಂದು ಹೆಣವಾಗಿ
ಬಿದ್ದಿದ್ದಾನೆ. ಆ ಯುವಕ ಯಾರು ಎಲ್ಲಿ ಆ ಕೊಲೆ ನಡೆದಿದೆ ಎನ್ನೋದ್ರ ಡೀಟೇಲ್ಸ್ ಇಲ್ಲಿದೆ ನೋಡೋಣ.

ad


   
ಹೀಗೆ ಮುಗಿಲು ಮುಟ್ಟಿದ ಆಕ್ರಂದನ ತನ್ನ ಮಗನನ್ನ ಕಳೆದುಕೊಂಡ ಹೆತ್ತ ಕರುಳು ಕಣ್ಣೀರಿಡುತ್ತಿದೆ. ಮತ್ತೊಂದೆಡೆ
ರಕ್ತದ ಮಡುವಿನಲ್ಲಿ ಕೊಲೆಯಾಗಿ ಬಿದ್ದಿರುವ ಯುವಕ. ಹೌದು ಈತನ ಹೆಸರು ಭರತ್ ಅಂತಾ
ಕೇವಲ ವರ್ಷ. ದಾವಣಗೆರೆಯ ವಿನೋಭ ನಗರ ನಿವಾಸಿ. ನಿನ್ನೆ ರಾತ್ರಿ ಕಣ್ಣಿಗೆ ಖಾರದ ಪುಡಿ ಎರಚಿ ತಲೆ ಮೇಲೆ ಕಲ್ಲು
ಎತ್ತಿಹಾಕಿ ಕೊಲೆ ಮಾಡಿದ್ದಾರೆ. ಕೊಲೆಯಾದ ಭರತ್ ಓದುವುದು ಬಿಟ್ಟು ಪೆಟ್ರೋಲ್ ಬಂಕ್‌ ನಲ್ಲಿ ಕೆಲಸ ಮಾಡುತ್ತಿದ್ದ
ಇತ್ತೀಚೆಗೆ ಅದನ್ನು ಬಿಟ್ಟು ಬಕ್ಳಾಸ್​ ಎಂಬ ಈ ಗೋಲಿ ಜೂಜಾಟಕ್ಕೆ ಬಿದ್ದಿದ್ದ. ಪ್ರತಿನಿತ್ಯ ದಾವಣಗೆರೆ ಪಿಬಿ ರಸ್ತೆಯ
ಪ್ರೀತಂ ಬಾರ್ ಬಳಿ ಖಾಲಿ ಜಾಗದಲ್ಲಿ ಆಟ ವಾಡುತ್ತಿದ್ದ. ನೆನ್ನೆ ಅದೇನಾಗಿದೆಯೋ ಗೊತ್ತಿಲ್ಲ
ತಾನು ನಿತ್ಯ ಆಟವಾಡುತ್ತಿದ್ದ ಸ್ಪಾಟ್ ನಲ್ಲಿ ಹೆಣವಾಗಿ ಬಿದ್ದಿದ್ದಾನೆ ಭರತ್. ಪಕ್ಕದಲ್ಲಿ ಖಾರದಪುಡಿ ಬಿದ್ದಿರೋದನ್ನ ನೋಡಿದ್ರೆ
ಆತನಿಗೆ ಕಾರದ ಪುಡಿ ಎರಚಿ ತಲೆಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾರೆ ಅಂತಾ ಮೇಲ್ನೋಟಕ್ಕೆ ಕಾಣುತ್ತಿದೆ.
ಮಗನ ಕೊಲೆ ಕಂಡ ತಾಯಿ ಕಣ್ಣಿರಿಡುತ್ತಿದ್ದಾಳೆ ಅಷ್ಟೇ ಅಲ್ಲ ಆತನ ಸ್ನೇಹಿತರೂ ಬೇಸರ ವ್ಯಕ್ತಪಡಿಸಿದರು,

ಇನ್ನು ವಇಷಯ ತಿಳಿದ ಕೂಡಲೇ ಸ್ಥಳಕ್ಕೆ ಎಸ್ ಪಿ ಚೇತನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೇ,
ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ತಂಡ ತನಿಖೆ ನಡೆಸಿದೆ. ಇದೀಗ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ
ಬೀಸಿದ್ದಾರೆ.ಕೊಲೆಯಾದ ಸ್ಥಳದಲ್ಲಿ ಕೆಲ ಮಾಹಿತಿ ಲಭ್ಯವಾಗಿದ್ದು, ಕೂಡಲೇ ಆರೋಪಿಗಳನ್ನ ಪತ್ತೆಹಚ್ಚುತ್ತೇವೆ
ಅಂತಾರೆ ಎಸ್ಪಿ ಚೇತನ್.

ಈ ಸಂಬಂಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಕೈಗೊಳ್ಳಲಾಗಿದೆ. ಆತನಿಗೆ
ಪರಿಚಯ ಇರುವ ವ್ಯಕ್ತಿಗಳೇ ಈ ಕೃತ್ಯ ಎಸಗಿರಬಹುದೆಂಬ ಅನುಮಾನ ವ್ಯಕ್ತವಾಗಿದೆ. ಆದ್ರೆ ಬಕ್ಳಾಸ್ ಜೂಜಾಟದಿಂದ
ಯುವಕರ ನಡುವೆ ಜಗಳ ನಡೆದಿದೆಯೋ ಅಥವಾ ಇನ್ನಾವ ಕಾರಣಕ್ಕೆ ಕೊಲೆ ನಡೆದಿದೆಯೋ ಎನ್ನೋದನ್ನ
ಪೊಲೀಸರ ತನಿಖೆಯ ನಂತರ ತಿಳಿಯಬೇಕಿದೆ.
ರಾಜೇಶ್ ಬಿಟಿವಿ ದಾವಣಗೆರೆ.