ನನ್ನಪ್ಪ ನಿರಪರಾಧಿ – ಭಾವನಾ ಬೆಳೆಗೆರೆ

adಖ್ಯಾತ ಪತ್ರಕರ್ತ ರವಿ ಬೆಳಗೆರೆ ಇತ್ತ ತಮ್ಮ ಸಹೋದ್ಯೋಗಿ ಸುನೀಲ್ ಹೆಗ್ಗರವಳ್ಳಿಗೆ ಕೊಲೆಗೆ ಸುಫಾರಿ ನೀಡಿದ ಆರೋಪದ ಮೇರೆಗೆ ಬಂಧನಕ್ಕೊಳಗಾಗಿ ಸಿಸಿಬಿ ವಿಚಾರಣೆ ಎದುರಿಸುತ್ತಿದ್ದರೇ, ಅತ್ತ ಅವರ ಪ್ರೀತಿಯ ಪುತ್ರಿ ಭಾವನಾ ಬೆಳಗೆರೆ ನನ್ನ ತಂದೆ ನಿರಪರಾಧಿ. ಅವರು ನಿರಪರಾಧಿ ಎಂಬುದನ್ನು ಸಾಬೀತುಪಡಿಸಿ ಹೊರಬರುತ್ತಾರೆ ಎಂಬ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.


ರವಿ ಬೆಳಗೆರೆ ಬಂಧನಕ್ಕೊಳಗಾದ ಸುದ್ದಿ ಹೊರಬರುತ್ತಿದ್ದಂತೆ ಧಾರವಾಡದಲ್ಲಿದ್ದ ಭಾವನಾ ಬೆಳಗೆರೆಯವರನ್ನು ಬಿಟಿವಿ ಸಂಪರ್ಕಿಸಿತ್ತು. ಈ ವೇಳೆ ವಿವರವಾಗಿ ತಂದೆ ಬಗ್ಗೆ ಮಾತನಾಡಿದ ಭಾವನಾ, ನಮ್ಮ ತಂದೆ ನಿರಪರಾಧಿ, ಕೊಲೆಗಡುಕರಿಗೆ ಕೊಲೆ ಮಾಡಬೇಡಿ ಎಂದು ಹೇಳಿಕೊಟ್ಟವರು. ಆತ್ಮಹತ್ಯೆ ಮಾಡಿಕೊಂಡವರಿಗೆ ಮಾಡಿಕೊಳ್ಳಬೇಡಿ ಎಂದವರು. ಅವರು ಏಕಾಏಕಿ 15 ವರ್ಷದಿಂದ ನಮ್ಮ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಸುನೀಲ ಹೆಗ್ಗರವಳ್ಳಿ ಕೊಲೆಗೆ ಸುಪಾರಿ ಕೊಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.


ಅಲ್ಲದೇ ಸುನೀಲ್ ಹೆಗ್ಗರವಳ್ಳಿ ನಮ್ಮ ಜೊತೆ ಮನೆಮಗನಂತೆ ಇದ್ದವರು. ಅವರು ಮಾಧ್ಯಮಗಳಲ್ಲಿ ನನಗೆ ಎರಡು ವರ್ಷದಿಂದ ಜೀವಬೆದರಿಕೆ ಇರೋದು ಗೊತ್ತಿತ್ತು ಎನ್ನುತ್ತಿದ್ದಾರೆ. ಹಾಗಿದ್ದರೇ ಜೀವಬೆದರಿಕೆ ಇರೋರು ಯಾಕೆ ಮತ್ತೆ ನಮ್ಮ ಕಚೇರಿಯಲ್ಲಿ ಕೆಲಸಕ್ಕೆ ಸೇರಿದರು? ಸುನೀಲ್ ರನ್ನು ಕೊಲ್ಲಿಸುವ ಅಗತ್ಯ ನನ್ನ ತಂದೆಗಿಲ್ಲ. ಅವರು ಧೈರ್ಯದಿಂದ ವಿಚಾರಣೆ ಎದುರಿಸುತ್ತಾರೆ. ಆದರೇ ಅವರ ಆರೋಗ್ಯ ಚೆನ್ನಾಗಿಲ್ಲ ಅದೊಂದೆ ನಮಗೆ ಚಿಂತೆ ಎಂದರು. ಅಲ್ಲದೇ ರಾಜ್ಯದಲ್ಲಿ ಜನರನ್ನು ಪ್ರೀತಿಸುವ ಜನರಿಗೆ ನಾನು ಹೇಳುವುದಿಷ್ಟೆ ನಮ್ಮ ತಂದೆ ನಿರ್ದೋಷಿಯಾಗಿ ಹೊರಬರುತ್ತಾರೆ ಎಂದರು. ಒಟ್ಟಿನಲ್ಲಿ ತಂದೆ ನಿರಪರಾಧಿ ಎಂದು ಭಾವನಾ ಬಲವಾಗಿ ವಾದಿಸುತ್ತಲೇ ಇದ್ದಾರೆ. ತನಿಖೆ ಬಳಿಕ ಸತ್ಯ ಹೊರಬರಬೇಕಿದೆ.