ವಿಕಲಚೇತನನ ಆತ್ಮಹತ್ಯೆಗೆ ಕಾರಣವಾಯ್ತು ವೈರಲ್ ವಿಡಿಯೋ -ಇದು ಹೃದಯ ವಿದ್ರಾವಕ ಘಟನೆ!

Mysuru: Police use Abusive words to disability person during Inquire.
Mysuru: Police use Abusive words to disability person during Inquire.

ಆತ ವಿಕಲಚೇತನ. ಆದರೂ ಗಳಿಸಿದ ಚೂರು-ಪಾರು ದುಡ್ಡು ಉಳಿಸಿ ಸಾಲ ಕೊಟ್ಟಿದ್ದ. ಆದರೇ ಸಾಲ ವಾಪಸ ಕೇಳಿದಾಗ ಮಾತ್ರ ಆತನಿಗೆ ಸಿಕ್ಕಿದ್ದು ಹಲ್ಲೆ,ಅವಮಾನ.

ad

ಈ ಅವಮಾನ ತಾಳಲಾರದೇ ಆತ ಆತ್ಮಹತ್ಯೆಗೆ ಯತ್ನಿಸಿದ್ದು, ಇದ್ದೊಬ್ಬ ಮಗನ ದುಸ್ಥಿತಿ ಕಂಡು ಹೆತ್ತವರು ಕಣ್ಣೀರಿಡುತ್ತಿದ್ದಾರೆ.
ಮೈಸೂರು ಜಿಲ್ಲೆ ಕೆ.ಆರ್.ನಗರ ಸಾಲಿಗ್ರಾಮ ಗ್ರಾಮದ ವಿಕಲಚೇತನ ಯುವಕ ಧನಂಜಯ್ ಅಲ್ಲಿಯೇ ಗುಜ್ರಿ ಅಂಗಡಿ ನಡೆಸುತ್ತಿದ್ದ ವ್ಯಕ್ತಿಯೊರ್ವನಿಗೆ 40 ಸಾವಿರ ರೂಪಾಯಿ ಸಾಲ ಕೊಟ್ಟಿದ್ದ. ಆದರೇ ಸಾಲ ವಾಪಸ ಕೇಳಿದ್ದಕ್ಕೆ ಆ ವ್ಯಕ್ತಿ ಧನಂಜಯ್ ಮೇಲೆಯೇ ಹಲ್ಲೆ ಮಾಡಿದ್ದು, ಆತ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾನೆ. ಪೊಲೀಸರು ಕೂಡ ಧನಂಜಯ್ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ.ಇನ್ನು ಪೊಲೀಸರು ಧನಂಜಯ್ ವಿಚಾರಣೆ ನಡೆಸುತ್ತಿವುದನ್ನು ಗುಜ್ರಿ ಅಂಗಡಿ ಮಾಲೀಕ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಿಗೆ ಹರಿಬಿಟ್ಟಿದ್ದ ಎನ್ನಲಾಗಿದೆ.

 ಇದರಿಂದ ಮನನೊಂದ ಧನಂಜಯ್, ಮರ್ಯಾದೆಗೆ ಅಂಜಿ ವಿಷ ಸೇಬಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆತ್ಮಹತ್ಯೆಗೆ ಯತ್ನಿಸಿದ ಧನಂಜಯ್ ಸ್ಥಿತಿ ಗಂಭೀರವಾಗಿದ್ದು, ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇನ್ನು ಧನಂಜಯ್ ಮೇಲೆ ನಡೆದಿರುವ ದೌರ್ಜನ್ಯಕ್ಕೆ ಆತನ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದರು. ಪೊಲೀಸರು ವಿಚಾರಣೆ ವೇಳೆ ಯಾಕೆ ವಿಡಿಯೋ ರೆಕಾರ್ಡ್​ ಮಾಡಿದರು? ಈ ವಿಡಿಯೋ ಸಾಮಾಜಿಕ ಜಾಲತಾಣ ತಲುಪಿದ್ದು ಹೇಗೆ ಎಂದು ಧನಂಜಯ್ ತಾಯಿ ರಾಣಿ ಪ್ರಶ್ನಿಸಿದ್ದಾರೆ. ಅಲ್ಲದೇ ನನ್ನ ಮಗನ ಆತ್ಮಹತ್ಯೆಗೆ ಪೊಲೀಸರು ಹಾಗೂ ಸಾಲ ಪಡೆದ ಗುಜ್ರಿ ಅಂಗಡಿ ಮಾಲೀಕನೇ ಕಾರಣ ಎಂದು ಆರೋಪಿಸಿದ್ದಾರೆ. ಒಟ್ಟಿನಲ್ಲಿ ಸಾಲ ಕೊಟ್ಟಿದ್ದೇ ವಿಕಲಚೇತನನ ಆತ್ಮಹತ್ಯೆಗೆ ಕಾರಣವಾಗಿದ್ದು, ಮಾತ್ರ ದುರಂತವೇ ಸರಿ.