ವರದಕ್ಷಿಣೆ ದಾಹಕ್ಕೆ ಕಾರ್ಪೋರೇಟರ್ ಪುತ್ರಿ ಬಲಿ!!

ವರದಕ್ಷಿಣೆ ಕಿರುಕುಳ ಅನ್ನೋ ಸಾಮಾಜಿಕ ಪಿಡುಗು ಬಡವರು-ಶ್ರೀಮಂತರು ಅನ್ನದೇ ಎಲ್ಲರ ಮನೆಯ ಕಣ್ಣೀರಿಗೂ ಕಾರಣವಾಗುತ್ತಿದೆ. ಇದಕ್ಕೆ ಉದಾಹರಣೆ ಎಂಬಂತೆ ಸಿಲಿಕಾನ ಬೆಂಗಳೂರಿನಲ್ಲಿ ಎಂ.ಎಸ್ಸಿ ಪದವೀಧರೆ ಕಾರ್ಪೋರೇಟರ್ ಪುತ್ರಿಯೊಬ್ಬಳು ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಬೆಂಗಳೂರಿನ ಎಚ್.ಎಸ್.ಆರ್.ಲೇಔಟ್ ನಿವಾಸಿ ವನಿತಾ ಆತ್ಮಹತ್ಯೆಗೆ ಶರಣಾದ ದುರ್ದೈವಿ. ಮೈಸೂರಿನ ಕಾರ್ಪೋರೇಟರ್ ನಾಗಭೂಷಣ ಪುತ್ರಿ ಯಾಗಿರುವ ವನಿತಾಳನ್ನು ಕಳೆದ ೬ ತಿಂಗಳ‌ ಹಿಂದೆ ತಮಿಳುನಾಡು ಮೂಲದ ಸಾಫ್ಟ್‌ವೇರ್ ಇಂಜಿನಿಯರ್ ವಸಂತ ಎಂಬುವವನಿಗೆ ಮದುವೆ ಮಾಡಿಕೊಡಲಾಗಿತ್ತು

 

ಆದರೇ ಅದ್ದೂರಿಯಾಗಿ ಮದುವೆ ಮಾಡಿಕೊಟ್ಟಿದ್ದರೂ ವನಿತಾ ಅತ್ತೆ ಸೊಸೆಯನ್ನು ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದರು ಎನ್ನಲಾಗಿದೆ. ಇದರಿಂದ‌ ಬೇಸತ್ತ ವನಿತಾ ನಿನ್ನೆ ಸಂಜೆ ೬.೩೦ ರ ವೇಳೆಗೆ ನೇಣಿಗೆ ಶರಣಾಗಿದ್ದು ನಿನ್ನೆ ತಡರಾತ್ರಿ ಗಂಡ ಮನೆಗೆ ಬಂದ ಬಳಿಕ‌ ಘಟನೆ ಬೆಳಕಿಗೆ ಬಂದಿದೆ.

https://youtu.be/v0DVQVIhezQ
ಸಾಯುವ ಮುನ್ನ ವನಿತಾ ನಾಲ್ಕು ಪುಟಗಳ ಡೆತ್ ನೋಟ್ ಬರೆದಿಟ್ಟಿದ್ದು ಅದರಲ್ಲಿ ಅತ್ತೆ ನೀಡಿದ ಕಿರುಕುಳದ ವಿವರ ಬರೆದಿಟ್ಟಿದ್ದು, ಅತ್ತೆ ಗಂಡದ ಎದುರು ಒಳ್ಳೆಯವರಂತೆ ನಟಿಸುತ್ತಿದ್ದು, ಗಂಡ‌ ಕೆಲಸಕ್ಕೆ ತೆರಳಿದ ಬಳಿಕ ಊಟವನ್ನು ಕೊಡದೇ ಸೊಸೆಯನ್ನು ಹಿಂಸಿಸುತ್ತಿದ್ದಳು ಎನ್ನಲಾಗಿದೆ

 

ವನಿತಾ ತಂದೆ ಕಾರ್ಪೋರೇಟರ್ ಆಗಿದ್ದು ಸಾಕಷ್ಟು ಚಿನ್ನಾಭರಣ ನೀಡಿ  ಅದ್ದೂರಿಯಾಗಿಯೇ ಮದುವೆ ಮಾಡಿಕೊಟ್ಟಿದ್ದರು ಎನ್ನಲಾಗಿದೆ. ಆದರೂ ವನಿತಾ ಅತ್ತೆಯ ತೀರದ ವರದಕ್ಷಿಣೆದಾಹಕ್ಕೆ ಬಾಳಿ ಬದುಕಬೇಕಿದ್ದ ಹೆಣ್ಣುಮಗಳೊಬ್ಬಳು ಬಲಿಯಾಗಿದ್ದಾಳೆ. ಎಚ್.ಎಸ್.ಆರ್ ಲೇಔಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ವನಿತಾ ಅತ್ತೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.