ಕೊನೆಗೂ ಪತ್ತೆಯಾಯಿತು ಆರ್​ಎಕ್ಸ್​ ಮಂಜನ ದೇಹ- ರುಂಡವಿಟ್ಟುಕೊಂಡು 15 ದಿನದಿಂದ ಬಾಡಿ ಹುಡುಕಾಡಿದ್ದ ಪೊಲೀಸರು!

Nelamangala: Jack alias Aurex's Without Skull, body Found.
Nelamangala: Jack alias Aurex's Without Skull, body Found.

ಹಣಕಾಸು ವಿಚಾರಕ್ಕೆ ಹತ್ಯೆಯಾಗಿದ್ದ ನೆಲಮಂಗಲದ ಆರ್​ಎಕ್ಸ್​ ಮಂಜುನ ರುಂಡವಿಲ್ಲದ ಬಾಡಿ ಕೊನೆಗೂ ಕೆಂಗೇರಿ ಮೋರಿಯಲ್ಲಿ ಪತ್ತೆಯಾಗಿದ್ದು, ಪೊಲೀಸರು ನಿಟ್ಟುಸಿರು ಬಿಟ್ಟಿದ್ದಾರೆ.

ad 

15 ದಿನಗಳಿಂದ ರುಂಡವಿಟ್ಟುಕೊಂಡು ಪೂರ್ತಿ ದೇಹಕ್ಕಾಗಿ ಪೊಲೀಸರು ಇನ್ನಿಲ್ಲದಂತೆ ಹುಡುಕಾಟ ನಡೆಸಿದ್ದರು.
ನೆಲಮಂಗಲದಲ್ಲಿ ಜಮೀನು ಹೊಂದಿದ್ದ ಆರ್​ಎಕ್ಸ್​ ಮಂಜ ಆ ಜಮೀನನ್ನು ಶಂಶುದ್ದೀನ್ ಮತ್ತು ಸೈಯದ್​ ಎಂಬುವವರಿಗೆ ಬಾಡಿಗೆ ನೀಡಿದ್ದ. ಆದರೇ ಆ ಬಾಡಿಗೆ ವಿಚಾರದಲ್ಲಿ ಶಂಶುದ್ದೀನ್ ಹಾಗೂ ಮಂಜನಿಗೆ ಗಲಾಟೆಯಾಗಿತ್ತು. ಇದೇ ಕಾರಣಕ್ಕೆ ಶಂಶುದ್ದೀನ್ ಹಾಗೂ ಸೈಯದ್​ ಮಂಜನನ್ನು ಅವನದೇ ಜಮೀನಿನಲ್ಲಿ ಹತ್ಯೆ ಮಾಡಿ ಗೌಡೌನ್​ನಲ್ಲಿ ಮುಚ್ಚಿಟ್ಟಿದ್ದರು. ಶಂಕೆ ಮೇರೆಗೆ ಆರೋಪಿತರಾದ ಶಂಶುದ್ದೀನ್ ಹಾಗೂ ಸೈಯ್ಯದ್​ ಬಂಧಿಸಿದ ಬಳಿಕ ಗೌಡೌನ್​ನಲ್ಲಿ ಮಂಜನ ತಲೆ ಪತ್ತೆಯಾಗಿತ್ತು.

 

ತಲೆ ವಶಪಡಿಸಿಕೊಂಡು ಉಳಿದ ದೇಹಕ್ಕಾಗಿ ಪೊಲೀಸರು ಕಳೆದ 15 ದಿನಗಳಿಂದ ಹುಡುಕಾಟ ನಡೆಸಿದ್ದರು. ಇದೀಗ ನಿನ್ನೆ ಸಂಜೆ ವೇಳೆ ಕೆಂಗೇರಿ ಮೋರಿಯಲ್ಲಿ ಆರ್​ಎಕ್ಸ್​ ಮಂಜನ ದೇಹ ಪತ್ತೆಯಾಗಿದೆ. ಈ ಸಂಬಂಧ ನೆಲಮಂಗಲ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಮುಂದುವರೆದಿದೆ.